newsfirstkannada.com

ಜೈಲಿನಲ್ಲಿದ್ದೇ ಲಕ್ಷಾಂತರ ದುಡಿಯುತ್ತಿದ್ದ ಉಗ್ರ ನಝೀರ್​; 30ಕ್ಕೂ ಹೆಚ್ಚು ಹಿಂದೂಗಳನ್ನ ಇಸ್ಲಾಂಗೆ ಕನ್ವರ್ಟ್ ಮಾಡಿದ್ನಾ?

Share :

Published July 21, 2023 at 11:52am

Update July 21, 2023 at 12:15pm

    ಉಗ್ರ ನಝೀರ್​​ ತಂಡಿಯಾಂತಾವಿಡೆ ಕಥೆಯೇ ಭಯಾನಕ

    ಜೈಲಿನಲ್ಲಿದ್ದುಕೊಂಡೇ ದಿನಕ್ಕೆ ನಾಲ್ಕೈದು ಸಾವಿರ ದುಡಿಯುತ್ತಿದ್ದ ಉಗ್ರ

    ಜೈಲಿನಲ್ಲಿದ್ದುಕೊಂಡು 30ಕ್ಕೂ ಹೆಚ್ಚು ಹಿಂದೂ ಹುಡುಗರನ್ನ ಮತಾಂತರ ಮಾಡಿದ್ದ

ಬೆಂಗಳೂರು ಬ್ಲಾಸ್ಟ್​ ಪ್ರಕರಣಕ್ಕೆ ಸಂಬಂಧಿಸಿ A1 ಆರೋಪಿ ಟಿ. ನಝೀರ್ ಮುಖವಾಡ ಒಂದೊಂದಾಗಿ ಬಯಲಾಗುತ್ತಿದೆ. 2010ರಿಂದಲೇ ಪರಪ್ಪನ ಅಗ್ರಹಾರದಲ್ಲಿ ಸೆರೆಮನೆವಾಸ ಅನುಭವಿಸುತ್ತಿರುವ ಈ ಎಲ್​ಇಟಿ ಉಗ್ರನ ಕುರಿತು ಅಗೆದಷ್ಟು ಭಯಾನಕ​ ಸುದ್ದಿಗಳು ಹೊರಬೀಳುತ್ತಿವೆ. ಜೈಲಿನಲ್ಲಿರುವ ನಝೀರ್​ ಅಲಿಯಾಸ್​ ತಂಡಿಯಾಂತಾವಿಡೆ ಲಕ್ಷ ಲಕ್ಷ ಹಣ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ.

ದಿನಕ್ಕೆ ನಾಲ್ಕೈದು ಸಾವಿರ ದುಡಿಯುತ್ತಿದ್ದ

ಟಿ.ನಝೀರ್ ಜೈಲಿನಲ್ಲಿದ್ದುಕೊಂಡೇ ದಿನಕ್ಕೆ ನಾಲ್ಕೈದು ಸಾವಿರ ದುಡಿಯುತ್ತಿದ್ದ.​​ ಕೈದಿಗಳಿಗೆ ಬಟ್ಟೆ, ಡ್ರೈಫ್ರೂಟ್ಸ್, ಸ್ವೀಟ್ಸ್ ಮಾರಾಟ ಮಾಡುತ್ತಿದ್ದ. ಉಗ್ರರ ಸೆಲ್​ ಬಿಟ್ಟು ಬೇರೆ ಕಡೆ ಸಹ ನಝೀರ್​​ ಓಡಾಡುತ್ತಿದ್ದ ಎನ್ನಲಾಗುತ್ತಿದೆ.

ಲಕ್ಷಾಂತರ ಹಣ ಸಂಪಾದಿಸಿದ್ದ

ಇದಲ್ಲದೇ, ಟಿ ನಝೀರ್​ ಹೊರಗಡೆಯಿಂದ ಡ್ರೈ ಫ್ರೂಟ್ಸ್, ಬಟ್ಟೆ ತರಿಸುತ್ತಿದ್ದ. ಖೈದಿಗಳಿಗೆ ದುಪ್ಪಟ್ಟು ಬೆಲೆಗೆ ಮಾರಾಟ ಮಾಡ್ತಿತ್ತಿದ್ದ . ಈ ಕಾರಣದಿಂದ ಲಕ್ಷಾಂತರ ಹಣ ಸಂಪಾದಿಸಿದ್ದನು ಎಂಬ ಮಾತುಗಳು ಕೇಳಿಬಂದಿವೆ.

ಹಿಂದೂಗಳ ಮತಾಂತರ ಮಾಡುತ್ತಿದ್ದ ಟಿ ನಝೀರ್​!

ಜೈಲಿನಲ್ಲಿ ಇದ್ದುಕೊಂಡೇ ವ್ಯಾಪಾರ, ವ್ಯವಹಾರದ ಜೊತೆಗೆ ಅಲ್ಲಿದ್ದ ಹಿಂದೂಗಳನ್ನು ಮತಾಂತರ ಮಾಡುತ್ತಿದ್ದ ಎಂಬ ಮಾತುಗಳು ಕೇಳಿಬಂದಿವೆ. ಜೈಲಲ್ಲಿ 30ಕ್ಕೂ ಹೆಚ್ಚು ಹಿಂದೂಗಳನ್ನ ಇಸ್ಲಾಂಗೆ ಕನ್ವರ್ಟ್ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಹಿಂದೂ ಹುಡುಗರ ಟಾರ್ಗೆಟ್

ಟಿ. ನಝೀರ್​ ಅಮಾಯಕ ಹಿಂದೂ ಹುಡುಗರನ್ನ ಟಾರ್ಗೆಟ್​ ಮಾಡುತ್ತಿದ್ದ. ಈತನ ಮಾತಿಗೆ ಪ್ರಚೋದನೆಗೊಂಡ ಹಿಂದೂಗಳು ಮೀಸೆ ಬೋಳಿಸಿಕೊಂಡು ಗಡ್ಡ ಬಿಡುತ್ತಿದ್ದರು. ಇನ್ನು ಜೈಲಿಗೆ ಬಂದ ಮುಸ್ಲಿಂ ಆರೋಪಿಗಳು ಕೇರಳದವರಾದ್ರೆ ಮೊದಲಿಗೆ ಇವನ ಬಳಿ ಬರಬೇಕು ಎಂಬ ನಿಯಮವಿಟ್ಟುಕೊಂಡಿದ್ದ. ಇದಲ್ಲದೆ, ಉಗ್ರರನ್ನು ಹೈ-ಸೆಕ್ಯುರಿಟಿ ಸೆಲ್​ನಲ್ಲೇ ನಝೀರ್​ ಇರಿಸಿಕೊಳ್ಳುತ್ತಿದ್ದ. ಇದಕ್ಕೆ ₹70,000ವರೆಗೆ ಹಣ ಚಾರ್ಜ್ ಮಾಡುತ್ತಿದ್ದ.

ಶಂಕಿತರ ಬೆನ್ನತ್ತಿದ ಸಿಸಿಬಿ

ಬಂಧಿತರು ಜೈಲಿನಲ್ಲಿ ಜುನೈದ್, ನಝೀರ್​ಗೆ ಹಲವರ ಸಹಾಯ ಸಿಕ್ಕಿದೆ. ಈ ಹಿನ್ನಲೆ ಸಿಸಿಬಿ ಪೊಲೀಸರು ಹಣ ಸಹಾಯ, ಸ್ಫೋಟಕ ನೀಡಿರುವವರ ಬೆನ್ನತ್ತಿದ್ದಾರೆ. ಸಿಸಿಬಿ ತನಿಖೆಯ ಜೊತೆಗೆ ಹಲವು ತನಿಖಾ ತಂಡಗಳು ಹಿಂದೆ ಬಿದ್ದಿದೆ. ಎನ್ಐಎ ಕೂಡ ಸಿಸಿಬಿ ಕೇಸ್​ನ ಪ್ರತ್ಯೇಕವಾಗಿ ತನಿಖೆ ಆರಂಭಿಸಿದೆ. ಮತ್ತಷ್ಟು ಆರೋಪಿಗಳ ಪತ್ತೆಗೆ ಎನ್ಐಎ ಮುಂದಾಗಿದೆ. ಇದಲ್ಲದೇ ರಾಜ್ಯ ಆಂತರಿಕಾ ಭದ್ರತಾ ದಳದಿಂದಲೂ ಶಂಕಿತರ ವಿಚಾರಣೆ ನಡೆಸುತ್ತಿದೆ. ಮಿಲಿಟರಿ ಇಂಟಲಿಜೆನ್ಸ್​ನಿಂದಲೂ ಶಂಕಿತರ ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ. ಇನ್ನು ಸಿಕ್ಕ ಗ್ರೆನೇಡ್ ಬಗ್ಗೆಯೂ ಮಿಲಿಟರಿ ವಿಭಾಗ ತನಿಖೆಗೆ ಮುಂದಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜೈಲಿನಲ್ಲಿದ್ದೇ ಲಕ್ಷಾಂತರ ದುಡಿಯುತ್ತಿದ್ದ ಉಗ್ರ ನಝೀರ್​; 30ಕ್ಕೂ ಹೆಚ್ಚು ಹಿಂದೂಗಳನ್ನ ಇಸ್ಲಾಂಗೆ ಕನ್ವರ್ಟ್ ಮಾಡಿದ್ನಾ?

https://newsfirstlive.com/wp-content/uploads/2023/07/Nazir-2.jpg

Load More