newsfirstkannada.com

Chandrayaan-3: ಜುಲೈ 14 ರಿಂದ ಚಂದ್ರಯಾನ-3 ಜರ್ನಿ ಆರಂಭ.. ಚಂದ್ರನಿದ್ದಲ್ಲಿಗೆ ಹೋಗಲು ಎಷ್ಟುದಿನ ಬೇಕು ಗೊತ್ತಾ..?

Share :

Published July 8, 2023 at 12:41pm

Update July 8, 2023 at 12:42pm

    ಇಸ್ರೋದ ಮಹತ್ವಾಕಾಂಕ್ಷಿ ಪ್ರಾಜೆಕ್ಟ್​ ಚಂದ್ರಯಾನ-3

    ಬರೋಬ್ಬರಿ 600 ಕೋಟಿ ಮೊತ್ತದ ಪ್ರಾಜೆಕ್ಟ್ ಇದಾಗಿದೆ

    ​ಬಾಹ್ಯಾಕಾಶ ನೌಕೆಯು ಲ್ಯಾಂಡ್​, ರೋವರ್ ಕೊಂಡೊಯ್ಯಲಿದೆ​

ಇಂಡಿಯನ್ ಸ್ಪೇಸ್​ ರಿಸರ್ಜ್ ಆರ್ಗನೈಜೇಷನ್ (ಇಸ್ರೋ) ಜುಲೈ 14 ರಂದು ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಸ್ಪೇಸ್​ ಸೆಂಟರ್​ನಿಂದ, ಚಂದ್ರನಿದ್ದಲ್ಲಿಗೆ ಚಂದ್ರಯಾನ-3 ಮಷಿನ್ ಕಳುಹಿಸಲಿದೆ.

LVM-III (Launch Vehicle Mark-III) ಸ್ಯಾಟಲೈಟ್ ಲಾಂಚಿಂಗ್ ವೆಹಿಕಲ್, ಚಂದ್ರಯಾನದ ಮಷಿನ್​ಗಳನ್ನು ಹೊತ್ತು ಶುಕ್ರವಾರ ಮಧ್ಯಾಹ್ನ 2.35ಕ್ಕೆ ನಭದತ್ತ ಚಿಮ್ಮಲಿದೆ. ಈ ಮೂಲಕ ನಮ್ಮ ಹೆಮ್ಮೆಯ ಇಸ್ರೋ ಮತ್ತೊಂದು ಐತಿಹಾಸಿಕ ಮೈಲಿಗಲ್ಲು ಊರಲಿದೆ.

2019ರಲ್ಲಿ ಇಸ್ರೋ ಚಂದ್ರಯಾನ-2 ಉಡ್ಡಯನ ಮಾಡಿತ್ತು. ಚಂದ್ರನ ಅಂಗಳ ತಲುಪುವಲ್ಲಿ ಈ ಯೋಜನೆ ಯಶಸ್ವಿಯಾಗಿತ್ತು. ಆದರೆ ಚಂದ್ರನ ಸ್ಪರ್ಷ ಮಾಡುವ ಸಂದರ್ಭದಲ್ಲಿ ಸಾಫ್ಟ್​ ಲ್ಯಾಂಡ್ ಆಗದ ಹಿನ್ನೆಲೆಯಲ್ಲಿ, ಭಾರತದ ಮಹತ್ವಕಾಂಕ್ಷೆಯ Chandrayaan-2 ಫೇಲ್ಯೂರ್ ಆಗಿತ್ತು. ಹಳೆಯ ತಪ್ಪುಗಳನ್ನು ತಿದ್ದುಕೊಂಡಿರುವ ಇಸ್ರೋ ವಿಜ್ಞಾನಿಗಳು ಈ ಬಾರಿ ಸಾಫ್ಟ್​ ಲ್ಯಾಂಡಿಂಗ್​​ಗೆ ಹೆಚ್ಚು ಒತ್ತು ನೀಡಿದ್ದಾರೆ.

ಚಂದ್ರನಿದ್ದಲ್ಲಿ ಹೋಗಲು ಎಷ್ಟು ದಿನ ಬೇಕು..?

2019ರಲ್ಲಿ ಉಡಾವಣೆಗೊಂಡಿದ್ದ ಚಂದ್ರಯಾನ-2 ಮಷಿನ್, ಚಂದ್ರನಿದ್ದಲ್ಲಿಗೆ ತಲುಪಲು ಬರೋಬ್ಬರಿ 48 ದಿನಗಳನ್ನು ತೆಗೆದುಕೊಂಡಿತ್ತು. ಅಂದರೆ ಜುಲೈ 22, 2019ರಂದು ಶ್ರೀಹರಿಕೋಟಾದಿಂದ ರಾಕೆಟ್ ಉಡಾಯಿಸಲಾಗಿತ್ತು. ಇದು ಅಗಸ್ಟ್​ 20, 2019 ರಂದು ಚಂದ್ರನ ಕಕ್ಷೆಯನ್ನು ತಲುಪಿತ್ತು. ಚಂದ್ರ ಮತ್ತು ಭೂಮಿಗೆ ಬರೋಬ್ಬರಿ 384400 ಕಿಲೋ ಮೀಟರ್ ದೂರ ಇರೋದ್ರಿಂದ ಇಷ್ಟೊಂದು ಸಮಯ ತೆಗೆದುಕೊಂಡಿತ್ತು.

ಅದರಂತೆ ಈ ಬಾರಿಯೂ ಕೂಡ ಚಂದ್ರನ ತಲುಪಲು ದೀರ್ಘ ಕಾಲ ತೆಗೆದುಕೊಳ್ಳಲಿದೆ. ಈ ಬಾರಿಯ ಚಂದ್ರಯಾನ-3 ಜರ್ನಿಯು ಜುಲೈ 14 ರಿಂದ ಆರಂಭಗೊಳ್ಳಲಿದೆ. ಈ ಬಾರಿಯೂ ಕೂಡ ಚಂದ್ರಯಾನ-3 ಮಷಿನ್ ಚಂದ್ರನ ತಲುಪಲು 45 ರಿಂದ 48 ದಿನಗಳ ಕಾಲ ತೆಗೆದುಕೊಳ್ಳುವ ನಿರೀಕ್ಷೆ ಇದೆ. ಇಸ್ರೋದ ವಿಜ್ಞಾನಿಗಳ ಪ್ರಕಾರ, ಆಗಸ್ಟ್ 23 ಅಥವಾ 24 ರಂದು ಲ್ಯಾಂಡ್ ಆಗುವ ಸಾಧ್ಯತೆ ಇದೆ.

ಇದನ್ನೂ ಓದಿ: Chandrayaan-3: ಕನಸುಗಳ ಹೊತ್ತು ಭಾರತಾಂಬೆಯ ಮಕ್ಕಳು ನಿನ್ನಲ್ಲಿಗೆ ಬರ್ತಿದ್ದಾರೆ ಕೈಗೆ ಸಿಗು ‘ಓ ಚಂದಮಾಮ’..!

ಇದನ್ನೂ ಓದಿ: Chandrayaan-3: ಉಡಾವಣೆಗೆ ಸಿದ್ಧಗೊಂಡ ಚಂದ್ರಯಾನ ಮಷಿನ್ -ಹೊಸ ಫೋಟೋಗಳನ್ನು ಹಂಚಿಕೊಂಡ ಇಸ್ರೋ ವಿಜ್ಞಾನಿಗಳು..!

ಇದನ್ನೂ ಓದಿ: Chandrayaan-3 : ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಜ್ಜಾದ ಭಾರತ -ಚಂದ್ರಯಾನ-3 ಉಡಾವಣೆಗೆ ಡೇಟ್​ ಫಿಕ್ಸ್​..!

ಇದನ್ನೂ ಓದಿ: Breaking News: ಮುಂದಿನ ತಿಂಗಳೇ ನಡೆಯಲಿಕ್ಕಿದೆ ಚಂದ್ರಯಾನ-3 ಉಡಾವಣೆ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Chandrayaan-3: ಜುಲೈ 14 ರಿಂದ ಚಂದ್ರಯಾನ-3 ಜರ್ನಿ ಆರಂಭ.. ಚಂದ್ರನಿದ್ದಲ್ಲಿಗೆ ಹೋಗಲು ಎಷ್ಟುದಿನ ಬೇಕು ಗೊತ್ತಾ..?

https://newsfirstlive.com/wp-content/uploads/2023/07/CHANDRAYAANA.jpg

Load More