/newsfirstlive-kannada/media/post_attachments/wp-content/uploads/2023/07/Pakistan-Lovers.jpg)
ನಾನು ಸೀಮಾ ಹೈದರ್​ ಅಲ್ಲ.. ಭಾರತಕ್ಕೆ ವಾಪಸ್ ಬಂದೇ ಬರ್ತೀನಿ ಎಂದಿದ್ದ ಫೇಸ್​ಬುಕ್ ಲವ್ವರ್​ ಅಂಜು ಉಲ್ಟಾ ಹೊಡೆದಿದ್ದಾರೆ. ಅಂಜು ಪಾಕಿಸ್ತಾನದ ನಸ್ರುಲ್ಲಾ ಜೊತೆಗೆ ದಿಢೀರ್ ವಿವಾಹವಾಗಿದ್ದು, ತನ್ನ ಹೆಸರು ಅನ್ನು ಫಾತಿಮಾ ಎಂದು ಬದಲಾಯಿಸಿಕೊಂಡಿದ್ದಾರೆ. ರಾಜಸ್ಥಾನದಿಂದ ಗಡಿ ದಾಟಿ ಹೋಗಿದ್ದ ಅಂಜು ಮದುವೆ ಪಾಕಿಸ್ತಾನದಲ್ಲಿ ನಡೆದಿದ್ದು, ಇಸ್ಲಾಂ ಧರ್ಮಕ್ಕೆ ಮತಾಂತರವಾಗಿದ್ದಾರೆ ಎನ್ನಲಾಗಿದೆ. ಅಂಜು, ನಸ್ರುಲ್ಲಾ ಒಟ್ಟಿಗೆ ಫೋಟೋಶೂಟ್ ಮಾಡಿಸಿಕೊಂಡಿರೋ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ರಾಜಸ್ಥಾನದ ಎರಡು ಮಕ್ಕಳ ತಾಯಿ ಅಂಜು ಫೇಸ್​ಬುಕ್‌ನಲ್ಲಿ ಪರಿಚಯವಾದ ಪ್ರಿಯತಮನ ಭೇಟಿ ಮಾಡಲು ಪಾಕಿಸ್ತಾನಕ್ಕೆ ಗುಟ್ಟಾಗಿ ಹೋಗಿದ್ದರು. ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದಂತೆ ಅಂಜು ಸ್ಪಷ್ಟನೆ ಕೊಟ್ಟಿದ್ದರು. ಕೆಲವರು ನನ್ನನ್ನು ಪಾಕಿಸ್ತಾನದಿಂದ ಪಬ್​​​ಜೀ ಸ್ನೇಹಿತನಿಗಾಗಿ ಬಂದಿರುವ ಸೀಮಾ ಹೈದರ್​ ಜೊತೆ ಹೋಲಿಕೆ ಮಾಡ್ತಿದ್ದಾರೆ. ಆದರೆ ಪಬ್​​ಜೀಯಿಂದ ಶುರುವಾದ ಪ್ರೀತಿಗೂ, ಫೇಸ್​​ಬುಕ್​​ನಲ್ಲಿ ಅರಳಿರುವ ಪ್ರೀತಿಗೂ ತುಂಬಾನೇ ವ್ಯತ್ಯಾಸ ಇದೆ ಎನ್ನುತ್ತಾ ನಾನು ಕಾನೂನು ಪ್ರಕಾರ ಎಲ್ಲಾ ದಾಖಲಾತಿಗಳನ್ನು ಪಡೆದುಕೊಂಡೇ ಇಲ್ಲಿಗೆ ಬಂದಿದ್ದೇನೆ. ನಾನು ಶೀಘ್ರದಲ್ಲೇ ವಾಪಸ್ ಆಗ್ತೇನೆ. ನಾನು ಯಾವುದೇ ನಿರ್ಧಾರ ತೆಗೆದುಕೊಂಡರೂ ಅದು ನಮ್ಮ ಭವಿಷ್ಯಕ್ಕೆ ಆಗಿರುತ್ತದೆ. ಅದನ್ನು ನಾನು ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ ಎಂದಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
PUBG made another love story. Anju from India travelled all the way to Dir (KP) to meet the love of her life. She’s loving the place & the culture. pic.twitter.com/Vg7UYNeyz8
— Ihtisham Ul Haq (@iihtishamm) July 25, 2023
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us