ಆಕೆ ನಮ್ಮ ಪಾಲಿಗೆ ಸತ್ತು ಹೋಗಿದ್ದಾಳೆ.. ಇದು ಪಾಕ್​ಗೆ ಕಾಲ್ಕಿತ್ತ ಅಂಜು ತಂದೆಯ ಮನದ ಮಾತು

author-image
AS Harshith
Updated On
ಆಕೆ ನಮ್ಮ ಪಾಲಿಗೆ ಸತ್ತು ಹೋಗಿದ್ದಾಳೆ.. ಇದು ಪಾಕ್​ಗೆ ಕಾಲ್ಕಿತ್ತ ಅಂಜು ತಂದೆಯ ಮನದ ಮಾತು
Advertisment
  • ಮಗಳ ಬಗ್ಗೆ ಮಾತನಾಡಿದ ಅಂಜು ತಂದೆ ಗಯಾ ಪ್ರಸಾದ್ 
  • ಅಂಜು ಎರಡು ಮಕ್ಕಳ ಜೀವನ ಹಾಳು ಮಾಡಿದ್ದಾಳೆ
  • ಪಾಕ್​ಗೆ ಹೋಗಿ ನಸ್ರುಲ್ಲಾನನ್ನು ವಿವಾಹವಾದ ಅಂಜು

ಇತ್ತೀಚೆಗೆ ಪಾಕಿಸ್ತಾನ ಮೂಲದ ಸೀಮಾ ಹೈದರ್​ ಎಂಬಾಕೆ ಅಕ್ರಮವಾಗಿ ಪಾಕಿಸ್ತಾನ ಬಿಟ್ಟು ಭಾರತಕ್ಕೆ ಬಂದಿದ್ದಳು. ಈ ಘಟನೆ ಬೆನ್ನಲ್ಲೇ ಭಾರತ ಮೂಲದ ಅಂಜು ಎಂಬ ಮಹಿಳೆಯೊಬ್ಬಳು ಪಾಕಿಸ್ತಾನಕ್ಕೆ ಹೋಗಿದ್ದಾಳೆ. ಈ ಘಟನೆ ಬೆನ್ನಲ್ಲೇ ಅಂಜು ತಂದೆ ಮಾತನಾಡಿದ್ದಾರೆ.

ಪಬ್​ಜಿ ಪ್ರಿಯಕರನ ಪ್ರೀತಿಗೆ ಬಿದ್ದ ಸೀಮಾ ಹೈದರ್ ತನ್ನ 4 ಮಕ್ಕಳನ್ನು ಹಿಡಿದುಕೊಂಡು​ ಭಾರತಕ್ಕೆ ಬಂದಳು. ಆದರೆ ಅಂಜು ಎಂಬ ಮಹಿಳೆ ತನ್ನ ಗಂಡ ಹಾಗೂ 2 ಮಕ್ಕಳನ್ನು ಬಿಟ್ಟು ಪಾಕಿಸ್ತಾನಕ್ಕೆ ಹೋಗಿದ್ದಾಳೆ. ಫೇಸ್​ಬುಕ್​ ಪ್ರಿಯಕರ ಬಲೆಗೆ ಬಿದ್ದು ಪಾಕ್​ನಲ್ಲಿ ಆತನನ್ನು ವಿವಾಹವಾಗಿದ್ದಾಳೆ. ಆದರೆ ಈ ಬಗ್ಗೆ ಅಂಜು ತಂದೆ ಗಯಾ ಪ್ರಸಾದ್ ಮಾತನಾಡಿದ್ದು, ಅಂಜು ಜೊತೆಗೆ ನಮಗೆ ಈಗ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದ್ದಾರೆ.

[caption id="attachment_9943" align="alignnone" width="800"]ಅಂಜು ಮತ್ತು ಪಾಕಿಸ್ತಾನ ಮೂಲದ ಪತಿ ನಸ್ರುಲ್ಲಾಅಂಜು ಮತ್ತು ಪಾಕಿಸ್ತಾನ ಮೂಲದ ಪತಿ ನಸ್ರುಲ್ಲಾ[/caption]

ಪಾಕಿಸ್ತಾನಕ್ಕೆ ಹೋಗಿ ನಸ್ರುಲ್ಲಾ ಜೊತೆಗೆ ಮದುವೆಯಾದ ಮಗಳ ಕುರಿತಾಗಿ ಮಧ್ಯಪ್ರದೇಶದ ‌ಗ್ವಾಲಿಯರ್ ನಲ್ಲಿ ಮಾತನಾಡಿದ ಗಯಾ ಪ್ರಸಾದ್, ಅಂಜು ಭಾರತ ಬಿಟ್ಟು ಹೋದ ಕ್ಷಣವೇ ನಾವು ಎಲ್ಲ ಸಂಬಂಧ ಕಡಿದುಕೊಂಡಿದ್ದೇವೆ. ನನ್ನ ಮಗಳು ಇಂಥದ್ದನ್ನು ಮಾಡುತ್ತಾಳೆ ಅಂತ ಎಂದೂ ಊಹಿಸಿಕೊಂಡಿರಲಿಲ್ಲ. ಆಕೆ ಮಾಡಿದ್ದು ಬಹಳ ನಾಚಿಕೆಗೇಡು ಎಂದು ಹೇಳಿದ್ದಾರೆ.

ಬಳಿಕ ಆಕೆ ನಮ್ಮ ಪಾಲಿಗೆ ಸತ್ತು ಹೋಗಿದ್ದಾಳೆ, ಎರಡು ಮಕ್ಕಳ ಜೀವನ ಹಾಳು ಮಾಡಿದ್ದಾಳೆ ಎಂದು ಅಂಜು ತಂದೆ ಗಯಾ ಪ್ರಸಾದ್ ಬೆಸರ ಹೊರಹಾಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment