/newsfirstlive-kannada/media/post_attachments/wp-content/uploads/2025/05/hbl-cricket5.jpg)
ಭಾರತದಲ್ಲಿ ಅತೀ ಹೆಚ್ಚು ಜನಪ್ರಿಯ ಹೊಂದಿರುವ ಕ್ರೀಡೆ ಅಂದ್ರೆ ಅದು ಕ್ರಿಕೆಟ್. ಇಲ್ಲಿ ಗಲ್ಲಿ ಗಲ್ಲಿಗಳಲ್ಲೂ ಕ್ರಿಕೆಟ್ ಕ್ರೇಜ್ ಹೆಚ್ಚಾಗಿಯೇ ಇರುತ್ತೆ. ಅದೇ ರೀತಿ ಹುಬ್ಬಳ್ಳಿಯಲ್ಲೂ ಕ್ರಿಕೆಟ್ ಹುಚ್ಚು ಕಡಿಮೆ ಇಲ್ಲ. ಇದೇ ಕಾರಣದಿಂದ ನಿಮ್ಮ ನ್ಯೂಸ್ ಫಸ್ಟ್ ಈಗ ಹುಬ್ಬಳ್ಳಿಯಲ್ಲಿ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಿದ್ದು, ಇಂದಿನಿಂದ ಚಾಲನೆ ಸಿಗಲಿದೆ.
ಇದನ್ನೂ ಓದಿ: ಇವತ್ತೇ SSLC ಫಲಿತಾಂಶ ಪ್ರಕಟ; ಮಕ್ಕಳೇ ನಿಮ್ಮ ರಿಸಲ್ಟ್ ನೋಡೋದು ಹೇಗೆ..?
ಗಂಡುಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ಇಂದಿನಿಂದ ಕ್ರಿಕೆಟ್ ಹಬ್ಬ. ಇವತ್ತಿನಿಂದ 3 ದಿನಗಳ ಕಾಲ ಹುಬ್ಬಳ್ಳಿಯಲ್ಲಿ ಬ್ಯಾಟು, ಬಾಲ್‌ನದ್ದೇ ಸದ್ದು. ಯಾಕಂದ್ರೆ ನಿಮ್ಮ ನ್ಯೂಸ್‌ಫಸ್ಟ್ ವಾಹಿನಿ ಆಯೋಜನೆ ಮಾಡಿರೋ ಕ್ರಿಕೆಟ್ ಕಪ್ ಆರಂಭವಾಗ್ತಿದೆ. ಇದಕ್ಕಾಗಿ ಶಿವಾನಂದ ಗುಂಜಾಳ ಸ್ಪೋರ್ಟ್ಸ್ ಕ್ಲಬ್ನ ಬಿಡಿಕೆ ಗ್ರೌಂಡ್ಸ್ ಸಜ್ಜಾಗಿದೆ.
ಇದು ಶ್ರೀ ರಾಜೇಶ್ವರಿ ಪ್ರಾಪರ್ಟೀಸ್ ಪ್ರೆಸೆಂಟ್ಸ್ ನ್ಯೂಸ್‌ಫಸ್ಟ್ ಕ್ರಿಕೆಟ್ ಕಪ್. ಸಪೋರ್ಟೆಡ್ ಬೈ ಸಂತೋಷ್ ಲಾಡ್ ಫೌಂಡೇಶನ್, ಕೆಜಿಪಿ ಗ್ರೂಪ್ ಮತ್ತು ಧಾರವಾಡ್ ರೆಸಿಡೆನ್ಸಿ. ಈ ಪಂದ್ಯಾವಳಿಗೆ ಧಾರವಾಡ ಜಿಲ್ಲಾ ಉಸ್ತುವಾರಿ ಹಾಗೂ ಕಾರ್ಮಿಕ ಸಚಿವ ಸಂತೋಷ ಲಾಡ್ ಚಾಲನೆ ನೀಡಲಿದ್ದಾರೆ.
ನ್ಯೂಸ್ ಫಸ್ಟ್ ಕ್ರಿಕೆಟ್ ಕಪ್ ಟೂರ್ನಿಯಲ್ಲಿ ಧಾರವಾಡ ಜಿಲ್ಲೆಯ ಒಟ್ಟು 16 ತಂಡಗಳು ಭಾಗವಹಿಸಲಿವೆ. ನ್ಯೂಸ್‌ಫಸ್ಟ್ ಕಪ್ ವಿಜೇತರಿಗೆ ಭರ್ಜರಿ ಬಹುಮಾನ ಸಿಗಲಿದೆ. ಏಪ್ರಿಲ್ 29ರಂದು ಹುಬ್ಬಳ್ಳಿಯ ಹೋಟೆಲ್ ವುಡ್ಲ್ಯಾಂಡ್ಸ್ನಲ್ಲಿ ನ್ಯೂಸ್ ಫಸ್ಟ್ ಕ್ರಿಕೆಟ್ ಕಪ್ ಟ್ರೋಫಿ ಅನಾವರಣ ಮಾಡಲಾಗಿತ್ತು.
ಫೈನಲ್ನಲ್ಲಿ ಗೆದ್ದ ತಂಡಕ್ಕೆ 2 ಲಕ್ಷ ರೂಪಾಯಿ ನಗದು ಬಹುಮಾನ ಮತ್ತು ಟ್ರೋಫಿ ಸಿಗಲಿದೆ. ಇನ್ನು, ರನ್ನರ್ ಅಪ್ ತಂಡಕ್ಕೆ 1 ಲಕ್ಷ ರೂಪಾಯಿ ನಗದು ಬಹುಮಾನ ಮತ್ತು ಟ್ರೋಫಿ ನೀಡಲಾಗುವುದು. ಪ್ರತಿ ಪಂದ್ಯಕ್ಕೂ ಪಂದ್ಯ ಶ್ರೇಷ್ಠ ಪ್ರಶಸ್ತಿ, ಬೆಸ್ಟ್ ಬ್ಯಾಟ್ಸ್ಮನ್ ಪ್ರಶಸ್ತಿ ಮತ್ತು ಅತ್ಯುತಮ ಬೌಲಿಂಗ್ ಪ್ರಶಸ್ತಿ ಇರಲಿದೆ.
ಇನ್ನು ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಆಟಗಾರನಿಗೆ ಪ್ಲೇಯರ್ ಆಫ್ದ ಸೀರಿಸ್ ಪ್ರಶಸ್ತಿ ಕೂಡ ನೀಡಲಾಗುವುದು. ಒಟ್ಟಾರೆಯಾಗಿ ಇಂದಿನಿಂದ ನ್ಯೂಸ್‌ಫಸ್ಟ್ ಕ್ರಿಕೆಟ್ ಕಪ್ ಟೂರ್ನಿಮೆಂಟ್ ನಡೆಯಲಿದ್ದು, ಅವಳಿ ನಗರದ ಜನತೆಗಂತೂ ಮೂರು ದಿನಗಳ ಕಾಲ ಕ್ರಿಕೆಟ್ ರಸದೌತಣ ಸಿಗೋದಂತೂ ಪಕ್ಕಾ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್‌ಫಸ್ಟ್ ಚಾನೆಲ್ ಲಭ್ಯ