/newsfirstlive-kannada/media/post_attachments/wp-content/uploads/2025/03/HBL-NF-IMPACT.jpg)
ಹುಬ್ಬಳ್ಳಿ-ಧಾರವಾಡದಲ್ಲಿ ರಿಯಲ್ ಎಸ್ಟೇಟ್ ಸಂಸ್ಥೆ ‘ಭವಾನಿ ಪ್ರಾಪರ್ಟೀಸ್’ ವಂಚನೆ ಬಗ್ಗೆ ನ್ಯೂಸ್ಫಸ್ಟ್ ರಹಸ್ಯ ಕಾರ್ಯಾಚರಣೆ ನಡೆಸಿತ್ತು. ವರದಿ ಬೆನ್ನಲ್ಲೇ ಎಚ್ಚೆತ್ತ ನಗರಾಭಿವೃದ್ಧಿ ಪ್ರಾಧಿಕಾರ ರಿಯಲ್ ಎಸ್ಟೇಟ್ ಸಂಸ್ಥೆ ವಿರುದ್ಧ ಕ್ರಮಕ್ಕೆ ಮುಂದಾಗಿದೆ.
ಏನಿದು ಪ್ರಕರಣ..?
ಹುಬ್ಬಳ್ಳಿ-ಧಾರವಾಡದಲ್ಲಿರುವ ಭವಾನಿ ಪ್ರಾಪರ್ಟೀಸ್, ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದನೆ ಇಲ್ಲದೇ ಕುಸುಗಲ್ ಬಳಿಯ 12 ಎಕರೆ ಕೃಷಿ ಜಮೀನು ಸೈಟ್ ಮಾಡಿ ಮಾರಾಟ ಮಾಡುತ್ತಿತ್ತು. ರೈತ ಬಸವನಗೌಡ ಹೆಸರಲ್ಲಿದ್ದ ಕೃಷಿ ಜಮೀನು ಇನ್ನೂ ಮಾರಾಟವಾಗಿರಲಿಲ್ಲ. ಅದು ಕೃಷಿಕರ ಹೆಸರಲ್ಲೇ ಇತ್ತು. ಹೀಗಿದ್ದೂ ಭವಾನಿ ಪ್ರಾಪರ್ಟೀಸ್, ಅಕ್ರಮವಾಗಿ ಜಮೀನಿನಲ್ಲಿ ಲೇಔಟ್ ನಿರ್ಮಾಣದ ಪ್ಲಾನ್ ಹಾಕಿತ್ತು. ಲೇಔಟ್ ನಿರ್ಮಿಸುತ್ತಿದ್ದೇವೆ ಎಂದು ಸಂಸ್ಥೆ ಜನರಿಂದ ಹಣ ಕಟ್ಟಿಸಿಕೊಳ್ಳುತ್ತಿತ್ತು. ಈ ಬಗ್ಗೆ ನ್ಯೂಸ್ಫಸ್ಟ್ ರಹಸ್ಯೆ ಕಾರ್ಯಾಚರಣೆ ಮಾಡಿ ವರದಿ ಬಿತ್ತರಿಸಿತ್ತು. ‘ಮೋಸ ಹೋಗಬೇಡಿ’ ಹೆಸರಲ್ಲಿ ನ್ಯೂಸ್ ಫಸ್ಟ್ ವರದಿ ಮಾಡಿತ್ತು.
ಇದನ್ನೂ ಓದಿ: ಡಿಕೆಶಿ ಔತಣ ಕೂಟಕ್ಕೆ ಬಿಜೆಪಿ ಶಾಸಕರೂ ಬಂದಿದ್ದರು, ಆದರೆ ನಾಲ್ವರು ಸಚಿವರು ಗೈರು..!
[caption id="attachment_115030" align="aligncenter" width="800"]ಸಂತೋಷ್ ಕುಮಾರ್ ಬಿರಾದಾರ ( ಆಯುಕ್ತರು ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ[/caption]
ನ್ಯೂಸ್ಫಸ್ಟ್ ಇಂಪ್ಯಾಕ್ಟ್..!
ವರದಿ ಬೆನ್ನಲ್ಲೇ ರಿಯಲ್ ಎಸ್ಟೇಟ್ ಸಂಸ್ಥೆ ಮೇಲೆ ಕ್ರಮ ತೆಗೆದುಕೊಳ್ಳುವ ಭರವಸೆಯನ್ನು ಹುಬ್ಬಳ್ಳಿಯ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತ ಸಂತೋಷ್ ಬಿರಾದರ್ ಭರವಸೆ ನೀಡಿದ್ದಾರೆ. ನ್ಯೂಸ್ಫಸ್ಟ್ನಿಂದ ಒಳ್ಳೆಯ ಜನಜಾಗೃತಿ ಕಾರ್ಯಕ್ರಮ ಆಗಿದೆ. ನ್ಯೂಸ್ಫಸ್ಟ್ ಕಾರ್ಯಾಚರಣೆಯಿಂದ ಕ್ರಿಮಿನಲ್ ಪ್ರಕರಣ ಬಯಲಿಗೆ ಬಂದಿದೆ. ಕೂಡಲೇ ಈ ಪ್ರಕರಣ ಪರಿಶೀಲಿಸಿ ಕಾನೂನು ರೀತಿಯ ಕ್ರಮ ಕೈಗೊಳ್ತೀವಿ. ಗ್ರಾಹಕರು ಕೂಡ ಈ ಬಗ್ಗೆ ಎಚ್ಚರಿಕೆ ವಹಿಸಬೇಕು. ಯಾವುದೇ ಸಂಸ್ಥೆಗಳು ಯಾಮಾರಿಸಲು ಪ್ರಯತ್ನ ಮಾಡಬಹುದು. ಜಾಗೃತರಾಗಿರಿ. ಡೆವಲ್ಪರ್ಸ್ ಯಾರಿಗೂ ಮೋಸ ಮಾಡಲು ಸಾಧ್ಯವಿಲ್ಲ. ಕಾನೂನು ಪ್ರಕಾರವೇ ನಡೆದುಕೊಳ್ಳಬೇಕು. ಯಾರಿಗೂ ಮೋಸ ಮಾಡಬಾರದು. ಈ ರೀತಿಯ ದೂರುಗಳು ಮತ್ತೆ ಬಂದರೂ ಕೂಡಲೇ ಕ್ರಮ ತೆಗೆದುಕೊಳ್ತೇವೆ ಎಂದಿದ್ದಾರೆ.
[caption id="attachment_115028" align="aligncenter" width="800"]ರೈತನ ಹೆಸರಿನಲ್ಲಿರುವ ಕೃಷಿ ಭೂಮಿ[/caption]
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕೀರ್ ಸನದಿ ಮಾತನಾಡಿ.. ಕಾನೂನು ಮೀರಿ ಯಾರಾದರೂ ಆ ಕೆಲಸ ಮಾಡಿದ್ರೆ ಕೂಡಲೇ ಕ್ರಮ ತೆಗೆದುಕೊಳ್ತೇವೆ. ಅದು ಅಕ್ರಮ ಎಂದು ನಾವು ಅದನ್ನು ಒಡೆದು ಹಾಕ್ತೇವೆ. ನಮ್ಮ ಅನುಮೋದನೆ ಇಲ್ಲದೇ ಯಾವುದೇ ಬೆಳವಣಿಗೆ ನಡೆದರೂ ನಾವು ಅದನ್ನು ಒಡೆದು ಹಾಕ್ತೇವೆ. ಎರಡು ಬಾರಿ ನೋಟಿಸ್ ಕೊಡುತ್ತೇವೆ. ನೋಟಿಸ್ ನಂತರವೂ ತಮ್ಮ ಕೆಲಸ ಮುಂದುವರಿಸಿದ್ರೆ ನಾವು ಸುಮ್ಮನೆ ಕೂರಲ್ಲ ಎಂದಿದ್ದಾರೆ.
ಇದನ್ನೂ ಓದಿ: ಕೊನೆಗೂ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಮೌನ ಮುರಿದ KL ರಾಹುಲ್.. ಇಷ್ಟದ ಸ್ಲಾಟ್ ಯಾವುದು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ