ನ್ಯೂಸ್ ಫಸ್ಟ್ ಇಂಪ್ಯಾಕ್ಟ್‌.. ರೈತನ ಕ್ಷಮೆಯಾಚಿಸಿದ GT ಮಾಲ್; ನಿನ್ನೆ ಅವಮಾನ, ಇಂದು ಹಾರ ಹಾಕಿ ಸನ್ಮಾನ

author-image
admin
Updated On
ಪಂಚೆ ಅನ್ನೋ ಹೆಸರು ಹುಟ್ಟಿಕೊಂಡಿದ್ದು ಹೇಗೆ? ಪವರ್​​ಫುಲ್​​​ ಪಂಚೆ ಇತಿಹಾಸದ ಬಗ್ಗೆ ನಿಮಗೆಷ್ಟು ಗೊತ್ತು?
Advertisment
  • ನಿನ್ನೆ ಪಂಚೆಯಲ್ಲಿ ಬಂದ ರೈತನನ್ನು ಒಳ ಬಿಡದೆ ಅವಮಾನ
  • ನ್ಯೂಸ್ ಫಸ್ಟ್ ವರದಿಯ ಬೆನ್ನಲ್ಲೇ ಎಚ್ಚೆತ್ತ ಮಾಲ್ ಉಸ್ತುವಾರಿ
  • ಅವಮಾನ ಮಾಡಿದ ಮಾಲ್‌ ಸೆಕ್ಯೂರಿಟಿ ಕೆಲಸದಿಂದ ವಜಾ

ಬೆಂಗಳೂರು: ಪಂಚೆಯಲ್ಲಿ ಬಂದ ರೈತನನ್ನು ಒಳ ಬಿಡದೆ ಅವಮಾನ ಮಾಡಿದ GT ಮಾಲ್​​​ ಸಿಬ್ಬಂದಿ ಕ್ಷಮೆಯಾಚಿಸಿದ್ದಾರೆ. ನಿನ್ನೆ ಅನ್ನದಾತನಿಗೆ ಅವಮಾನ ಮಾಡಿದ್ದಕ್ಕೆ ಇಂದು ಹಾರ ಹಾಕಿ ಸನ್ಮಾನ ಮಾಡಲಾಗಿದೆ. ನಿನ್ನೆ ರಾತ್ರಿ GT ಮಾಲ್ ಸಿಬ್ಬಂದಿ ರೈತನಿಗೆ ಅವಮಾನ ಮಾಡಿದ ಸುದ್ದಿಯನ್ನ ನ್ಯೂಸ್ ಫಸ್ಟ್ ವರದಿ ಮಾಡಿದ್ದು, ಬಿಗ್ ಇಂಪ್ಯಾಕ್ಟ್ ಆಗಿದೆ.

publive-image

ನಿನ್ನೆ ಪಂಚೆ ಉಟ್ಟು ಬಂದಿದ್ದ ರೈತನಿಗೆ ಅವಮಾನಿಸಿದ್ದ GT ಮಾಲ್​ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಕನ್ನಡ ಪರ ಸಂಘಟನೆಗಳ ಹೋರಾಟಗಾರರು ಪಂಚೆ ಧರಿಸಿ ಬಂದ ರೈತನಿಗೆ ಅವಮಾನ ಮಾಡಿದ್ದಕ್ಕೆ ಪ್ರತಿಭಟನೆ ನಡೆಸಿದ್ದರು. ಬಿಗ್ ಬಾಸ್ ಸ್ಪರ್ಧಿ ರೂಪೇಶ್ ರಾಜಣ್ಣ ಅವರ ನೇತೃತ್ವದಲ್ಲಿ ಕನ್ನಡ ಪರ ಹೋರಾಟಗಾರರು ಮಾಲ್ ಮುಂದೆ ಪ್ರತಿಭಟನೆ ನಡೆಸಿ ರೈತರಿಗೆ ಕ್ಷಮೆ ಕೇಳುವಂತೆ ಧರಣಿ ನಡೆಸಿದ್ದರು. ಮನುಷ್ಯತ್ವ ಮರೆತ ಮಾಲ್ ಸಿಬ್ಬಂದಿ ವಿರುದ್ಧ ಧಿಕ್ಕಾರ ಕೂಗಿದ್ದರು.

publive-image

ನಿನ್ನೆ ಮಾಲ್ ಒಳಗೆ ಬಿಡದೆ ರೈತರಿಗೆ ಅವಮಾನ ಮಾಡಿದ ಸೆಕ್ಯೂರಿಟಿಯನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಜಿಟಿ ಮಾಲ್ ಉಸ್ತುವಾರಿ ಕೆಲಸದಿಂದ ಆತನನ್ನು ತೆಗೆದು ಹಾಕಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ನ್ಯೂಸ್ ಫಸ್ಟ್‌ಗೆ ಪ್ರತಿಕ್ರಿಯೆ ನೀಡಿರುವ ಜಿಟಿ ಮಾಲ್ ಉಸ್ತುವಾರಿ ಸುರೇಶ್ ಅವರು, ಅಚಾತುರ್ಯದಿಂದ ಈ ಘಟನೆ ನಡೆದಿದೆ. ನಾವೆಲ್ಲಾ ರೈತರ ಮಕ್ಕಳು. ಸದ್ಯ ಸೆಕ್ಯೂರಿಟಿಯನ್ನು ಕೆಲಸದಿಂದ ತೆಗೆದು ಹಾಕಿದ್ದೇನೆ. ರಾಜ್ಯದ ರೈತ ಸಂಘಟನೆಗೆ ನ್ಯೂಸ್ ಫಸ್ಟ್ ಮೂಲಕ ಕ್ಷಮೆ ಕೇಳ್ತೇನೆ ಎಂದಿದ್ದಾರೆ.

ಇದನ್ನೂ ಓದಿ: ಪಂಚೆ ಧರಿಸಿ ಬಂದ ರೈತನಿಗೆ GT ಮಾಲ್​ ಅಪಮಾನ! ಧೋತಿ ಧರಿಸಿದ್ದಕ್ಕೆ ಮಾಲ್​ ಪ್ರವೇಶ ನಿರ್ಬಂಧ!

ಇನ್ನು, ಇಂದು ಮತ್ತೆ ಜಿಟಿ ಮಾಲ್​ಗೆ ಎಂಟ್ರಿ ಕೊಟ್ಟಿದ್ದ ರೈತ ಫಕೀರಪ್ಪ ಅವರಿಗೆ ಜಿಟಿ ಮಾಲ್ ಸಿಬ್ಬಂದಿ ಹೂವಿನ ಹಾರ ಹಾಕಿ​ ಸನ್ಮಾನ ಮಾಡಿದೆ. ರೈತ ಫಕೀರಪ್ಪ ಬಳಿ ಜಿಟಿ ಮಾಲ್​ನ ಸಿಬ್ಬಂದಿ ಕ್ಷಮೆಯಾಚಿಸಿದ್ದಾರೆ. ಮಾಲ್‌ನಲ್ಲಿ ರೈತನಿಗೆ ಆದ ಅವಮಾನದ ಬಗ್ಗೆ ಮೊದಲು ನ್ಯೂಸ್ ಫಸ್ಟ್ ವರದಿ ಮಾಡಿತ್ತು. ನ್ಯೂಸ್ ಫಸ್ಟ್ ವರದಿಯ ಬೆನ್ನಲ್ಲೇ ಎಚ್ಚೆತ್ತ ಮಾಲ್ ಉಸ್ತುವಾರಿ ಈ ಕ್ರಮಕ್ಕೆ ಮುಂದಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment