newsfirstkannada.com

ಶ್ವಾನ ಹೊತ್ತೊಯ್ದಾತನ ಮನ ಬದಲಿಸಿದ ನ್ಯೂಸ್ ಫಸ್ಟ್ ಸುದ್ದಿ.. ಕೊನೆಗೂ ಅಶ್ವಿನಿ ಕೈ ಸೇರಿದ ಪ್ರೀತಿಯ ‘ಡಂಬೂ’

Share :

Published March 21, 2024 at 9:30am

  ಇದು ನ್ಯೂಸ್ ಫಸ್ಟ್ ವರದಿಯ ಬಿಗ್ ಇಂಪ್ಯಾಕ್ಟ್

  ಸುದ್ದಿ ಪ್ರಸಾರವಾದ ಆ ಕ್ಷಣವೇ ವ್ಯಕ್ತಿಯ ಮನಪರಿವರ್ತನೆ

  ಕೊನೆಗೆ ಹೊತ್ತೊಯ್ದ ಶ್ವಾನವನ್ನ ಮಾಲಕಿಗೆ ರಿಟರ್ನ್ ಮಾಡಿದ ವ್ಯಕ್ತಿ

ಬೆಂಗಳೂರು: ಬಗಲಗುಂಟೆಯಲ್ಲಿ ವಾಸ ಮಾಡುತ್ತಿದ್ದ ಅಶ್ವಿನಿ ಎಂಬವರು ಮುದ್ದಾದ ಶ್ವಾನವನ್ನು ಸಾಕಿದ್ದರು. ಹಾಸದ ದೇವಾಲಯ ಒಂದಕ್ಕೆ ತೆರಳಿ ಬೆಂಗಳೂರಿಗೆ ವಾಪಸ್ ಆಗುತ್ತಿದ್ದ ವೇಳೆ ಅರಸೀಕೆರೆ ಹೈವೇಯಲ್ಲಿ ರೆಸ್ಟ್ ಗೆ ಅಂತಾ ಕಾರ್ ನಿಲ್ಲಿಸಿದ್ದಾರೆ. ಕಾರಿನಿಂದ ಇಳಿದಿದ್ದ ಶ್ವಾನ ಡಂಬೂ ಕ್ಷಣಾರ್ಧದಲ್ಲೇ ಮಿಸ್ಸಿಂಗ್ ಆಗಿತ್ತು.

ಮಾರ್ಚ್ 8ಕ್ಕೆ ಮಿಸ್ಸಿಂಗ್ ಆಗಿದ್ದ ಶ್ವಾನವನ್ನು ಐದಾರು ದಿನ ಅಲ್ಲೇ ಹುಡುಕಿದ್ರೂ ಪತ್ತೆಯಾಗಿರಲಿಲ್ಲ. ಹೀಗಾಗಿ ಅಶ್ವಿನಿ ದಿಕ್ಕು ತೋಚದೆ ನ್ಯೂಸ್​ಫಸ್ಟ್​ ಬಳಿ ಮಾಹಿತಿ ಹಂಚಿಕೊಂಡಿದ್ದರು. ಮಾರ್ಚ್ 14 ರಂದು ಸುದ್ದಿ ಪ್ರಸಾರ ಮಾಡಲಾಗಿತ್ತು.

ಡಂಬೂ ಮಿಸ್ಸಿಂಗ್

ಅತ್ತ ಅಶ್ವಿನಿ ಕುಟುಂಬದವರು ಸಹ ಡಂಬೂ ಮಿಸ್ಸಿಂಗ್​ಗಾಗ್ತಿದ್ದಂಗೆ ಬೇಜಾರಲ್ಲಿದ್ದರು. ಉಪವಾಸಕ್ಕೆ ಜಾರಿದ್ದರು. ಡಂಬೂ ಹುಡುಕಿಕೊಟ್ಟವರಿಗೆ ಬಹುಮಾನ ಕೂಡ ಅಶ್ವಿನಿ ಕುಟುಂಬ ಘೋಷಣೆ ಮಾಡಿದ್ದರು. ಆದರೆ ನ್ಯೂಸ್ ಫಸ್ಟ್ ಸುದ್ದಿ ಬಿತ್ತರಗೊಂಡನ್ನು ನೋಡಿ ಡಂಬೂ ಶ್ವಾನವನ್ನ ಅಶ್ವಿನಿಗೆ ರಿಟರ್ನ್​ ಮಾಡಿದ್ದಾನೆ.

ಯಾರ ಬಳಿ ಇತ್ತು ಶ್ವಾನ?

ವ್ಯಕ್ತಿಯೊಬ್ಬ ಶ್ವಾನವನ್ನ ಮಾರ್ಚ್ 15ರಂದು ಆಟೋ ಡ್ರೈವರ್​ಗೆ ಕೊಟ್ಟಿದ್ದಾನೆ. ಆಟೋ ಡ್ರೈವರ್​ ಮಾರ್ಚ್ 17ರ ತನಕ ಶ್ವಾನವನ್ನು ಇಟ್ಟುಕೊಂಡಿದ್ದನು. ಮಾರ್ಚ್ 18 ರಂದು ಬ್ರೀಡರ್ ಬಳಿ ಶ್ವಾನ ಸೇರಿದೆ. ಮಾರ್ಚ್ 19ರ ನೈಟ್ ಶ್ವಾನ ಸಿಕ್ಕಿರೋದರ ಬಗ್ಗೆ ಮಾಹಿತಿ ಸಿಕ್ಕಿದೆ. ಮಾರ್ಚ್ 20ರಂದು ಡಂಬೂ ಮರಳಿ ಅಶ್ವಿನಿ ಮಡಿಲು ಸೇರಿದೆ.

ಸಿಕ್ಕಿದ್ಹೇಗೆ?

ಸ್ಥಳೀಯರೊಬ್ಬರು ಶ್ವಾನವನ್ನ ಬೈಕ್ ‌ನಲ್ಲಿ ಹೊತ್ತೊಯ್ದದನ್ನ ನೋಡಿದ್ದಾರೆ. ಆದೆ 5-6 ದಿನ ಹುಡುಕಿದ್ರೂ ಶ್ವಾನದ ಸುಳಿವು ಮಾತ್ರ ಸಿಕ್ಕಿರಲಿಲ್ಲ. ಅತ್ತ ಅಶ್ವಿನಿ ಕುಟುಂಬ ಇದರಿಂದ ಕಂಗಾಲಾಗಿ ಶ್ವಾನ ವಾಪಸ್‌ಕೊಡುವಂತೆ ‌ಕಣ್ಣೀರು ಹಾಕಿಕೊಂಡು ಮನವಿ ಮಾಡಿದ್ದರು. ನ್ಯೂಸ್ ಫಸ್ಟ್ ಜೊತೆ ಮಾತನಾಡುವಾಗ ಬಿಕ್ಕಿ ಬಿಕ್ಕಿ ಅತ್ತಿದ್ದರು. ಸುದ್ದಿ ಪ್ರಸಾರವಾಗ್ತಿದ್ದಂಗೆ ಆ ಆಸಾಮಿಯ ಮನಸ್ಸು ಬದಲಾಗಿದೆ.

ವ್ಯಕ್ತಿ ಡಂಬೂವನ್ನ ಹೊತ್ತೊಯ್ದ ಅದೇ ಜಾಗಕ್ಕೆ ಶ್ವಾನವನ್ನ ತಂದಿದ್ದಾನೆ. ಕೊನೆಗೆ ಯಾರೂ ಇಲ್ಲದಿದ್ದಾಗ ಅಲ್ಲಿದ್ದ ಆಟೋ ಡ್ರೈವರ್ ಗೆ ಕೊಟ್ಟಿದ್ದಾನೆ. ಯಾರಾದ್ರೂ ಶ್ವಾನ ಮಿಸ್ಸಿಂಗ್ ಆಗಿದೆ ಎಂದು ಹುಡುಕಿಕೊಂಡು ಬಂದ್ರೆ ಕೊಡಿ ಎಂದು ಹೇಳಿದ್ದಾನೆ.

ಆದರೆ ಆಟೋ ಡ್ರೈವರ್​ಗೆ ಯಾರು ಸಿಗದಿದ್ದಾಗ ಶ್ವಾನವನ್ನ ಮನೆಗೆ ತೆಗೆದುಕೊಂಡು ಹೋಗಿದ್ದಾನೆ. ಬಳಿಕ ಸ್ಥಳೀಯರ ನಂಬರ್ ಪಡೆದುಕೊಂಡು ವಾಟ್ಸಾಪ್ ಗ್ರೂಪ್ ಕ್ರಿಯೇಟ್ ಮಾಡಿದ್ದಾರೆ. ಅದರಲ್ಲಿ ಸ್ಥಳೀಯರೊಬ್ಬರು ಯಾರೋ ಶ್ವಾನದ ಬಗ್ಗೆ ಗ್ರೂಪ್ ನಲ್ಲಿ‌ ಮಾಹಿತಿ ಹಂಚಿಕೊಮಡಿದ್ದಾರೆ. ಇದೀಗ ಶ್ವಾನ ಸಿಕ್ಕಿದ್ದು, ನ್ಯೂಸ್ ಫಶ್ಟ್​ಗೆ ಬಿಗ್​ ಥ್ಯಾಂಕ್ಸ್ ಎಣದು ಮಾಲಕಿ ಅಶ್ವಿನಿ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶ್ವಾನ ಹೊತ್ತೊಯ್ದಾತನ ಮನ ಬದಲಿಸಿದ ನ್ಯೂಸ್ ಫಸ್ಟ್ ಸುದ್ದಿ.. ಕೊನೆಗೂ ಅಶ್ವಿನಿ ಕೈ ಸೇರಿದ ಪ್ರೀತಿಯ ‘ಡಂಬೂ’

https://newsfirstlive.com/wp-content/uploads/2024/03/Dog-1.jpg

Load More