ಮನೆಗೆ ಆಸರೆಯಾಗಿದ್ದ ಒಬ್ಬನೇ ಮಗ ಅರಿಶಿನಗುಂಡಿ ಪಾಲಾದನು.. ದುಃಖದ ಮಡುವಿನಲ್ಲಿ ಶರತ್​ ಕುಟುಂಬ

author-image
AS Harshith
Updated On
ಮನೆಗೆ ಆಸರೆಯಾಗಿದ್ದ ಒಬ್ಬನೇ ಮಗ ಅರಿಶಿನಗುಂಡಿ ಪಾಲಾದನು.. ದುಃಖದ ಮಡುವಿನಲ್ಲಿ ಶರತ್​ ಕುಟುಂಬ
Advertisment
  • ಅರಿಶಿನಗುಂಡಿ ಫಾಲ್ಸ್​ನಲ್ಲಿ ಬಿದ್ದ ಯುವಕನ ನಾಪತ್ತೆ ಪ್ರಕರಣ
  • ಭದ್ರಾವತಿಯ ಕಡದಕಟ್ಟೆಯ ಸ್ನೇಹಿತರೊಂದಿಗೆ ಟ್ರಿಪ್​ ಹೋಗಿದ್ದನು
  • 23 ವರ್ಷದ ಶರತ್​ ಕುಮಾರ್​ ಮನೆಗೆ ಆಸರೆಯಾಗಿದ್ದನು

ಕೊಲ್ಲೂರು ಬಳಿ ಅರಿಶಿನಗುಂಡಿ ಫಾಲ್ಸ್ ನಲ್ಲಿ ಬಿದ್ದು ನಾಪತ್ತೆಯಾದ ಯುವಕ ಶರತ್ ಕುಮಾರ್ ಮನೆಯಲ್ಲಿ ದುಃಖದ ವಾತಾವರಣ ಮಡುಗಟ್ಟಿದೆ.

publive-image

ನಾಪತ್ತೆಯಾದ ಶರತ್ ಕುಮಾರನು ಮುನಿಸ್ವಾಮಿ ಮತ್ತು ರಾಧಾ ದಂಪತಿಯ ಏಕೈಕ ಪುತ್ರನಾಗಿದ್ದು, ಭದ್ರಾವತಿಯ ಕೆ ಎಚ್ ನಗರದಲ್ಲಿರುವ ನಿವಾಸಿಯಾಗಿದ್ದನು. ಕಳೆದ ಭಾನುವಾರ ಬೆಳಗ್ಗೆ ಶರತ್ ಸ್ನೇಹಿತರೊಂದಿಗೆ ಕಾರಿನಲ್ಲಿ ಮನೆಯಿಂದ ಟ್ರಿಪ್ ಹೊರಟಿದ್ದನು. ಭದ್ರಾವತಿಯ ಕಡದಕಟ್ಟೆಯ ಸ್ನೇಹಿತರೊಂದಿಗೆ ತೆರಳಿದ್ದನು.

publive-image

ಹಿಟಾಚಿ ಹಾಗೂ ಅಡಕೆ ತಟ್ಟೆ ಫ್ಯಾಕ್ಟರಿ ಇಟ್ಟುಕೊಂಡು ಶರತ್ ದುಡಿಮೆ ಮಾಡುತ್ತಿದ್ದನು. 23 ವರ್ಷದ ಈತ ಮನೆಗೆ ಆಸರೆಯಾಗಿದ್ದನು.

publive-image

ಮಳೆಗಾಲದ ಹಿನ್ನೆಲೆಯಲ್ಲಿ ಹೆಚ್ಚಿನ ಕೆಲಸವಿಲ್ಲದ ಕಾರಣ ಸ್ನೇಹಿತರೊಂದಿಗೆ ಟ್ರಿಪ್ ಹೋಗಿದ್ದ ಶರತ್. ನಿನ್ನೆ ಅರಶಿನ ಗುಂಡಿ ಫಾಲ್ಸ್​ನಲ್ಲಿ ನೀರಿಗೆ ಜಾರಿ ಬಿದ್ದಿದ್ದಾನೆ.

publive-image

ಇನ್ನು ಶರತ್ ಇಬ್ಬರು ತಂಗಿ ಹಾಗೂ ತಂದೆ-ತಾಯಿಯೊಂದಿಗೆ ವಾಸಿಸುತ್ತಿದ್ದನು. ಆದರೀಗ ಆತನ ನಾಪತ್ತೆ ಸಂಗತಿ ಕೇಳಿ ಮನೆಯಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ. ಸ್ಥಳೀಯರು ಶರತ್ ಮನೆಗೆ ಭೇಟಿ ನೀಡಿ ಧೈರ್ಯ ತುಂಬುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment