newsfirstkannada.com

ಅಂದು ನಾಯಿ ಇಂದು ತೋಳ; 20 ಲಕ್ಷ ಖರ್ಚು ಮಾಡಿ ಮಹದಾಸೆ ಈಡೇರಿಸಿಕೊಂಡ ಮನುಷ್ಯ!

Share :

Published July 31, 2023 at 9:42pm

    ಪಾರ್ಕ್‌ನಲ್ಲಿ ನಾಯಿ ವಾಕಿಂಗ್‌ಗೇ ಬಂದ ಮೇಲೆ ತೋಳ ಪ್ರತ್ಯಕ್ಷ

    ಬಾಲ್ಯದ ಕನಸು ಈಡೇರಿಸಿಕೊಳ್ಳಲು ಇವನು ಮಾಡಿದ್ದೇನು ಗೊತ್ತಾ?

    ತೋಳನ ಈ ಗೆಟಪ್ ರೆಡಿ ಮಾಡಲು ನಾಲ್ವರು 7 ವಾರಗಳ ಕೆಲಸ

ಎಂಥ ಎಂಥ ವೇಷನೊ ಈ ಮನುಷ್ಯರದ್ದು.. ಮೊನ್ನೆಯಷ್ಟೇ ಒಬ್ಬ ನಾಯಿಯಾಗಿ ಪಾರ್ಕ್‌ನಲ್ಲಿ ವಾಕಿಂಗ್ ಬಂದಿದ್ದ. ನಾಯಿಯಾದ ಮನುಷ್ಯನ ಅವತಾರ ನೋಡಿ ಎಲ್ರೂ ನಿಜಕ್ಕೂ ದಂಗಾಗಿದ್ರು. ಮನುಷ್ಯನಾದ ನಾಯಿ ವಾಕಿಂಗ್ ಮಾಡಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಪ್ರಾಣಿ ಪ್ರಿಯರ ಹೃದಯವನ್ನು ಗೆದ್ದಿತ್ತು. ಇದೀಗ ಅದೇ ಜಪಾನ್‌ನಲ್ಲಿ ಮತ್ತೊಬ್ಬ ತೋಳನ ಅವತಾರದಲ್ಲಿ ಪ್ರತ್ಯಕ್ಷವಾಗಿದ್ದಾನೆ. ಜಪಾನ್‌ನಲ್ಲಿ ಪ್ರಾಣಿ ಮೇಲಿರುವ ಪ್ರೀತಿಗೆ ಈ ವೇಷಗಳನ್ನ ಹಾಕಲಾಗ್ತಿದೆ.

ತೋರು ಉಎಡ ಅನ್ನೋ ಎಂಜಿನಿಯರ್‌ಗೆ ಬಾಲ್ಯದಿಂದಲು ತೋಳ ಆಗಬೇಕು ಅನ್ನೋ ಆಸೆಯಿತ್ತು. ಇವನು ತನ್ನ ಬಾಲ್ಯದ ಕನಸು ಈಡೇರಿಸಿಕೊಳ್ಳಲು ತೋಳದ ಗೆಟಪ್‌ನಲ್ಲಿ ಬಂದಿದ್ದಾನೆ. ಈ ವ್ಯಕ್ತಿ ತೋಳದ ಅವತಾರ ತಾಳಲು ಬರೋಬ್ಬರಿ 3 ಮಿಲಿಯನ್ ಯೆನ್ ಅಂದ್ರು ಭಾರತದ ರೂಪಾಯಿಯಲ್ಲಿ 20 ಲಕ್ಷದಷ್ಟು ಖರ್ಚು ಮಾಡಿದ್ದಾನೆ. ಇತ್ತೀಚೆಗೆ ನಾಯಿಯ ವೇಷಭೂಷಣ ತಯಾರಿಸಿದ್ದ ಜಪಾನ್‌ನ ಜೆಪ್ಪೆಟ್‌ ಅನ್ನೋ ಕಂಪನಿಯೇ ಈ ತೋಳದ ವೇಷವನ್ನು ರೆಡಿ ಮಾಡಿದೆ. ಈ ಗೆಟಪ್‌ ರೆಡಿ ಮಾಡಲು ನಾಲ್ವರು ಬರೋಬ್ಬರಿ 7 ವಾರಗಳ ಶ್ರಮವಹಿಸಿದ್ದಾರೆ.

ಇದನ್ನೂ ಓದಿ: WATCH: ಪ್ರಾಣಿ ಪ್ರಿಯರು ಓದಲೇಬೇಕಾದ ಸ್ಟೋರಿ: ಆಸೆಯಂತೆ ನಾಯಿಯಾದ ಮನುಷ್ಯ; ಕಾರಣವೇನು?

ತೋಳದ ವೇಷದಲ್ಲಿ ತನ್ನ ಆಸೆ ಈಡೇರಿಸಿಕೊಂಡಿರುವ ತೋರು ಉಎಡ, ನನಗೆ ಈ ಉಡುಪನ್ನ ಧರಿಸಿದ್ರೆ ಸಿಗೋ ಸಂತೋಷವೇ ಬೇರೆ ಎಂದು ತಿಳಿಸಿದ್ದಾರೆ. ತೋಳನ ವೇಷ ಧರಿಸಿದರೆ ನಾನು ಮನುಷ್ಯ ಅನ್ನೋದನ್ನೇ ಮರೆತು ಬಿಡುತ್ತೇನೆ. ಕನ್ನಡಿ ಮುಂದೆ ನನ್ನನ್ನು ನಾನು ನೋಡಿದಾಗ ತೋಳವನ್ನೇ ನೋಡಿದ ಹಾಗೆ ಆಗುತ್ತೆ. ಈ ಮನುಷ್ಯ ಸಂಬಂಧ, ಸಮಸ್ಯೆ, ಕೆಲಸದ ಒತ್ತಡಗಳಿಂದ ದೂರವಾಗುತ್ತೇನೆ ಎಂದು ತಿಳಿಸಿದ್ದಾರೆ. ನಾಯಿಯ ಬಳಿಕ ತೋಳದ ಅವತಾರ ಕಂಡು ಜನ ಹುಬ್ಬೇರುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಅಂದು ನಾಯಿ ಇಂದು ತೋಳ; 20 ಲಕ್ಷ ಖರ್ಚು ಮಾಡಿ ಮಹದಾಸೆ ಈಡೇರಿಸಿಕೊಂಡ ಮನುಷ್ಯ!

https://newsfirstlive.com/wp-content/uploads/2023/07/Japan-Wolf.jpg

Load More