/newsfirstlive-kannada/media/post_attachments/wp-content/uploads/2024/11/BPL-3.jpg)
ಸಿಎಂ ಸಿದ್ದರಾಮಯ್ಯರೇನೋ ನಾವು ಬಡವರ ಕಾರ್ಡ್ ರದ್ದು ಮಾಡಲ್ಲ ಅಂತಿದ್ದಾರೆ. ಆದ್ರೆ ರಾಜ್ಯದಲ್ಲಿ ಹಲವು ಬಡವರ ಪಡಿತರ ಚೀಟಿಗಳು ರದ್ದಾಗಿವೆ. ಇದರಿಂದ ರೇಷನ್ ಅಕ್ಕಿಯನ್ನೇ ನಂಬಿ ಜೀವನ ನಡೆಸ್ತಿದ್ದವರು ಕಂಗಾಲಾಗಿದ್ದಾರೆ. ಸರಿ ಮಾಡಿಸಲು ಕಚೇರಿಯಿಂದ ಕಚೇರಿಗೆ ಅಲೆಯುತ್ತಿದ್ದಾರೆ. ಇದೇ ರೀತಿ ವಿಜಯನಗರದ ಹೊಸಪೇಟೆಯ ಪ್ರಶಾಂತ ನಗರದ ಬಿ.ಟಿ.ಕಾಲೋನಿಯ ಕುಟುಂಬವೊಂದು ಸಂಕಷ್ಟಕ್ಕೆ ಸಿಲುಕಿತ್ತು. ನ್ಯೂಸ್ಫಸ್ಟ್ ವರದಿಗೆ ಅಧಿಕಾರಿಗಳು ಸ್ಪಂದಿಸಿದ್ದು, ಪಡಿತರ ಅಕ್ಕಿಯನ್ನೇ ನಂಬಿಕೊಂಡಿದ್ದ ಕುಟುಂಬಕ್ಕೆ ಹೊಸ ಭರವಸೆ ಸಿಕ್ಕಿದೆ.
ಏನಿದು ಪ್ರಕರಣ..?
ಬಿ.ಟಿ.ಕಾಲೋನಿಯಲ್ಲಿ ಮನೆ ಕೆಲಸ ಮಾಡಿ ಮಕ್ಕಳನ್ನು ಜೋಪಾನ ಮಾಡ್ತಿದ್ದ ರಾಜಕುಮಾರಿ ಎಂಬುವವರ ರೇಷನ್ ಕಾರ್ಡ್ ರದ್ದಾಗಿತ್ತು. ಮನೆಯಲ್ಲಿ ಸುಮಾರು 11 ಜನರಿದ್ದು, ಬಹುಪಾಲು ಹೆಣ್ಣುಮಕ್ಕಳೇ ಇದ್ದಾರೆ. ಕಾರ್ಡ್ನಿಂದ ಬಂದ ರೇಷನ್ನಲ್ಲೇ 3 ಹೊತ್ತು ಊಟ ಮಾಡ್ತಿದ್ರು. ಹೀಗಿರುವಾಗ ಕಾರ್ಡ್ ರದ್ದು ಮಾಡಲಾಗಿದ್ದು ತಿನ್ನೋ ತುತ್ತು ಅನ್ನಕ್ಕೂ ಕುತ್ತು ಬಂದಿದ್ದು ನಾವ್ ಏನ್ ತಿನ್ಬೇಕು ಅಂತ ಕುಟುಂಬಸ್ಥರು ಅಳಲು ತೋಡಿಕೊಂಡಿದ್ದರು. ಇದನ್ನು ನ್ಯೂಸ್ ಫಸ್ಟ್ ವರದಿ ಮಾಡಿತ್ತು.
ಇದನ್ನೂ ಓದಿ:ಕ್ಯಾಪ್ಟನ್ಸಿ ರೇಸ್ನಲ್ಲಿ ಮತ್ತೊಂದು ಹೊಸ ಹೆಸರು.. ಹರಾಜಿನಲ್ಲಿ ಕೋಟಿ ಕೋಟಿ ನೀಡಲು RCB ರೆಡಿ..!
ಇದೀಗ ಎಚ್ಚೆತ್ತುಕೊಂಡಿರುವ ತಾಲೂಕು ಆಡಳಿತ, ಖುದ್ದು ಮಹಿಳೆಯ ಮನೆಗೆ ತಹಶೀಲ್ದಾರ್ ಭೇಟಿ ನೀಡಿದ್ದಾರೆ. ದೂರವಾಣಿ ಕರೆ ಮೂಲಕ ರೇಷನ್ ನೀಡಲು ಸೂಚನೆ ನೀಡಿದ್ದಾರೆ. ಕಾರ್ಡ್ ಸಸ್ಪೆಂಡ್ ಆದ ಮಹಿಳೆಯ ಕುಟುಂಬಕ್ಕೆ ರೇಷನ್ ನೀಡುವ ಭರವಸೆಯ ಜೊತೆಗೆ ಸಮಸ್ಯೆ ಬಗೆಹರಿಸೋದಾಗಿ ಮಾತು ಕೊಟ್ಟಿದ್ದಾರೆ.
ಇನ್ನು ಹಾವೇರಿಯಲ್ಲೂ 6,429 ಬಿಪಿಎಲ್ ಕಾರ್ಡ್ಗಳು ರದ್ದಾಗಿದ್ದು, ಕಾರ್ಡ್ ರದ್ದಾದ ಕುಟುಂಬಗಳು ಕಂಗಾಲಾಗಿವೆ. ದೇವಿಹೋಸೂರಿನ ಕೀರ್ತಿವಿಠಲ ದಾಮೋದರ ಕುಟುಂಬವಂತೂ ಕಣ್ಣೀರಿಡ್ತಿದೆ. ಗೃಹಲಕ್ಷ್ಮೀ, ರೇಷನ್ ಪಡೆದ ಹಣ ಸಿಗದೆ ಪರದಾಡುತ್ತಿದೆ. ಮಾನಸಿಕ ಅಸ್ವಸ್ಥನಾದ ಗಂಡನನ್ನು ಕಟ್ಟಿಕೊಂಡು ಮಹಿಳೆಯೊಬ್ಬರು, ಕಚೇರಿಯಿಂದ ಕಚೇರಿಗೆ ಅಲೆದಾಡುತ್ತಿದ್ದು, ಸರ್ಕಾರಿ ಸವಲತ್ತು ಇಲ್ಲದೆ ಕಣ್ಣೀರು ಹಾಕುತ್ತಿದ್ದಾರೆ.
ಇದನ್ನೂ ಓದಿ:ಸಾರ್ವಜನಿಕರೇ ಎಚ್ಚರ! ನಿಮ್ಮ BPL ರೇಷನ್ ಕಾರ್ಡ್ ಯಾವಾಗ ಬೇಕಾದ್ರೂ ರದ್ದಾಗಬಹುದು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ