/newsfirstlive-kannada/media/post_attachments/wp-content/uploads/2025/04/NF_JNANA_SANGAMA.jpg)
ನ್ಯೂಸ್ಫಸ್ಟ್ ವತಿಯಿಂದ ಕಲಬುರಗಿಯಲ್ಲಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಮೊದಲ ದಿನದ ಜ್ಞಾನ ಸಂಗಮ ಎಜುಕೇಶನ್ ಎಕ್ಸ್ ಪೋಗೆ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ. ಪಿಯುಸಿ ಪಾಸ್ ಆಗಿ ಮುಂದೇನು ಮಾಡೋದು ಅಂತ ಚಿಂತೆ ಮಾಡ್ತಿದ್ದ ನೂರಾರು ವಿದ್ಯಾರ್ಥಿಗಳು ಇವತ್ತಿನ ಎಕ್ಸ್ಪೋಗೆ ಭೇಟಿ ನೀಡಿ ಉತ್ತರ ಪಡೆದುಕೊಂಡಿದ್ದಾರೆ.
ವಿದ್ಯಾರ್ಥಿಗಳ -ತಜ್ಞರ ಸಮಾಗಮ.. ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಮುಖಾಮುಖಿ. ಒಂದೇ ಸೂರಿನಡಿ ಎಲ್ಲಾ ಮಾಹಿತಿ ಪಡೆಯೋ ಸುವರ್ಣಾವಕಾಶ. ಅದುವೇ ನ್ಯೂಸ್ಫಸ್ಟ್ ಆಯೋಜಿಸಿರೋ ಜ್ಞಾನ ಸಂಗಮ.
ಜ್ಞಾನ ಸಂಗಮ ಎಜುಕೇಶನ್ ಎಕ್ಸ್ ಪೋಗೆ ಚಾಲನೆ
ವಿದ್ಯಾರ್ಥಿಗಳಿಗಾಗಿ ನ್ಯೂಸ್ಫಸ್ಟ್ ವತಿಯಿಂದ ಕಲಬುರಗಿಯಲ್ಲಿ ಎರಡು ದಿನಗಳ ಜ್ಞಾನ ಸಂಗಮ ಎಜುಕೇಶನ್ ಎಕ್ಸ್ ಪೋ ಆಯೋಜಿಸಲಾಗಿದೆ. ಕಲಬುರಗಿಯ ಶರಣಬಸವೇಶ್ವರ ರಸ್ತೆಯಲ್ಲಿರುವ ಶ್ರೀ ಖೂಬಾ ಕಲ್ಯಾಣ ಮಂಟಪದಲ್ಲಿ ಇಂದು ಜ್ಞಾನ ಸಂಗಮ ಎಜುಕೇಶನ್ ಎಕ್ಸ್ ಪೋಗೆ ಚಾಲನೆ ನೀಡಲಾಯಿತು. ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನುಮ್, ಪೊಲೀಸ್ ಕಮಿಷನರ್ ಡಾ. ಶರಣಪ್ಪ ಎಸ್.ಡಿ ಹಾಗು ನ್ಯೂಸ್ ಫಸ್ಟ್ ಎಂ.ಡಿ & ಸಿಇಒ ಎಸ್.ರವಿಕುಮಾರ್ ಎಕ್ಸಪೋಗೆ ಚಾಲನೆ ಕೊಟ್ಟರು. ಇದೇ ವೇಳೆ ಪಿಯುಸಿಯಲ್ಲಿ ಱಂಕ್ ಪಡೆದ ವಿದ್ಯಾರ್ಥಿಗಳಿಗೆ ನ್ಯೂಸ್ ಫಸ್ಟ್ನಿಂದ ಪ್ರಶಸ್ತಿ ಮತ್ತು ಸ್ಮರಣಿಕೆ ನೀಡಿ ಸನ್ಮಾನ ಮಾಡಲಾಯಿತು.
‘ಈ ಭಾಗದ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುತ್ತೆ’
ಕಲಬುರಗಿ, ಯಾದಗಿರಿ ಹಾಗೂ ಬೀದರ್ ಈ ಭಾಗದ ಎಲ್ಲ ವಿದ್ಯಾರ್ಥಿಗಳಿಗೆ ಅನುಕೂಲ ಆಗಲೆಂದು ಈ ಎಕ್ಸ್ ಪೋವನ್ನು ಇಲ್ಲಿ ಆಯೋಜನೆ ಮಾಡಲಾಗಿದೆ. ಇಂತಹ ಕಾರ್ಯಕ್ರಮ ಆಯೋಜನೆ ಮಾಡುತ್ತಿರುವುದಕ್ಕೆ ಸಂತಸ ಇದೆ. ಇಲ್ಲಿ ಬಂದಿರುವ ಎಲ್ಲ ವಿದ್ಯಾರ್ಥಿಗಳು ಮುಂದೆ ಉತ್ತಮವಾದ ವಿದ್ಯಾ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುವಂತವರು. ನಿಮಗೆ ಇಲ್ಲಿ ಉಪಯುಕ್ತವಾದ ಮಾಹಿತಿ ಸಿಕ್ಕೇ ಸಿಗುತ್ತದೆ.
ಎಸ್.ರವಿಕುಮಾರ್, ನ್ಯೂಸ್ ಫಸ್ಟ್ ಎಂ.ಡಿ & ಸಿಇಒ
‘ಕೋರ್ಸ್ ಸೆಲೆಕ್ಟ್ಗೆ ಸಹಾಯವಾಗುತ್ತೆ’
ವಿದ್ಯಾರ್ಥಿಗಳು ಈಗ ತುಂಬಾ ಬ್ರೈಟ್ ಇದ್ದಾರೆ. ಆದರೆ ಸ್ಟೂಡೆಂಟ್ಗಳಿಗೆ ಅವಕಾಶಗಳ ಕೊರತೆ ಇದೆ. ಮಾಹಿತಿಗಳು ಸರಿಯಾಗಿ ಸಿಗುತ್ತಿಲ್ಲ. ಹಾಗಾಗಿ ಈ ರೀತಿ ಕಾರ್ಯಕ್ರಮಗಳಿಂದ ಅವರಿಗೆ ಅರಿವು ಬರುತ್ತದೆ. ಯವ್ಯಾವ ಕೋರ್ಸ್ ಆಯ್ಕೆ ಮಾಡಬಹುದು ಎಂದು ವಿದ್ಯಾರ್ಥಿಗಳಿಗೆ ಗೊತ್ತಾಗುತ್ತದೆ. ಸೈನ್ಸ್ ತೆಗೆದುಕೊಂಡರೇ ಪ್ರವೇಶ ಪರೀಕ್ಷೆಗಳು ಏನೇನು ಇರುತ್ತವೆ, ಪದವಿಯಲ್ಲಿ ಯಾವುದು ಉತ್ತಮ ಎಂದು ಮಾಹಿತಿ ಗೊತ್ತಾಗುತ್ತದೆ.
ಫೌಜಿಯಾ ತರನುಮ್, ಕಲಬುರಗಿ ಡಿಸಿ
‘ ಇದೊಂದು ದಾರಿ ದೀಪವಾಗುತ್ತೆ’
ಸೈನ್ಸ್, ಆರ್ಟ್ಸ್, ಕಾಮರ್ಸ್ ಪೂರ್ಣಗೊಳಿಸಿದ ಮೇಲೆ ಮುಂದೆ ಯಾವ ವಿಭಾಗಕ್ಕೆ ಹೋದರೆ ಉತ್ತಮವಾಗಿರುತ್ತದೆ. ಪಿಯುಸಿಯಲ್ಲಿ ನಾವು ಯಾವುದನ್ನೇ ಆಯ್ಕೆ ಮಾಡಿಕೊಂಡರೂ ನಮ್ಮ ಜೀವನದ ದಾರಿ ಯಾವ ರೀತಿ ಮಾಡಿಕೊಳ್ಳಬೇಕು ಎನ್ನುವುದಕ್ಕೆ ಈ ಕಾರ್ಯಕ್ರಮ ದಾರಿ ದೀಪವಾಗಿದೆ.
ಡಾ. ಶರಣಪ್ಪ ಎಸ್.ಡಿ, ಕಮಿಷನರ್
ಒಂದೇ ಸೂರಿನಡಿ ಹಲವು ಮಾಹಿತಿ ಪಡೆದ ಸ್ಟೂಡೆಂಟ್ಸ್
ಎಕ್ಸ್ಪೋದಲ್ಲಿ ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಭಾಗಿಯಾಗಿದ್ದು, ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದಿಂದ ಭವಿಷ್ಯ ರೂಪಿಸಿಕೊಳ್ಳಲು ಸುವರ್ಣಾವಕಾಶ ಸಿಕ್ಕಿದೆ. ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಬಗ್ಗೆ ತಮ್ಮಗಿದ್ದ ಗೊಂದಲ ಮತ್ತು ಪ್ರಶ್ನೆಗಳಿಗೆ ಎಕ್ಸ್ಪೋದಲ್ಲಿ ಉತ್ತರ ಸಿಕ್ಕಿದೆ. ತಜ್ಞರು ಮತ್ತು ಶಿಕ್ಷಣ ಸಂಸ್ಥೆಗಳ ಜೊತೆ ವಿದ್ಯಾರ್ಥಿಗಳು ಮತ್ತು ಪೋಷಕರು ಕೋರ್ಸ್ ಆಯ್ಕೆಯಲ್ಲಿ ತಮಗಿರುವ ಗೊಂದಲಗಳಿಗೆ ಪರಿಹಾರ ಕಂಡುಕೊಂಡಿದ್ದಾರೆ.
ಎಜುಕೇಶನ್ ಎಕ್ಸ್ ಪೋ ಎನ್ನುವುದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನವಾಗಿದೆ. ದ್ವಿತೀಯ ಪಿಯುಸಿ ಆದ ಮೇಲೆ ಮುಂದೇನು ಎನ್ನುವುದಕ್ಕೆ ಇಲ್ಲಿ ಖಂಡಿತ ಉತ್ತರ ಸಿಗುತ್ತದೆ. ಇದು ಉತ್ತಮವಾದ ಕಾರ್ಯಕ್ರಮವಾಗಿದೆ.
ಎಜುಕೇಶನ್ ಎಕ್ಸ್ ಪೋದಲ್ಲಿ ಭಾಗಿಯಾದ ವಿದ್ಯಾರ್ಥಿ
ಇದನ್ನೂ ಓದಿ:ಉದ್ಯೋಗ ಹುಡುಕುತ್ತಿರುವ ಯುವಕ, ಯುವತಿಯರಿಗೆ ಗುಡ್ನ್ಯೂಸ್.. 1,007 ಹುದ್ದೆಗಳು ಖಾಲಿ
ಇನ್ನೂ, ಇವತ್ತು ಎಕ್ಸ್ಪೋದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಗಂಟೆಗೊಮ್ಮೆ ಲಕ್ಕಿಡಿಪ್ನಲ್ಲಿ ವಿಶೇಷ ಬಹುಮಾನ ನೀಡಲಾಗಿದೆ. ಇನ್ನೂ, ಅದೃಷ್ಟಶಾಲಿ ವಿಜೇತರಿಗೆ ಒಂದು ಲ್ಯಾಪ್ಟಾಪ್ ಬಹುಮಾನ ನೀಡಲಾಗುತ್ತಿದೆ. ಇಷ್ಟೇ ಅಲ್ಲ, ಸ್ಥಳದಲ್ಲೇ ಶಿಕ್ಷಣ ಸಂಸ್ಥೆಗಳಿಗೆ ದಾಖಲಾದ ಆಯ್ದ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಕೂಡ ಒದಗಿಸಲಾಗಿದೆ. ಇವತ್ತು, ಮಾತ್ರ ಅಲ್ಲ, ನಾಳೆ ಕೂಡ ನಮ್ಮ ಜ್ಞಾನ ಸಂಗಮ ಎಜುಕೇಶನ್ ಎಕ್ಸ್ ಪೋ ಇರಲ್ಲಿದ್ದು, ಈ ಅವಕಾಶಗಳು ನಾಳೆ ಕೂಡ ಇರಲಿದೆ. ಮತ್ಯಾಕೆ ತಡ ಕಲ್ಯಾಣ ನಾಡಿನ ಎಲ್ಲಾ ವಿದ್ಯಾರ್ಥಿಗಳು, ಪೋಷಕರು ಮಿಸ್ ಮಾಡದೇ ಎಕ್ಸಪೋದಲ್ಲಿ ಪಾಲ್ಗೊಂಡು, ನೀವೂ ಲಾಭ ಪಡೆದುಕೊಳ್ಳಿ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ