/newsfirstlive-kannada/media/post_attachments/wp-content/uploads/2025/06/aviraj.jpg)
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ನಾಡಪ್ರಭು ಕೆಂಪೇಗೌಡರ ಹೆಸರಿನಲ್ಲಿ ಪ್ರತಿ ವರ್ಷ ಪ್ರಶಸ್ತಿ ನೀಡುತ್ತದೆ. ಇದೀಗ 2025ರ ಕೆಂಪೇಗೌಡ ಪ್ರಶಸ್ತಿ ಪಟ್ಟಿ ಪ್ರಕಟಗೊಂಡಿದೆ. ಮಾಧ್ಯಮ, ಸಿನಿಮಾ, ಸಂಗೀತ, ಸಮಾಜಸೇವೆ, ಸಾರ್ವಜನಿಕ ಆಡಳಿತ ಸೇರಿದಂತೆ ವಿವಿಧ ರಂಗದ ಸಾಧಕರನ್ನು ಗುರುತಿಸಿ ಕೆಂಪೇಗೌಡ ಪ್ರಶಸ್ತಿ ನೀಡಲಾಗುತ್ತದೆ.
ಇದನ್ನೂ ಓದಿ: ಪ್ರಸಿದ್ಧ ದೇಗುಲದ ಹುಂಡಿಗೆ 4 ಕೋಟಿ ಮೌಲ್ಯದ ಆಸ್ತಿ ಪತ್ರ ಹಾಕಿದ ನಿವೃತ್ತ ಸೇನಾಧಿಕಾರಿ.. ಕಾರಣ ಇಬ್ಬರು ಹೆಣ್ಮಕ್ಕಳು!
ಈ ಬಾರಿ ವಿವಿಧ ರಂಗದ 52 ಸಾಧಕರನ್ನು ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ. ಖ್ಯಾತ ಗಾಯಕಿ ಸಂಗೀತಾ ಕಟ್ಟಿ, ಹಿರಿಯ ಪತ್ರಕರ್ತ ದೀಪಕ್ ತಿಮ್ಮಯ್ಯ, ಸುಪ್ರೀಂ ಕೋರ್ಟ್ ವಕೀಲರಾದ ಶ್ಯಾಮಸುಂದರ್, ನ್ಯೂಸ್ ಫಸ್ಟ್ ಸೀನಿಯರ್ ಕ್ಯಾಮೆರಾಮನ್ ಅವಿರಾಜ್, ನಿವೃತ್ತ ಐಎಎಸ್ ಅಧಿಕಾರಿ ಬಿಎಸ್ ಪಾಟೀಲ್, ಸಿದ್ಧಯ್ಯ ಸೇರಿದಂತೆ 52 ಸಾಧಕರನ್ನು ಈ ಬಾರಿ ಕೆಂಪೇಗೌಡ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ. ನಾಳೆ ಸಂಜೆ 6 ಗಂಟೆಗೆ ಬಿಬಿಎಂಪಿ ಗಾಜಿನ ಮನೆಯಲ್ಲಿ ಪ್ರಶಸ್ತಿ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ವಿಶೇಷ ಎಂದರೆ ಈ ಬಾರಿ ನ್ಯೂಸ್ ಫಸ್ಟ್ ಸೀನಿಯರ್ ಕ್ಯಾಮೆರಾಮನ್ ಅವಿರಾಜ್ ಅವರು ಕೂಡ ಕೆಂಪೇಗೌಡ ಪ್ರಶಸ್ತಿಗಾಗಿ ಆಯ್ಕೆಯಾಗಿದ್ದಾರೆ. ಅವಿರಾಜ್ ಅವರು ವರದಿಗಾರಿಕೆ ಸಂದರ್ಭದಲ್ಲಿ ಸಾಹಸ ಪ್ರದರ್ಶಿಸಿದ್ದರು. ಕೆ.ಆರ್ ಸರ್ಕಲ್ನ ಅಂಡರ್ ಪಾಸ್ನಲ್ಲಿ ಜೀವದ ಹಂಗು ತೊರೆದು ಮುಳುಗಡೆ ಆಗುತ್ತಿದ್ದವರನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ