newsfirstkannada.com

ಚಂದ್ರಯಾನ-3 ಯಶಸ್ಸಿಗೆ ಡಿಸೈನರ್​​ನಲ್ಲಿ ಹೊಸ ಸೂತ್ರ: ಈ ಬಾರಿ ‘Failure-Based ವಿನ್ಯಾಸ’; ಇದು ಯಾಕೆ ಗೊತ್ತಾ?

Share :

Published July 11, 2023 at 1:43pm

Update July 11, 2023 at 1:45pm

    ಚಂದ್ರಯಾನ-3 ಲಾಂಚಿಂಗ್ ಕಾರ್ಯಕ್ರಮದಲ್ಲಿ ಮೋದಿ ಇರ್ತಾರಾ?

    ಜುಲೈ 14 ರಂದು ಮಧ್ಯಾಹ್ನ 2.30ಕ್ಕೆ ಚಂದ್ರಯಾನ-3 ಉಡಾವಣೆ

    ಮತ್ತೊಂದು ಗರಿಮೆಯತ್ತ ಇಸ್ರೋ, ಐತಿಹಾಸಿಕ ಕ್ಷಣಕ್ಕೆ ಕಾದಿರುವ ಭಾರತ

Chandrayaan-3: ಕಳೆದ ಬಾರಿ ಮಾಡಿದ ತಪ್ಪುಗಳಿಂದ ತಿದ್ದುಕೊಂಡಿರುವ ಇಸ್ರೋದ (ISRO) ವಿಜ್ಞಾನಿಗಳು, ‘ಈ ಬಾರಿ ಗೆಲುವು ನಮ್ಮದೇ’ ಎನ್ನುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ ಶುಕ್ರವಾರ ಮಧ್ಯಾಹ್ನ 2.30ಕ್ಕೆ ಸರಿಯಾಗಿ ಆಂಧ್ರ ಪ್ರದೇಶದ ಶ್ರೀಹರಿಕೋಟದಿಂದ LVM-III (Launch Vehicle Mark-III) ರಾಕೆಟ್​, ಚಂದ್ರಯಾನ-3 ಮಷಿನ್​ಗಳನ್ನು ಹೊತ್ತು ನಭದತ್ತ ಚಿಮ್ಮಲಿದೆ.

ಈ ಸಂಬಂಧ ನಿನ್ನೆ ಮಾಧ್ಯಮಗಳ ಜೊತೆ ಮಾತನಾಡಿರುವ ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಅಧ್ಯಕ್ಷ ಎಸ್​.ಸೋಮನಾಥ್, 2019ರಲ್ಲಿ ನಾವು ಚಂದ್ರಯಾನ-2 ಪ್ರಾಜೆಕ್ಟ್​ ಕೈಗೊಂಡಿದ್ದೆವು. ಯಶಸ್ಸಿನ ಕೊನೆಯ ಗಳಿಗೆಯಲ್ಲಿ ಲ್ಯಾಂಡರ್ ವಿಕ್ರಂ ಸಂಪರ್ಕವನ್ನು ಕಳೆದುಕೊಂಡು ಚಂದ್ರನಿಗೆ ಹೋಗಿ ಅಪ್ಪಳಿಸಿತು. ಸಾಫ್ಟ್​ ಲ್ಯಾಂಡಿಂಗ್ ಆಗದ ಹಿನ್ನೆಲೆಯಲ್ಲಿ ಚಂದ್ರಯಾನ-2 ವಿಫಲವಾಯಿತು. ನಮ್ಮ ಎರಡನೇ ಯಾತ್ರೆಯಲ್ಲಿ ಲ್ಯಾಂಡರ್​ ಅನ್ನು ‘ಯಶಸ್ವಿ ಆಧಾರಿತ ವಿನ್ಯಾಸ’ (success-based design) ಅಭಿವೃದ್ಧಿ ಮಾಡಲಾಗಿತ್ತು.

ಈ ಬಾರಿ ನಾವು ‘Failure-based design ’ ಮೇಲೆ ಮಷಿನ್ ಡಿಸೈನ್ ಮಾಡಲಾಗಿದೆ. ಚಂದ್ರಯಾನ-2ನಲ್ಲಿ ಆಗಿರುವ ತಪ್ಪುಗಳ ಮೇಲೆ ಹೆಚ್ಚು ಫೋಕಸ್ ಮಾಡಿ, ಮತ್ತೆ ಅದು ಮರುಕಳಿಸದಂತೆ ಲ್ಯಾಂಡರ್​ ಅಭಿವೃದ್ಧಿಪಡಿಸಲಾಗಿದೆ. ಅಂದರೆ ಚಂದ್ರಯಾನ-2 ಪ್ರಾಜೆಕ್ಟ್​ನಲ್ಲಿ ಅನೇಕ ತಪ್ಪುಗಳು ಆಗಿದ್ದವು. ಹೀಗಾಗಿ ಸೆನ್ಸಾರ್ ಫೇಲ್ಯೂರ್, ಎಂಜಿನ್ ಫೇಲ್ಯೂರ್, ಕ್ಯಾಲ್ಕುಲೇಷನ್ ಫೇಲ್ಯೂರ್​ ಸೇರಿಂತೆ ಹಲವು ವೈಫಲ್ಯಗಳ ಮೇಲೆ ಒತ್ತು ನೀಡಿ ಅಭಿವೃದ್ಧಿ ಮಾಡಲಾಗಿದೆ. ನಾವೀಗ ಡಿಸೈನ್ ಮಾಡಿರುವ ಲ್ಯಾಂಡರ್, ಚಂದ್ರನ ಮೇಲ್ಮೈ ಮೇಲೆ ಎಲ್ಲಿಯಾದರೂ ಸುಲಭವಾಗಿ ಲ್ಯಾಂಡ್ ಮಾಡಬಹುದು ಎಂದು ಸೋಮನಾಥ್ ತಿಳಿಸಿದ್ದಾರೆ.

ಮಾತ್ರವಲ್ಲ, ನೌಕೆಯು ಅಧಿಕ ಇಂಧನ ಕ್ಷಮತೆಯನ್ನು ಹೊಂದಿದೆ. ಚಂದ್ರನ ದಕ್ಷಿಣ ಧ್ರುವದ ಮೇಲೆ ಲ್ಯಾಂಡ್ ಮಾಡಲು ಪ್ಲಾನ್ ಮಾಡಲಾಗಿದೆ. ಒಂದು ವೇಳೆ ಅದು ಅಸಾಧ್ಯವಾಗದೇ ಇದ್ದಾಗ, ಅನಿವಾರ್ಯವಾಗಿ ಬೇರೆ ಕಡೆ ಲ್ಯಾಂಡ್ ಮಾಡಬೇಕಾಗುತ್ತದೆ. ಇದಕ್ಕೆ ಬೇಕಾಗಿರುವ ಹೆಚ್ಚಿನ ಇಂಧನ ಕೂಡ ಈ ಬಾರಿ ಇರಲಿದೆ. ಕಳೆದ ಬಾರಿ ನಾವು ನಿಗಧಿತ ಸ್ಥಳದಲ್ಲಿ ಲ್ಯಾಂಡ್ ಮಾಡಲು ಪ್ಲಾನ್ ಮಾಡಿದ್ದೆವು. ಚಂದ್ರಯಾನ-2 ಯೋಜನೆಯ ಲ್ಯಾಂಡಿಂಗ್ ಸ್ಥಳ ಚಿಕ್ಕದಾಗಿತ್ತು. ಆದರೆ ಈ ಬಾರಿ ವಿಶಾಲ ಜಾಗದಲ್ಲಿ ಲ್ಯಾಂಡ್ ಮಾಡಲು ನಿರ್ಧರಿಸಲಾಗಿದೆ. ಅದರಂತೆ, 4 ಕಿಲೋ ಮೀಟರ್ ವ್ಯಾಪ್ತಿಯ ಯಾವುದೇ ಸ್ಥಳದಲ್ಲಿ ಲ್ಯಾಂಡ್ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ಚಂದ್ರಯಾನ-3 ಲಾಂಚಿಂಗ್​ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಇರಲಿದ್ದಾರಾ ಎಂದು ಪ್ರಶ್ನೆ ಮಾಡಲಾಗಿತ್ತು. ಅದಕ್ಕೆ ಉತ್ತರಿಸಿರುವ ಎಸ್​.ಸೋಮನಾಥ್, ದೇಶದ ಎಲ್ಲಾ ಗಣ್ಯರಿಗೂ ನಾವು ಆಹ್ವಾನ ಮಾಡಿದ್ದೇವೆ. ನೋಡೋಣ ಎಂದಿದ್ದಾರೆ.

ಇದನ್ನೂ ಓದಿ: Chandrayaan-3: ಜುಲೈ 14 ರಿಂದ ಚಂದ್ರಯಾನ-3 ಜರ್ನಿ ಆರಂಭ.. ಚಂದ್ರನಿದ್ದಲ್ಲಿಗೆ ಹೋಗಲು ಎಷ್ಟುದಿನ ಬೇಕು ಗೊತ್ತಾ..?

ಇದನ್ನೂ ಓದಿ: Chandrayaan-3: ಕನಸುಗಳ ಹೊತ್ತು ಭಾರತಾಂಬೆಯ ಮಕ್ಕಳು ನಿನ್ನಲ್ಲಿಗೆ ಬರ್ತಿದ್ದಾರೆ ಕೈಗೆ ಸಿಗು ‘ಓ ಚಂದಮಾಮ’..!

ಇದನ್ನೂ ಓದಿ: Chandrayaan-3: ಉಡಾವಣೆಗೆ ಸಿದ್ಧಗೊಂಡ ಚಂದ್ರಯಾನ ಮಷಿನ್ -ಹೊಸ ಫೋಟೋಗಳನ್ನು ಹಂಚಿಕೊಂಡ ಇಸ್ರೋ ವಿಜ್ಞಾನಿಗಳು..!

ಇದನ್ನೂ ಓದಿ: Chandrayaan-3 : ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಜ್ಜಾದ ಭಾರತ -ಚಂದ್ರಯಾನ-3 ಉಡಾವಣೆಗೆ ಡೇಟ್​ ಫಿಕ್ಸ್​..!

ಇದನ್ನೂ ಓದಿ: Breaking News: ಮುಂದಿನ ತಿಂಗಳೇ ನಡೆಯಲಿಕ್ಕಿದೆ ಚಂದ್ರಯಾನ-3 ಉಡಾವಣೆ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಂದ್ರಯಾನ-3 ಯಶಸ್ಸಿಗೆ ಡಿಸೈನರ್​​ನಲ್ಲಿ ಹೊಸ ಸೂತ್ರ: ಈ ಬಾರಿ ‘Failure-Based ವಿನ್ಯಾಸ’; ಇದು ಯಾಕೆ ಗೊತ್ತಾ?

https://newsfirstlive.com/wp-content/uploads/2023/06/CHANDRAYAN.jpg

Load More