newsfirstkannada.com

ನ್ಯೂಸ್ ಫಸ್ಟ್ ಇಂಪ್ಯಾಕ್ಟ್: ಅಸಹಾಯಕ ರೈತನೆದುರು ಚಿಲ್ಲರೆ ಕಾಸಿಗೆ ಕೈಚಾಚಿದ ಪೊಲೀಸಪ್ಪನ ಕತೆ ಏನಾಯ್ತು ಗೊತ್ತಾ?

Share :

Published February 22, 2024 at 6:30am

  ಕಬ್ಬು ಸುಟ್ಟು ಕರಕಲಾಗಿದ್ದ ಜಮೀನಿನ ಪಂಚನಾಮೆಗೆ ಬಂದಿದ್ದ ಎಎಸ್‌ಐ

  ಒಂದು ಸಾವಿರ ರೂಪಾಯಿಗೆ ರೈತನ ಬಳಿ ಬೇಡಿಕೆ ಇಟ್ಟಿದ್ದ ಎಎಸ್​ಐ

  ನ್ಯೂಸ್​ಫಸ್ಟ್​ ಸುದ್ದಿ ಪ್ರಸಾರ ಮಾಡಿದ ಕೆಲವೇ ಗಂಟೆಗಳಲ್ಲಿ ಎಎಸ್​ಐಗೆ ಶಿಕ್ಷೆ

ಉಪ್ಪು ತಿಂದವರು ನೀರು ಕುಡಿಯಲೇಬೇಕು. ಹೀಗೆ ಉಪ್ಪುತಿಂದ ಬೀದರ್​ನ ಎಎಸ್​ಐ ಒಬ್ರು ಶಿಕ್ಷೆಯ ನೀರು ಕುಡಿದಿದ್ದಾರೆ. ಭ್ರಷ್ಟ ಪೊಲೀಸಪ್ಪನ ಲಂಚಾವತಾರವನ್ನ ನ್ಯೂಸ್​ಫಸ್ಟ್ ಬಿಚ್ಚಿಟ್ಟ ಕೆಲವೇ ಗಂಟೆಗಳಲ್ಲಿ ಎಎಸ್​ಐ ತಲೆದಂಡವಾಗಿದೆ.

ಈ ದೇಶದ ಕತೆ ಇಷ್ಟೆ ಕಣಮ್ಮೋ ಇಲ್ಲಿ ಚಿಂತೆ ಮಾಡಿ ಲಾಭ ಇಲ್ಲಮ್ಮೋ.. ಸದ್ಯ ಯಾರು ಚಿಂತೆ ಮಾಡದೇ ಇರೋ ಲಾಭವನ್ನ ಕೆಲವು ಲಂಚಕೋರ ಅಧಿಕಾರಿಗಳು ಪಡೆಯುತ್ತಿದ್ದಾರೆ. ಇಂತಹದ್ದೇ ಓರ್ವ ಲಂಚಬಾಕ ಅಧಿಕಾರಿಯ ಅವತಾರ ಬೀದರ್​ನಲ್ಲಿ ಬಯಲಾಗಿದೆ.

ಬೀದರ್​ನಲ್ಲಿ ಪೊಲೀಸ್ ಅಧಿಕಾರಿಯ ಲಂಚಾವತಾರ ಬಯಲು

ಬೀದರ್​ನಲ್ಲಿ ಅಸಹಾಯಕ ರೈತನೆದುರು ಚಿಲ್ಲರೆ ಕಾಸಿಗೆ ಈ ಪೊಲೀಸಪ್ಪ ಕೈಚಾಚಿದ್ದ. ಕಬ್ಬು ಸುಟ್ಟು ಕರಕಲಾಗಿದ್ದ ಜಮೀನಿನ ಪಂಚನಾಮೆಗೆ ಬಂದಿದ್ದ ಎಎಸ್‌ಐ ಶೌರಾಜ್, ಈ ಹೀನ ಕೃತ್ಯಕ್ಕೆ ಇಳಿದಿದ್ದ. ಬೀದರ್ ಜಿಲ್ಲೆಯ ಬೇಲೂರು ಗ್ರಾಮದ ರೈತನಿಂದ ಮಾನವೀಯತೆಯೇ ಇಲ್ಲದೇ ಎಎಸ್‌ಐ ಶೌರಾಜ್, ಹಣ ವಸೂಲಿ ಮಾಡಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.

1 ಸಾವಿರ ರೂಪಾಯಿಗೆ ರೈತನ ಬಳಿ ಬೇಡಿಕೆ ಇಟ್ಟಿದ್ದ ಹುಲಸೂರು ಠಾಣೆಯ ASI ಶೌರಾಜ್ ಕಡೆಗೂ 400 ರೂಪಾಯಿ ಪಡೆದೇ ತೀರಿದ್ರು. ಅನ್ನದಾತನ ಬಳಿ ಚಿಲ್ಲರೆ ಹಣಕ್ಕೆ ಕೈ ಚಾಚಿದ ಪೊಲೀಸ್ ಅಧಿಕಾರಿಯ ಕುರಿತು ನ್ಯೂಸ್​ಫಸ್ಟ್​ ಸುದ್ದಿ ಬಿತ್ತರಿಸಿತ್ತು. ಸುದ್ದಿ ಪ್ರಸಾರವಾದ ಕೆಲವೇ ಗಂಟೆಗಳಲ್ಲಿ ಎಎಸ್​ಐ ಉಪ್ಪುತಿಂದ ತಪ್ಪಿಗೆ ಶಿಕ್ಷೆಯ ನೀರು ಕುಡಿದಿದ್ದಾನೆ.

ನ್ಯೂಸ್ ಫಸ್ಟ್ ಇಂಪ್ಯಾಕ್ಟ್.. ಕೆಲವೇ ಗಂಟೆಗಳಲ್ಲಿ ಎಎಸ್‌ಐ ತಲೆದಂಡ

ರೈತನಿಂದ ಚಿಲ್ಲರೆ ಹಣಕ್ಕೆ ಕೈ ಚಾಚಿದ ಪೊಲೀಸ್ ಅಧಿಕಾರಿ ಕುರಿತು ನ್ಯೂಸ್​ಫಸ್ಟ್ ಸುದ್ದಿ ಬಿತ್ತರಿಸಿದ ಕೆಲವೇ ಗಂಟೆಗಳಲ್ಲಿ ಅಮಾನತಿನ ಶಿಕ್ಷೆಯಾಗಿದೆ. ಲಂಚ ಪಡೆದ ತಪ್ಪಿಗೆ ASI ಶೌರಾಜ್​ನನ್ನ ಬೀದರ್​ ಎಸ್‌ಪಿ ಚನ್ನಬಸವಣ್ಣ ಲಂಗೋಟಿ ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ.

ಒಟ್ಟಿನಲ್ಲಿ ಮೊದಲೇ ಅನ್ನದಾತರು ಸಂಕಷ್ಟದಲ್ಲಿದ್ದು, ಬರದಿಂದ ಪರದಾಡ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ರೈತರಿಂದ ಹಣ ಪೀಕುವ ಕೆಲಸವನ್ನ ಭ್ರಷ್ಟ ಅಧಿಕಾರಿಗಳು ಇನ್ನಾದ್ರು ಬಿಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನ್ಯೂಸ್ ಫಸ್ಟ್ ಇಂಪ್ಯಾಕ್ಟ್: ಅಸಹಾಯಕ ರೈತನೆದುರು ಚಿಲ್ಲರೆ ಕಾಸಿಗೆ ಕೈಚಾಚಿದ ಪೊಲೀಸಪ್ಪನ ಕತೆ ಏನಾಯ್ತು ಗೊತ್ತಾ?

https://newsfirstlive.com/wp-content/uploads/2024/02/Bidar.jpg

Load More