/newsfirstlive-kannada/media/post_attachments/wp-content/uploads/2025/05/News-First-Cricket-Tournament-2.jpg)
ಹುಬ್ಬಳ್ಳಿಯಲ್ಲಿ ಮೂರು ದಿನಗಳ ಕಾಲ ಆಯೋಜಿಸಿದ್ದ ನ್ಯೂಸ್ ಫಸ್ಟ್ ಕ್ರಿಕೆಟ್ ಕಪ್ ಟೂರ್ನಮೆಂಟ್‌ಗೆ ಅದ್ಧೂರಿ ತೆರೆ ಬಿದ್ದಿದೆ. ಸಾಕಷ್ಟು ಜಿದ್ದಾಜಿದ್ದಿನಿಂದ ಕೂಡಿದ್ದ ಸೆಮಿಫೈನಲ್, ಫೈನಲ್ ಪಂದ್ಯಗಳು ರೋಚಕವಾಗಿ ನಡೆದಿವೆ. ಫೈನಲ್‌ನಲ್ಲಿ ಪ್ರಬಲ ತಂಡಗಳು ಸೆಣಸಾಡಿ ಕ್ರೀಡಾಭಿಮಾನಿಗಳಿಗೆ ಮನರಂಜನೆಯ ರಸದೌತಣ ನೀಡಿವೆ.
ಹುಬ್ಬಳ್ಳಿಯ ನ್ಯೂಸ್ ಫಸ್ಟ್ ಕ್ರಿಕೆಟ್ ಹಬ್ಬಕ್ಕೆ ಅದ್ಧೂರಿ ತೆರೆಬಿದ್ದಿದೆ. ನ್ಯೂಸ್‌ಫಸ್ಟ್ ಕ್ರಿಕೆಟ್ ಕಪ್‌ನ ಕೊನೆಯ ದಿನವಾದ ಇಂದು ಜಿದ್ದಾಜಿದ್ದಿನ ಪಂದ್ಯಕ್ಕೆ ಗಂಡು ಮೆಟ್ಟಿದ ನಾಡು ಸಾಕ್ಷಿಯಾಗಿತ್ತು.
ಹುಬ್ಬಳ್ಳಿಯ ಶಿವಾನಂದ ಗುಂಜಾಳ ಸ್ಪೋರ್ಟ್ಸ್ ಕ್ಲಬ್‌ನ ಬಿಡಿಕೆ ಗ್ರೌಂಡ್ಸ್‌ನಲ್ಲಿ ಸತತ ಮೂರು ದಿನಗಳ ಕಾಲ ರೋಮಾಂಚನಕಾರಿ ಕ್ರಿಕೆಟ್ ಪಂದ್ಯಗಳು ನಡೆದವು. ಹುಬ್ಬಳ್ಳಿ-ಧಾರವಾಡದ ಪ್ರತಿಷ್ಠಿತ ಶ್ರೀ ರಾಜೇಶ್ವರಿ ಪ್ರಾಪರ್ಟಿಸ್ ಅವರ ಪ್ರಾಯೋಜಕತ್ವ, ಸಂತೋಷ್ ಲಾಡ್ ಫೌಂಡೇಷನ್, ಕೆಜಿಪಿ ಗ್ರೂಪ್ , ಧಾರವಾಡ ರೆಸಿಡೆನ್ಸಿ ಸಹಕಾರದಲ್ಲಿ ನ್ಯೂಸ್ ಫಸ್ಟ್ ಕ್ರಿಕೆಟ್ ಟೂರ್ನಮೆಂಟ್‌ಗೆ ಕ್ರಿಕೆಟ್ ಟೂರ್ನಮೆಂಟ್ ಆಯೋಜನೆ ಮಾಡಲಾಗಿತ್ತು.
ಇದನ್ನೂ ಓದಿ: 6, 6, 6, 6, 6, 6.. ಧೂಳೆಬ್ಬಿಸಿದ ರಿಯಾನ್ ಪರಾಗ್; IPL ಇತಿಹಾಸದಲ್ಲೇ ಹೊಸ ದಾಖಲೆ!
ನ್ಯೂಸ್ ಫಸ್ಟ್ ಕ್ರಿಕೆಟ್ ಕಪ್‌ನ ಕೊನೆಯ ದಿನವಾದ ಇಂದು ಮೊದಲ ಸೆಮಿಫೈನಲ್‌ನಲ್ಲಿ ಧಾರವಾಡ ಕೇಸರಿ vs ಹುಬ್ಬಳ್ಳಿಯ ಹೆಸ್ಕಾಂ ತಂಡ ಬಲುರೋಚಕ ಪಂದ್ಯ ಜರುಗಿತು. ಕೊನೆ ಗಳಿಗೆಯಲ್ಲಿ ಧಾರವಾಡ ಕೇಸರಿ ಭರ್ಜರಿ ಜಯಗಳಿಸಿ ಫೈನಲ್ ಪ್ರವೇಶವನ್ನ ಖಚಿತಪಡಿಸಿಕೊಂಡ ಮೊದಲ ಪಂದ್ಯವಾಗಿತ್ತು. ಇನ್ನು ಎರಡನೇ ಸೆಮಿಫೈನಲ್‌ನಲ್ಲಿ ಅಲ್ತಾಪ್ ಕಿತ್ತೂರು ಹಾಗೂ ಬ್ಲ್ಯೂ ಡೈಮಂಡ್ಸ್ ತಂಡಗಳು ಸೆಣಸಾಟ ನಡೆಸಿದವು. ಕೊನೆಗೆ ಅಲ್ತಾಪ್ ಕಿತ್ತೂರು ತಂಡ ನಿರೀಕ್ಷೆಯಂತೆ ಬ್ಲ್ಯೂ ಡೈಮಂಡ್ಸ್ ತಂಡವನ್ನ ಪರಾಭವಗೊಳಿಸಿ ಫೈನಲ್ ಪ್ರವೇಶಿಸಿತ್ತು.
ಫೈನಲ್ ಪ್ರವೇಶ ಮಾಡಿದ್ದ ಧಾರವಾಡ ಕೇಸರಿ ಹಾಗೂ ಅಲ್ತಾಪ್ ಕಿತ್ತೂರು ತಂಡ ಬಲು ರೋಮಾಂಚಕಾರಿ ಆಟವಾಗಿತ್ತು. ಮೊದಲು ಟಾಸ್ ಗೆದ್ದ ಅಲ್ತಾಪ್ ಕಿತ್ತೂರು ತಂಡ ಬೌಲಿಂಗ್ ಆಯ್ಕೆ ಮಾಡಿತು. ಮೊದಲು ಬ್ಯಾಟ್ ಮಾಡಿದ ಧಾರವಾಡ ಕೇಸರಿ ತಂಡ 10 ಓವರ್ ಗಳಲ್ಲಿ 104 ರನ್ ಗಳ ಬೃಹತ್ ಮೊತ್ತದ ರನ್ ಕಲೆ ಹಾಕಿದರು. ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್‌ಗೆ ಇಳಿದ ಅಲ್ತಾಪ್ ಕಿತ್ತೂರು ತಂಡ 8 ಓವರ್‌ಗಳಿಗೆ 9 ವಿಕೆಟ್ ಗಳನ್ನ ಕಳೆದುಕೊಂಡು ಕೇವಲ 65ರನ್ ಗಳನ್ನ ಗಳಿಸಲಷ್ಟೇ ಶಕ್ತವಾಗಿತ್ತು. ಕೊನೆಗೆ 10 ಓವರ್ ಮುಗಿಯವಷ್ಟರಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡ ಅಲ್ತಾಪ್ ತಂಡ ಸೋಲನ್ನ ಒಪ್ಪಿಕೊಳ್ತು. ಧಾರವಾಡ ಕೇಸರಿ ತಂಡ ಅಭೂತಪೂರ್ವ ಗೆಲುವು ಸಾಧಿಸುವ ಮೂಲಕ ನ್ಯೂಸ್ ಫಸ್ಟ್ ಕ್ರಿಕೆಟ್ ಕಪ್‌ನ ಮೊದಲನೇ ಬಹುಮಾನ ಪಡೆದ ಮೊದಲ ತಂಡವಾಗಿ ಇತಿಹಾಸ ನಿರ್ಮಿಸಿತು.
ಫೈನಲ್ ಪಂದ್ಯ ಮುಗಿದ ನಂತರ ಪಂದ್ಯ ನಡೆದ ಶಿವಾನಂದ ಗುಂಜಾಳ ಬಿಡಿಕೆ ಮೈದಾನದಲ್ಲಿಯೇ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಜರುಗಿತು. ಈ ವೇಳೆ ನ್ಯೂಸ್ ಫಸ್ಟ್ ಸಿಇಓ ಹಾಗೂ ಎಂ.ಡಿ. ರವಿಕುಮಾರ್ ಎಸ್. ಹಾಗೂ ಶ್ರೀ ರಾಜೇಶ್ವರಿ ಪ್ರಾಪರ್ಟಿಸ್ ಡೆವಲಪರ್ಸ್‌ನ ಎಮ್ ಡಿ ವಿವೇಕ್ ಮೋಕಾಶಿ, ಕೆಜಿಪಿ ಫೌಂಡೇಷನ್ ಎಂ.ಡಿ ಶ್ರೀಗಂಧ ಸೇಠ್, ಕರ್ನಾಟಕ ರಣಜಿ ತಂಡದ ಮಾಜಿ ಆಟಗಾರ ಸೋಮಶೇಖರ ಶಿರಗುಪ್ಪಿ, ಶಿವಾನಂದ ಗುಂಜಾಳ ಕ್ರಿಕೆಟ್ ಕ್ಲಬ್‌ನ ಮಾಲೀಕರಾದ ಶಿವಾನಂದ ಗುಂಜಾಳ ಭಾಗಿಯಾಗಿದ್ದರು.
ಧಾರವಾಡ ಕೇಸರಿ ತಂಡಕ್ಕೆ ಪ್ರಥಮ ಬಹುಮಾನದ ಟ್ರೋಫಿ ಹಾಗೂ ಎರಡು ಲಕ್ಷ ರೂಪಾಯಿ ಚೆಕ್ ಅನ್ನು ವಿತರಿಸಿದ್ರು. ರನ್ನರ್ ಅಪ್ ಆದ ಅಲ್ತಾಪ್ ಕಿತ್ತೂರು ತಂಡಕ್ಕೆ 1 ಲಕ್ಷ ರೂ ಬಹುಮಾನ ವಿತರಣೆ ಮಾಡಿದರು. ಜೊತೆಗೆ ಪಂದ್ಯ ಶ್ರೇಷ್ಠ ಸರಣಿ ಶ್ರೇಷ್ಠ ಬೆಸ್ಟ್ ಬ್ಯಾಟ್ಸ್ ಮನ್ ಬೆಸ್ಟ್ ಬೌಲರ್ ಗೂ ಟ್ರೋಫಿ ವಿತರಣೆ ಮಾಡಿದರು.
ನ್ಯೂಸ್‌ಫಸ್ಟ್‌ನಿಂದ ನಡೆದ ಕ್ರಿಕೆಟ್ ಕಪ್ ಹೊಸ ಪ್ರಯೋಗ ಹುಬ್ಬಳ್ಳಿ ಜನರ ಮನೆ ಮಾತಾಗಿದೆ. ಮೂರು ದಿನಗಳ ಕಾಲ ನಡೆದ ಟೂರ್ನಮೆಂಟ್‌ಗೆ ಯಶಸ್ವಿ ಮತ್ತು ಅದ್ಧೂರಿ ತೆರೆಬಿದ್ದಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ