newsfirstkannada.com

ಕಾಪಾಡು ತಿಮ್ಮಪ್ಪ.. ಚಂದ್ರಯಾನ- 3 ಯಶಸ್ವಿ ಉಡಾವಣೆಗೆ ದೇವರ ಮೊರೆ ಹೋದ ಇಸ್ರೋ ಮುಖ್ಯಸ್ಥ ಸೋಮನಾಥ್

Share :

Published July 13, 2023 at 1:47pm

Update July 13, 2023 at 1:56pm

    2019ರಲ್ಲಿ ಚಂದ್ರಯಾನ-2 ಉಡಾವಣೆ ಸ್ಪಲ್ಪದರಲ್ಲೇ ವಿಫಲವಾಗಿತ್ತು

    ಚಂದ್ರಯಾನ- 3 ಯಶಸ್ವಿಗೆ ತಿಮ್ಮಪ್ಪನ ಮೊರೆ ಹೋದ ವಿಜ್ಞಾನಿಗಳು

    ನಾಳೆ ಮಧ್ಯಾಹ್ನ 2 ಗಂಟೆ 35 ನಿಮಿಷದ 17 ಸೆಕೆಂಡ್​​​​ಗೆ ಮುಹೂರ್ತ

ತಿರುಪತಿ: ಇಡೀ ಭಾರತವೇ ಅದೊಂದು ಕ್ಷಣಕ್ಕೆ ಕಾದು ಕುಳಿತಿದೆ. ಪ್ರತಿಯೊಬ್ಬ ಭಾರತೀಯರು ಎದುರು ನೋಡ್ತಿರೋ ಚಂದ್ರಯಾನ-3 ಉಡಾವಣೆಗೆ ಕೌಂಟ್‌ಡೌನ್ ಶುರುವಾಗಿದೆ. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಚಂದ್ರಯಾನ-3 ಉಡಾವಣೆಗೆ ಇಂದು ಮಧ್ಯಾಹ್ನ 1 ಗಂಟೆಗೆ ಕೌಂಟ್​ಡೌನ್ ಶುರುವಾಗಿದೆ. ನಾಳೆ ಮಧ್ಯಾಹ್ನ 2 ಗಂಟೆ 35 ನಿಮಿಷದ 17 ಸೆಕೆಂಡ್​​​​ಗೆ ಸರಿಯಾಗಿ, ಲ್ಯಾಂಡರ್ ಮತ್ತು ರೋವರ್​​ ಮಷಿನ್​ಗಳನ್ನು ಹೊತ್ತು ಬಾಹುಬಲಿ ರಾಕೆಟ್ ಆಕಾಶಕ್ಕೆ ಚಿಮ್ಮಲಿದೆ.

ನಾಳೆ ಚಂದ್ರಯಾನ- 3 ಉಡಾವಣೆಯಾಗುವ ಹಿನ್ನೆಲೆ ಇಂದು ಇಸ್ರೋ ಮುಖ್ಯಸ್ಥ ಸೋಮನಾಥ್‌ ಹಾಗೂ ವಿಜ್ಞಾನಿಗಳ ತಂಡ ತಿರುಪತಿಗೆ ಭೇಟಿ ಕೊಟ್ಟಿದೆ. ವಿಶೇಷ ಪೂಜೆ ಸಲ್ಲಿಸಿರುವ ಇಸ್ರೋ ಮುಖ್ಯಸ್ಥ ಸೋಮನಾಥ್ ಅವರು ನಾಳೆಯ ಚಂದ್ರಯಾನ-3 ಯಶಸ್ವಿಯಾಗಲೆಂದು ಪ್ರಾರ್ಥನೆ ಸಲ್ಲಿಸಿದ್ದಾರೆ.
2019ರಲ್ಲಿ ಚಂದ್ರಯಾನ-2 ಸ್ಪಲ್ಪದರಲ್ಲೇ ಫೇಲ್ ಆಗಿತ್ತು. ಈ ಬಾರಿ ಚಂದ್ರಯಾನ-3ರ ಯಶಸ್ಸಿಗಾಗಿ ಇಸ್ರೋ ವಿಜ್ಞಾನಿಗಳು ಬಾರಿ ಪ್ರಯತ್ನ ನಡೆಸಿದ್ದಾರೆ. ವಿಜ್ಞಾನಿಗಳ ಪ್ರಯತ್ನದ ಜೊತೆಗೆ ದೇವರ ಆಶೀರ್ವಾದವೂ ಯಶಸ್ಸಿಗೆ ಮುಖ್ಯ ಎಂದು ಇಸ್ರೋ ಮುಖ್ಯಸ್ಥ ಸೋಮನಾಥ್ ನಂಬಿದ್ದಾರೆ.

ಇದನ್ನೂ ಓದಿ: ಚಂದ್ರಯಾನ-3 ಉಡಾವಣೆಗೆ ಗ್ರೀನ್ ಸಿಗ್ನಲ್.. ಇಂದು ಮಧ್ಯಾಹ್ನದಿಂದಲೇ ಕೌಂಟ್​ಡೌನ್ ಸ್ಟಾರ್ಟ್​..!

ಚಂದ್ರಯಾನ -3 ರ ಮಾದರಿಯೊಂದಿಗೆ ಇಸ್ರೋ ವಿಜ್ಞಾನಿಗಳು ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಆಗಮಿಸಿದ್ದಾರೆ. ಚಂದ್ರಯಾನ- 3ರ ಮಾದರಿಯನ್ನು ದೇವರ ಮುಂದೆ ಇಟ್ಟು ಇಸ್ರೋ ವಿಜ್ಞಾನಿಗಳು ಬೇಡಿಕೊಂಡಿದ್ದಾರೆ. ಚಂದ್ರಯಾನ-3 ಯಶಸ್ಸಿಗೆ ತಮ್ಮ ಪ್ರಯತ್ನದ ಜೊತೆಗೆ ದೇವರ ಆಶೀರ್ವಾದವನ್ನು ಇಸ್ರೋ ವಿಜ್ಞಾನಿಗಳು ಬೇಡಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾಪಾಡು ತಿಮ್ಮಪ್ಪ.. ಚಂದ್ರಯಾನ- 3 ಯಶಸ್ವಿ ಉಡಾವಣೆಗೆ ದೇವರ ಮೊರೆ ಹೋದ ಇಸ್ರೋ ಮುಖ್ಯಸ್ಥ ಸೋಮನಾಥ್

https://newsfirstlive.com/wp-content/uploads/2023/07/ISRO-Chief-1.jpg

Load More