newsfirstkannada.com

ಚಪ್ಪಲಿ ಕಳೆದು ಹೋಗಿದೆ ಹುಡುಕಿ ಕೊಡಿ ಪ್ಲೀಸ್​.. ಚಪ್ಪಲಿಗಾಗಿ ಠಾಣೆ ಮೆಟ್ಟಿಲೇರಿದ ವ್ಯಕ್ತಿ!

Share :

Published July 10, 2023 at 2:10pm

Update July 10, 2023 at 4:00pm

    ಕದ್ದು ಹೋದ ಚಪ್ಪಲಿಯ ಬೆನ್ನು ಬಿದ್ದ ವ್ಯಕ್ತಿ

    ಪೊಲೀಸರ ಸಹಾಯ ಕೇಳಿದ ಚಪ್ಪಲಿ ಕಳೆದುಕೊಂಡ ಸಂತ್ರಸ್ತ

    ದೇವಸ್ಥಾನಕ್ಕೆ ತೆರಳಿ ಹಿಂತಿರುಗುವಾಗ ಚಪ್ಪಲಿ ಮಾಯ

ಚಪ್ಪಲಿ ಕದಿಯುವ ಕಳ್ಳರಿದ್ದಾರೆ ನಿಜ. ಒಂದು ವೇಳೆ ಚಪ್ಪಲಿ ಕದ್ದು ಹೋದರೆ ಸುಮ್ಮನಾಗಿ ಬಿಡುತ್ತೇವೆ. ಹೊಸ ಚಪ್ಪಲಿ ಖರೀದಿಸಿದರೆ ಸಾಕು ಎಂದು ಚಿಂತಿಸದೆ ಕೂರುತ್ತೇವೆ. ಆದರೆ ಇಲ್ಲೊಬ್ಬ ವ್ಯಕ್ತಿಗೆ ತನ್ನ ಚಪ್ಪಲಿ ಕದ್ದು ಹೋಗಿರುವುದೇ ದೊಡ್ಡ ಚಿಂತೆಯಾಗಿದೆ. ಸಾಲದಕ್ಕೆ ಆತ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಹಠ ಹಿಡಿದಿದ್ದಾನೆ. ಅಷ್ಟಕ್ಕೂ ಈ ಘಟನೆ ನಡೆದಿರೋದು ಎಲ್ಲಿ ಗೊತ್ತಾ?.

ಚಪ್ಪಲಿ ಹುಡುಕಿಕೊಡಿ

ಉತ್ತರ ಪ್ರದೇಶದಲ್ಲಿ ಕಾನ್ಪುರದಲ್ಲಿ ಈ ಘಟನೆ ನಡೆದಿದೆ. ಕಷ್ಟಪಟ್ಟು ದುಡಿದ ಹಣದಲ್ಲಿ ಚಪ್ಪಲಿ ಖರೀದಿಸಿದರೆ. ಆ ಚಪ್ಪಲಿಯನ್ನು ಯಾರೋ ಕದ್ದಿದ್ದಾರೆ ಎಂದು ಕ್ರಾಂತಿ ಶರಣ್​ ನಿಗಮ್​​ ಎಂಬಾತ ಪೊಲೀಸ್​ ಠಾಣೆಗೆಯಲ್ಲಿ ದೂರು ನೀಡಿದ್ದಾನೆ. ದೂರಿನ ಅನ್ವಯ ಎಫ್​ಐಆರ್​ ಕೂಡ ದಾಖಲಾಗಿದೆ.

ಪೊಲೀಸರ ಮೊರೆ ಹೋದ ಸಂತ್ರಸ್ತ

ಅಂದಹಾಗೆಯೇ ಕ್ರಾಂತಿ ಶರಣ್​ ನಿಗಮ್ ಕಾನ್ಸುರದ ದಬೌಲಿ ಮೂಲದವನಾಗಿದ್ದು, ಗಾಲ್ಟೋಲಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಬರುವ ಶ್ರೀ ಭೈರವಿ ದೇವಸ್ಥಾನಕ್ಕೆ ತೆರಳಿ ಹಿಂತಿರುಗಿ ಬರುವಾಗ ಆತನ ಚಪ್ಪಲಿ ಕಾಣೆಯಾಗಿದೆ. ಇದರಿಂದ ಆತ ನೊಂದಿದ್ದಾನೆ. ಬರಿಗಾಲಿನಲ್ಲೇ ಬಂದ್ದಿದ್ದಾನೆ. ಕೊನೆಗೆ ಕಳೆದು ಹೋದ ಚಪ್ಪಲಿ ಹುಡುಕಿ ಕೊಡಿ ಎಂದು ಕ್ರಾಂತಿ ಶರಣ್​ ಆನ್​ಲೈನ್​ ಮೂಲಕ ಎಫ್​ಐಆರ್​ ದಾಖಲಿಸಿದ್ದಾನೆ. ಆದರೆ ಕಳೆದು ಹೋದ ಆತನ ಚಪ್ಪಲಿ ಮರಳಿ ಸಿಗುತ್ತೋ ಎಂದು ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಪ್ಪಲಿ ಕಳೆದು ಹೋಗಿದೆ ಹುಡುಕಿ ಕೊಡಿ ಪ್ಲೀಸ್​.. ಚಪ್ಪಲಿಗಾಗಿ ಠಾಣೆ ಮೆಟ್ಟಿಲೇರಿದ ವ್ಯಕ್ತಿ!

https://newsfirstlive.com/wp-content/uploads/2023/07/Tempel-Slipper.jpg

Load More