newsfirstkannada.com

ಪಬ್‌ ಜೀ ಪ್ರೀತಿಯ ಸೀಮಾ ಸಾಮಾನ್ಯಳಲ್ಲ.. ಪಾಕಿಸ್ತಾನದ ISI ಏಜೆಂಟಾ?; ಎಲ್ಲರನ್ನೂ ಬೆಚ್ಚಿ ಬೀಳಿಸೋ ಸ್ಟೋರಿ ಇಲ್ಲಿದೆ

Share :

Published July 17, 2023 at 6:07pm

Update July 17, 2023 at 6:08pm

    ಪಾಕ್‌ ಹಿಂದೂ ದೇವಾಲಯಗಳ ಮೇಲೆ ದಾಳಿಗೂ ಈಕೆಗೂ ಲಿಂಕ್?

    ಸೀಮಾ ಹೈದರ್ ಭಾರತವನ್ನು ಬಿಟ್ಟು ಹೋಗಲು 72 ಗಂಟೆಗಳ ಗಡುವು

    ಪಬ್‌ ಜೀ ಪ್ರೇಮಿ ಸೀಮಾ ಬಳಿ ಮೂರು ನಾಲ್ಕು ಫೋನ್‌ಗಳು ಯಾಕೆ?

ನೋಯ್ಡಾ: ಉತ್ತರಪ್ರದೇಶದ ಸಚಿನ್​ ಎನ್ನುವ ಯುವಕನನ್ನು ಹುಡುಕಿಕೊಂಡು ಪಾಕ್​ ಮೂಲದ ಸೀಮಾ ಗುಲಾಮ್ ಹೈದರ್ ಭಾರತಕ್ಕೆ ಬಂದಿದ್ದರು. ಪಬ್​ಜೀ ಆಡುವಾಗ ಮೂಡಿದ ಪ್ರೀತಿ ಇವರಿಬ್ಬರನ್ನು ಎರಡು ದೇಶಗಳ ಗಡಿ ದಾಟಿ ಒಂದಾಗುವಂತೆ ಮಾಡಿತ್ತು. ಹೀಗೆ ಒಂದಾಗಿದ್ದ ಈ ಜೋಡಿ ನೋಯ್ಡಾದ ಅಪಾರ್ಟ್​ಮೆಂಟ್​ನಲ್ಲಿ ಯಾರಿಗೂ ಗೊತ್ತಿಲ್ಲದಂತೆ ತಮ್ಮ ನಾಲ್ವರು ಮಕ್ಕಳೊಂದಿಗೆ ವಾಸವಿದ್ದರು. ವೀಸಾ ಇಲ್ಲದೇ ಅಕ್ರಮವಾಗಿ ಭಾರತಕ್ಕೆ ಬಂದಿದ್ದರಿಂದ ಜುಲೈ 4ರಂದು ಪೊಲೀಸರು ಸೀಮಾಳನ್ನು ಬಂಧಿಸಿ, ಆಕೆಗೆ ಆಶ್ರಯ ನೀಡಿದ್ದಕ್ಕೆ ಸಚಿನ್​ ಅನ್ನು ಕೂಡ ಅರೆಸ್ಟ್ ಮಾಡಿದ್ದರು.

ಇವರಿಬ್ಬರ ಮಧ್ಯೆ ಪಬ್ ಜೀ ಪ್ರೀತಿಯೆಂದು ನಂಬಿದ್ದ ನೋಯ್ಡಾ ಪೊಲೀಸರು ವಿಚಾರಣೆ ನಡೆಸಿ ಕಳುಹಿಸಿದ್ದರು. ಆದ್ರೀಗ ಸೀಮಾ ಹೈದರ್ ಮೇಲೆ ಸಾಕಷ್ಟು ಅನುಮಾನಗಳು ವ್ಯಕ್ತವಾಗಿವೆ. ಸೀಮಾ ಹೈದರ್ ಬರೀ ಪ್ರೇಮಿಯಲ್ಲ. ಪಾಕಿಸ್ತಾನದ ಐಎಸ್ಐ ಏಜೆಂಟ್ ಆಗಿರುವ ಶಂಕೆ ವ್ಯಕ್ತವಾಗಿದೆ. ಯಾಕಂದ್ರೆ ಸೀಮಾ ಹೈದರ್, ಪಾಕಿಸ್ತಾನದಿಂದ ದುಬೈ, ದುಬೈನಿಂದ ನೇಪಾಳದ ಮೂಲಕ ಭಾರತ ಪ್ರವೇಶಿಸಿದ್ದರು. ಹೀಗಾಗಿ ಸೀಮಾ ಹೈದರ್ ಮೇಲೆ ಈಗ ಭಾರತದ ಇಂಟಲಿಜೆನ್ಸ್ ಏಜೆನ್ಸಿ, ಯುಪಿ ಎಟಿಎಸ್ ತೀವ್ರ ನಿಗಾ ಇಟ್ಟಿದೆ.

ಇಷ್ಟೆಲ್ಲಾ ಸದ್ದು ಗದ್ದಲದ ಬಳಿಕ ಸೀಮಾ ಹೈದರ್ ನಡೆಯ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲಾಗುತ್ತಿದೆ. ಸೀಮಾ ಹೈದರ್ ಬಳಿ ಮೂರು ನಾಲ್ಕು ಫೋನ್‌ಗಳಿವೆಯಂತೆ. ಸೀಮಾ ಪೋನ್ ಕಾಲ್‌ಗಳ ಬಗ್ಗೆಯೂ ತನಿಖೆ ನಡೆಸಲಾಗಿದೆ. ಹೀಗಾಗಿ ಉತ್ತರ ಪ್ರದೇಶದ ಭಯೋತ್ಪಾದಕ ನಿಗ್ರಹ ಪಡೆ ಸೀಮಾ ಹೈದರ್ ಅವರ ಸೋಷಿಯಲ್ ಮೀಡಿಯಾ ಖಾತೆಗಳ ಬಗ್ಗೆ ತೀವ್ರ ತನಿಖೆ ನಡೆಸುತ್ತಿದೆ.

ಇದನ್ನೂ ಓದಿ: ಕರಾಚಿಯಲ್ಲಿ ಬುಲ್ಡೋಜರ್ ಹತ್ತಿಸಿ ವಿಕೃತಿ, ಸಿಂಧ್​​​ನಲ್ಲಿ ರಾಕೆಟ್​ ದಾಳಿ ಮಾಡಿ ದುಷ್ಕೃತಿ.. ಪೊಲೀಸ್ ಭದ್ರತೆಯಲ್ಲೇ ಪಾಕ್​​ನಲ್ಲಿ ಹಿಂದೂ ದೇಗುಲಗಳ ಧ್ವಂಸ..!

ಸೀಮಾ ಹೈದರ್ ಬಗ್ಗೆ ಭಾರತದ ತನಿಖಾ ಏಜೆನ್ಸಿಗಳಿಗೆ ಸಾಕಷ್ಟು ಪ್ರಶ್ನೆ, ಅನುಮಾನಗಳಿವೆ. ನೋಯ್ಡಾದ ರಹಸ್ಯ ಸ್ಥಳದಲ್ಲಿ ಸೀಮಾ ಹೈದರ್, ಸಚಿನ್ ಇಬ್ಬರನ್ನೂ ಪ್ರತ್ಯೇಕವಾಗಿ ವಿಚಾರಣೆ ನಡೆಸಲಾಗುತ್ತಿದೆ. ಪ್ರಮುಖವಾಗಿ ಸೀಮಾ ಹೈದರ್ ಗಡಿ ದಾಟಿ ಭಾರತಕ್ಕೆ ಬಂದಿದ್ದಕ್ಕೆ ಪಾಕಿಸ್ತಾನದಲ್ಲಿ ಹಿಂದೂ ದೇವಾಲಯ ಧ್ವಂಸಗೊಳಿಸಲಾಗಿದೆ. ಪಾಕಿಸ್ತಾನದ ಹಿಂದೂ ದೇವಾಲಯಗಳ ಮೇಲೆ ಪ್ರತೀಕಾರದ ದಾಳಿ ನಡೆಯುತ್ತಿದೆ ಎನ್ನಲಾಗಿದೆ. ಕಳೆದ ಎರಡು ದಿನಗಳ ಅಂತರದಲ್ಲಿ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಮರಿ ಮಾತಾ ದೇವಾಲಯ ಹಾಗೂ ಕರಾಚಿಯ ದೇವಾಲಯವನ್ನು ದುಷ್ಕರ್ಮಿಗಳು ನಾಶ ಮಾಡಿದ್ದರು. ಸೀಮಾ ಹೈದರ್‌ಗಾಗಿ ಪಾಕಿಸ್ತಾನದಲ್ಲಿ ಹಿಂದೂಗಳು ಟಾರ್ಗೆಟ್ ಆಗುತ್ತಿದ್ದಾರೆ. ಸೀಮಾ ಹೈದರ್ ನನ್ನು ಪಾಕಿಸ್ತಾನಕ್ಕೆ ಹಿಂತುರುಗಿಸಲು ಆಗ್ರಹ ಕೇಳಿ ಬಂದಿದೆ. ಹಿಂದೂ ಸಂಘಟನೆಗಳು ಸೀಮಾ ಹೈದರ್ ಭಾರತವನ್ನು ಬಿಟ್ಟು ಹೋಗಬೇಕು. 72 ಗಂಟೆಯಲ್ಲಿ ಅವರನ್ನು ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಪಬ್‌ ಜೀ ಪ್ರೀತಿಯ ಸೀಮಾ ಸಾಮಾನ್ಯಳಲ್ಲ.. ಪಾಕಿಸ್ತಾನದ ISI ಏಜೆಂಟಾ?; ಎಲ್ಲರನ್ನೂ ಬೆಚ್ಚಿ ಬೀಳಿಸೋ ಸ್ಟೋರಿ ಇಲ್ಲಿದೆ

https://newsfirstlive.com/wp-content/uploads/2023/07/Pakistan-Seema.jpg

Load More