ಮಾಸ್ಟರ್ ಆನಂದ್ ಪುತ್ರಿ ವಂಶಿಕಾ ಹೆಸರಲ್ಲಿ ಲಕ್ಷ, ಲಕ್ಷ ವಂಚನೆ ಆರೋಪ; ಪೊಲೀಸ್ ಠಾಣೆಗೆ ದೂರು

author-image
Ganesh Nachikethu
Updated On
ಮಾಸ್ಟರ್ ಆನಂದ್ ಪುತ್ರಿ ವಂಶಿಕಾ ಹೆಸರಲ್ಲಿ ಲಕ್ಷ, ಲಕ್ಷ ವಂಚನೆ ಆರೋಪ; ಪೊಲೀಸ್ ಠಾಣೆಗೆ ದೂರು
Advertisment
  • ಮಾಸ್ಟರ್ ಆನಂದ್ ಪುತ್ರಿ ವಂಶಿಕಾ ಹೆಸರಲ್ಲಿ ವಂಚನೆ ಆರೋಪ
  • ಆ್ಯಡ್ ಶೂಟ್, ಮಕ್ಕಳ ಟ್ಯಾಲೆಂಟ್ ಹೆಸರಲ್ಲಿ ಲಕ್ಷ, ಲಕ್ಷ ಸುಲಿಗೆ
  • ಪೊಲೀಸರಿಗೆ ಆರೋಪಿಯನ್ನು ಒಪ್ಪಿಸಿದ ಮೋಸ ಹೋದವರು

ಬೆಂಗಳೂರು: ನನ್ನಮ್ಮ ಸೂಪರ್‌ ಸ್ಟಾರ್‌, ಗಿಚ್ಚಿ ಗಿಲಿಗಿಲಿ ರಿಯಾಲಿಟಿ ಶೋನಲ್ಲಿ ಧೂಳೆಬ್ಬಿಸಿದ್ದ ಬಾಲ ನಟಿ ವಂಶಿಕಾ. ಮಾಸ್ಟರ್ ಆನಂದ್ ಪುತ್ರಿ ವಂಶಿಕಾ ಅಂಜನಿ ಕಶ್ಯಪಾ ಹೆಸರನ್ನು ದುರುಪಯೋಗ ಪಡಿಸಿಕೊಂಡು ಲಕ್ಷಾಂತರ ರೂಪಾಯಿ ವಂಚಿಸಿರೋ ಆರೋಪ ಕೇಳಿ ಬಂದಿದೆ.

ಆ್ಯಡ್ ಶೂಟ್, ಮಕ್ಕಳ ಟ್ಯಾಲೆಂಟ್ ನೆಪದಲ್ಲಿ ಮಹಿಳೆಯೊಬ್ಬರು ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ನಿಶಾ ನರಸಪ್ಪ ಎಂಬ ಮಹಿಳೆ ಪೋಷಕರಿಂದ ಲಕ್ಷ, ಲಕ್ಷ ಪಡೆದು ವಂಚನೆ ನಡೆಸಿದ್ದಾರೆ ಎನ್ನಲಾಗಿದೆ.

publive-image

ಮೋಸ ಹೋಗಿರೋ ಪೋಷಕರು ಆರೋಪಿ ನಿಶಾ ನರಸಪ್ಪರನ್ನು ಪೊಲೀಸರಿಗೆ ಹಿಡಿದುಕೊಟ್ಟಿದ್ದಾರೆ. ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ತಮ್ಮ ಮಗಳ ಹೆಸರನ್ನು ದುರುಪಯೋಗಪಡಿಸಿಕೊಂಡಿರೋದಕ್ಕೆ ಮಾಸ್ಟರ್ ಆನಂದ್ ಪತ್ನಿ ಯಶಸ್ವಿನಿ ಕೂಡ ಕಂಪ್ಲೇಂಟ್ ಕೊಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment