newsfirstkannada.com

ವಿರಾಟ್ ಕೊಹ್ಲಿ- ಬ್ಯೂಟಿ ತಮನ್ನಾ ನಡುವೆ ಮತ್ತೆ ಗಾಸಿಪ್‌; ಈ ಬಗ್ಗೆ ಅನುಷ್ಕಾ ಶರ್ಮಾಗೆ ಸಲಹೆ ಕೊಟ್ಟವಱರು?

Share :

Published July 30, 2023 at 2:08pm

    ವರ್ಷಗಳೇ ಕಳೆದರೂ ವಿರಾಟ್ ಜತೆ ತಮನ್ನಾ ಲಿಂಕ್​ ಮಾಡ್ತಾರೆ..!

    ಕೊಹ್ಲಿ ಬಗ್ಗೆ ಎಚ್ಚರವಾಗಿರು ಅಂತಾ ಪತ್ನಿ ಅನುಷ್ಕಾಗೆ ಫ್ಯಾನ್ಸ್​ ಸಲಹೆ

    ಕೆಲವರು ಡೇಟಿಂಗ್ ಅಂತೆಲ್ಲ ಸುತ್ತಾಡಿ ಕೊನೆ, ಕೊನೆಗೆ ಕೈ ಕೊಡ್ತಾರೆ

ಕ್ರಿಕೆಟ್ ಹಾಗೂ ಬಾಲಿವುಡ್​.. ಈ ಎರಡು ಕ್ಷೇತ್ರಗಳು ಬೇರೆ ಬೇರೆ. ಆದರೂ ಇವರಿಬ್ಬರ ನಡುವಿನ ನಂಟು ಮಾತ್ರ ಬಿಡಿಸಲು ಅಸಾಧ್ಯವಾದದ್ದಾಗಿದೆ. ಯಾಕಂದ್ರೆ, ಅಷ್ಟರ ಮಟ್ಟಿಗೆ ಅಂಟಿಕೊಂಡಿದೆ. ಇವರು ಎಷ್ಟೇ ದೂರವಿದ್ದರು ಇವರ ನಡುವಿನ ರೂಮರ್ಸ್​ಗೆ ಮಾತ್ರ ಬ್ರೇಕ್ ಬೀಳೋ ಮಾತೇ ಇಲ್ಲ.

ಕ್ರಿಕೆಟ್ ಹಾಗೂ ಬಾಲಿವುಡ್ ಬಾಂಡಿಂಗ್ ಇಂದು ನಿನ್ನೆಯದ್ದಲ್ಲ ಬಹಳ ವರ್ಷಗಳ ಹಳೆಯದ್ದು. ಕ್ರಿಕೆಟರ್ಸ್​ ಹಾಗೂ ಫಿಲ್ಮ್ ಸ್ಟಾರ್ಸ್​ ನಡುವಿನ ಅಫೇರ್​ಗಳು ಸೀಕ್ರೆಟ್​ ಹಾಗೇನೂ ಉಳಿದಿಲ್ಲ. ಈ ಪೈಕಿ ಕೆಲವ್ರು ಮದುವೆಯಾಗಿ ಸಕ್ಸಸ್​​ಫುಲ್ ಜೀವನ ನಡೆಸ್ತಿದ್ರೆ. ಕೆಲವರು ಡೇಟಿಂಗ್ ಅಂತೆಲ್ಲ ಸುತ್ತಾಡಿ ಕೊನೆಗೆ ಕೈ ಕೊಟ್ಟಿದ್ದು ಇದೆ. ಕೆಲ ಜೋಡಿಗಳು ಗಾಸಿಪ್​ಗೆ ಸೀಮಿತವಾಗಿದ್ದು ಇದೆ. ಹೀಗೆ ಗಾಸಿಪ್​​ಗೆ ಸೀಮಿತವಾದವರ ಪೈಕಿ ವಿರಾಟ್​ ಕೊಹ್ಲಿ ಹಾಗೂ ನಟಿ ತಮ್ಮನ್ನಾ ಭಾಟಿಯಾ ಒಬ್ಬರು.

ವಿರಾಟ್​ ಕೊಹ್ಲಿಗೆ ಕಾಡ್ತಿದೆ 10 ವರ್ಷಗಳ ಜಾಹೀರಾತು

ಬರೋಬ್ಬರಿ 10 ವರ್ಷಗಳ ಹಿಂದೆ ಮೊಬೈಲ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು ವಿರಾಟ್ ಕೊಹ್ಲಿ ಆ್ಯಂಡ್ ನಟಿ ತಮನ್ನಾ ಭಾಟಿಯಾ. ಆಗಷ್ಟೇ ಸ್ಟಾರ್​ಗಳಾಗಿ ಗುರುತಿಸಿಕೊಂಡಿದ್ರು. ಸಿನಿಮಾ ಇಂಡಸ್ಟ್ರಿಗೆ ತಮನ್ನಾ ಆಗಷ್ಟೇ ಕಾಲಿಟ್ರೆ. ವಿರಾಟ್ ಸೂಪರ್​ ಸ್ಟಾರ್​​ ಆಗುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದರು. ಈ ಮೊಬೈಲ್​ ಜಾಹೀರಾತಿನಲ್ಲಿ ವಿರಾಟ್​, ತಮನ್ನಾಗೆ ಫ್ಲರ್ಟ್​ ಮಾಡಿದ್ದೇ ತಡ ಕಣ್ಣಾಮುಚ್ಚಾಲೆಯ ಗಾಸಿಪ್ ಶುರುವಾಗಿತ್ತು. ಆ ಮೊಬೈಲ್​ ಇಲ್ಲವಾಗಿ ವರ್ಷಗಳೇ ಕಳೆದರು ನಮ್ಮಿಬ್ಬರ ನಡುವೆ ಏನಿಲ್ಲ ಅಂತಾ ಸ್ಪಷ್ಟನೆ ನೀಡಿದರು ಲಿಂಕ್​ ಅಪ್​​ ಗಾಸಿಪ್​​ಗೆ ಮಾತ್ರ ಬ್ರೇಕ್​ ಬಿದ್ದಿದ್ದೇ ಇಲ್ಲ.

ಲಸ್ಟ್​ ಸ್ಟೋರಿಸ್-2 ಬಳಿಕ ಮತ್ತೆ ಮುನ್ನಲೆಗೆ ಬಂತು ಗಾಸಿಪ್

ಲಸ್ಟ್ ಸ್ಟೋರೀಸ್-2 ಬೆನ್ನಲ್ಲೇ ಮಿಲ್ಕಿ ಬ್ಯೂಟಿ ತಮ್ಮನ್ನಾ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡಿದ್ರು. ಅಷ್ಟೇ ಅಲ್ಲ, ಭಾರೀ ಚರ್ಚೆಗೂ ಕಾರಣವಾಗಿದ್ರು. ಇದು ಜಸ್ಟ್​ ನಟಿ ತಮನ್ನಾಗೆ ಸೀಮಿತವಾಗಲಿಲ್ಲ. ತಮನ್ನಾ ಜೊತೆ ಜೊತೆಗೆ ವಿರಾಟ್​ ಕೊಹ್ಲಿ ಕೂಡ ಟ್ರೆಂಡ್​ ಆಗಿದ್ರು. ಈ ವೆಬ್ ಸಿರೀಸ್​ ವೇಳೆ ತಮನ್ನಾ, ನಟ ವಿಜಯ್ ವರ್ಮ ಜೊತೆಗಿನ ರಿಲೇಷನ್​ಶಿಪ್​ ಬಗ್ಗೆ ಮುಕ್ತವಾಗಿ ಮಾತನಾಡಿದ್ದರು. ಹೀಗಾದ್ರೂ ಸಹ ಕೊಹ್ಲಿ-ತಮನ್ನಾರ ಕಮಿಸ್ಟ್ರಿಯನ್ನೇ ಫ್ಯಾನ್ಸ್​ ಪದೇ ಪದೇ ಎಳೆದು ತರ್ತಿದ್ದಾರೆ.

ವಿಜಯ್ ವರ್ಮಾ ಮತ್ತು ತಮನ್ನಾ ಭಾಟಿಯಾ

ಅನುಷ್ಕಾ ಶರ್ಮಾ ಜೊತೆ ಆರಾಮಾಗಿದ್ದಾರೆ ಕೊಹ್ಲಿ.!

ಅನುಷ್ಕಾ ಶರ್ಮಾ ಹಾಗೂ ವಿರಾಟ್​ ಕೊಹ್ಲಿ ಕ್ಯೂಟ್ ಕಪಲ್ಸ್​. ಇವರಿಬ್ಬರ ಮದುವೆಯಾಗಿ ಸುಖ ಸಂಸಾರ ನಡೆಸ್ತಿದ್ದಾರೆ. ತಮ್ಮದೇ ಆದ ಜೀವನವನ್ನ ಎಂಜಾಯ್ ಮಾಡ್ತಿದ್ದಾರೆ. ಹೀಗಾದರೂ ಫ್ಯಾನ್ಸ್​ ಮಾತ್ರ ಕೊಹ್ಲಿನಾ ಬಿಟ್ಟಿಲ್ಲ. ಅದು ಯಾವ ಮಟ್ಟಕ್ಕೆಂದ್ರೆ, ಸ್ವತಃ ಕೊಹ್ಲಿ ಪತ್ನಿ ಅನುಷ್ಕಾಗೆ ಟ್ಯಾಗ್ ಮಾಡಿ ವಿರಾಟ್ ಬಗ್ಗೆ ಕಂಪ್ಲೇಂಟ್ ಮಾಡ್ತಿದ್ದಾರೆ. ವಿರಾಟ್​ ಬಗ್ಗೆ ಎಚ್ಚರಿಕೆಯಿಂದ ಇರು ಅತ್ತಿಗೆ ಎಂದು ನಟಿ ಅನುಷ್ಕಾ ಶರ್ಮಾಗೆ ಸಲಹೆ ನೀಡ್ತಿದ್ದಾರೆ..

ಅದೇನೇ ಆಗಲಿ, ಇಂಟರ್​ನೆಟ್​ ಒಳ್ಳೆಯದ್ದೋ ಅಥವಾ ಕೆಟ್ಟದ್ದೋ ಆದ್ರೆ, ಒಮ್ಮೆ ಅಪ್ಲೋಡ್ ಮಾಡಿದ್ರೆ ಮುಗೀತು. ಕಾಲ ಬದಲಾದರು ಅವರ ಬಗೆಗಿನ ಅಭಿಪ್ರಾಯ ಮಾತ್ರ ಹಾಗೇ ಉಳಿಯುವಂತೆ ಮಾಡೋದ್ರಲ್ಲಿ ಅನುಮಾನ ಇಲ್ಲ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ವಿರಾಟ್ ಕೊಹ್ಲಿ- ಬ್ಯೂಟಿ ತಮನ್ನಾ ನಡುವೆ ಮತ್ತೆ ಗಾಸಿಪ್‌; ಈ ಬಗ್ಗೆ ಅನುಷ್ಕಾ ಶರ್ಮಾಗೆ ಸಲಹೆ ಕೊಟ್ಟವಱರು?

https://newsfirstlive.com/wp-content/uploads/2023/07/Tamannaah_Virat_Anushka.jpg

Load More