newsfirstkannada.com

ಟೈಟಾನ್ ಸಬ್ ಮರ್ಸಿಬಲ್‌ನಲ್ಲಿ ಹೋದವರು ಯಾರು? ಮುಂದುವರಿದ ಶೋಧ; ಆ್ಯಕ್ಸಿಜನ್ ಲೆವೆಲ್ ಇನ್ನು 7 ಗಂಟೆಯಷ್ಟೇ ಬಾಕಿ

Share :

Published June 22, 2023 at 1:48pm

Update June 22, 2023 at 2:02pm

    ಸಮುದ್ರದ 12,500 ಮೀಟರ್ ಆಳದಲ್ಲಿರುವ ಟೈಟಾನಿಕ್ ಹಡಗಿನ ಅವಶೇಷಗಳು

    ಸಬ್ ಮರ್ಸಿಬಲ್‌ನಲ್ಲಿ ಪ್ರಯಾಣ ಮಾಡಿದ ಐವರಿಗಾಗಿ ನಿರಂತರ ಶೋಧ ಕಾರ್ಯ

    ನಾಸಾ ಸೇರಿ ಉನ್ನತ ತಜ್ಞರ ನೆರವು ಪಡೆದು ಸಬ್ ಮರ್ಸಿಬಲ್‌ಗಾಗಿ ಹುಡುಕಾಟ

ಲಂಡನ್: ನಾರ್ತ್ ಅಟ್ಲಾಂಟಿಕ್ ಸಮುದ್ರದ 12,500 ಮೀಟರ್ ಆಳದಲ್ಲಿರುವ ಟೈಟಾನಿಕ್ ಹಡಗಿನ ಅವಶೇಷಗಳನ್ನು ನೋಡಲು ಹೋಗಿದ್ದ ಟೈಟಾನ್ ಸಬ್ ಮರ್ಸಿಬಲ್ ನಾಪತ್ತೆಯಾಗಿದೆ. ಕಳೆದ ನಾಲ್ಕು ದಿನಗಳಿಂದ ಸಬ್ ಮರ್ಸಿಬಲ್‌ನಲ್ಲಿ ಪ್ರಯಾಣ ಮಾಡಿದ ಐವರಿಗಾಗಿ ನಿರಂತರ ಶೋಧ ಕಾರ್ಯ ನಡೆಯುತ್ತಿದೆ. ಸಬ್ ಮರ್ಸಿಬಲ್‌ನಲ್ಲಿದ್ದ ಆಕ್ಸಿಜನ್ ಲೆವೆಲ್‌ ಮುಗಿಯುವ ಹಂತದಲ್ಲಿದ್ದು ಆತಂಕ ಹೆಚ್ಚಿಸಿದೆ.

ಟೈಟಾನಿಕ್ ಹಡಗು ಮುಳುಗಿದ್ದ ಸ್ಥಳವನ್ನು ನೋಡಲು ನಾಲ್ವರು ಪ್ರವಾಸಿಗರು, ಓರ್ವ ಡ್ರೈವರ್ ಟೈಟಾನ್ ಸಬ್ ಮರ್ಸಿಬಲ್‌ನಲ್ಲಿ ಹೋಗಿದ್ದಾರೆ. ಸಮುದ್ರದಲ್ಲಿ 12,500 ಮೀಟರ್ ಆಳಕ್ಕೆ ತೆರಳಿದ ಮೇಲೆ ಟೈಟಾನ್ ಸಬ್ ಮರ್ಸಿಬಲ್ ಜೊತೆಗಿನ ಸಂಪರ್ಕ ಕಡಿತವಾಗಿತ್ತು. ಆಮೇಲೆ ಸಮುದ್ರದ ಆಳದಿಂದ ಬರುತ್ತಿರುವ ಶಬ್ಧಗಳು ಆಪತ್ತಿನಲ್ಲಿರುವವರನ್ನು ರಕ್ಷಿಸೋ ಆಶಾಭಾವನೆ ಮೂಡಿಸಿತ್ತು. ಆದರೆ ಈಗ ಅದು ಯಾಕೋ ಸಕ್ಸಸ್ ಆಗೋ ಲಕ್ಷಣ ಕಾಣುತ್ತಿಲ್ಲ.

ಅಮೆರಿಕಾ, ಕೆನಡಾದ ಕರಾವಳಿ ಪಡೆಗಳಿಂದ ಟೈಟಾನ್ ಸಬ್ ಮರ್ಸಿಬಲ್‌ಗಾಗಿ ತೀವ್ರ ಹುಡುಕಾಟ ನಡೆದಿದೆ. ಅತ್ಯುನ್ನತ ಉಪಕರಣಗಳನ್ನ ಬಳಸಿ ಟೈಟಾನ್ ಸಬ್ ಮರ್ಸಿಬಲ್ ಇರುವ ಸ್ಥಳಕ್ಕಾಗಿ ಹುಡುಕಾಟ ನಡೆಸಲಾಗ್ತಿದೆ. ನಾಸಾ ಸೇರಿದಂತೆ ಉನ್ನತ ತಜ್ಞರ ನೆರವು ಪಡೆದು ನಾಪತ್ತೆಯಾದ ಟೈಟಾನ್ ಸಬ್ ಮರ್ಸಿಬಲ್‌ಗಾಗಿ ಶೋಧ ಕಾರ್ಯ ನಡೆಸಲಾಗಿದೆ.

ಇದನ್ನೂ ಓದಿ: ‘ಟೈಟಾನಿಕ್’ ಅವಶೇಷ ನೋಡಲು ಹೋಗಿದ್ದ ಜಲಂತರ್ಗಾಮಿ ನೌಕೆ ಮಿಸ್ಸಿಂಗ್.. ಹೇಗೆ ನಡೀತಿದೆ ಶೋಧಕಾರ್ಯ..?

ನಿರಂತರ ಹುಡುಕಾಟದ ಮಧ್ಯೆ ಸಬ್ ಮರ್ಸಿಬಲ್‌ನಲ್ಲಿ ‌ಇರುವ ಐದು ಮಂದಿ ಬಿಲಿಯನೇರ್‌ಗಳ ಮಾಹಿತಿ ಬಹಿರಂಗವಾಗಿದೆ. ಬ್ರಿಟಿಷ್ ಬಿಲಿಯನೇರ್ ಹಮೀಶ್‌ ಹಾರ್ಡಿಂಗ್, ಓಷಿಯನ್ ಗೇಟ್ ಎಕ್ಸ್‌ಪಿಡಿಯೇಷನ್ ಸ್ಥಾಪಕ ಸಿಇಓ ಸ್ಟಾಕಟನ್ ರುಶ್ ಪತ್ನಿ, ಪಾಕಿಸ್ತಾನದ ಬ್ಯುಸಿನೆಸ್ ಮೆನ್ ಶಾಹಜಾದ್ ದಾವೂದ್, 19 ವರ್ಷದ ಸುಲೇಮಾನ್ ದಾವೂದ್, ಫ್ರೆಂಚ್ ಡ್ರೈವರ್ ಪೌಲ್ ಹೆನ್ರಿ ನಾರ್ಗೋಲೆಟ್ ಸಬ್ ಮರ್ಸಿಬಲ್‌ನಲ್ಲಿ ಪ್ರಯಾಣ ನಡೆಸಿದ್ದಾರೆ.

ಟೈಟಾನಿಕ್ ದುರಂತದಲ್ಲಿ ಮಡಿದವರ ಕುಟುಂಬಸ್ಥರಿಗೂ ಅಪಾಯ
ಟೈಟಾನಿಕ್ ಅವಶೇಷ ನೋಡಲು ಹೋದವರಲ್ಲಿ 1912ರಲ್ಲಿ ಸಂಭವಿಸಿದ ಟೈಟಾನಿಕ್ ಹಡಗಿನ ದುರಂತದಲ್ಲಿ ಮಡಿದ ಸ್ಟಾಕಟನ್ ರುಶ್ ಸಂಬಂಧಿಯೂ ಕೂಡ ನಾಪತ್ತೆಯಾಗಿದ್ದಾರೆ. ಇನ್ನು, ಸಬ್ ಮರ್ಸಿಬಲ್‌ನಲ್ಲಿರುವ ಹಮೀಶ್ ಹಾರ್ಡಿಂಗ್ ಭಾರತಕ್ಕೆ ನೆರವು ನೀಡಿದ್ರು. ಕಳೆದ ವರ್ಷ ನಮಿಬಿಯಾದಿಂದ ಚೀತಾಗಳನ್ನು ಭಾರತಕ್ಕೆ ಸ್ಥಳಾಂತರಿಸಲು ಆಕ್ಷನ್ ಏವಿಯೇಷನ್‌ ಕಂಪನಿ ಹೊಂದಿರುವ ಕ್ಯಾಪ್ಟನ್ ಹಮೀಶ್ ಹಾರ್ಡಿಂಗ್ ನೆರವು ನೀಡಿದ್ದರು. ಹಮೀಶ್ ಹಾರ್ಡಿಂಗ್ ಅವರು ನಮಿಬಿಯಾದಿಂದ ಮಧ್ಯಪ್ರದೇಶದ ಗ್ವಾಲಿಯರ್‌ಗೆ ನಮಿಬಿಯಾದಿಂದ ಚೀತಾ ಸಾಗಾಟಕ್ಕೆ ವಿಮಾನದ ವ್ಯವಸ್ಥೆ ಮಾಡಿದ್ದರು.

ಈ ಟೈಟಾನ್ ಸಬ್ ಮರ್ಸಿಬಲ್‌ನಲ್ಲಿ ಒಮ್ಮೆ ಪ್ರಯಾಣಕ್ಕೆ ತಲಾ ಎರಡು‌ ಕೋಟಿ ರೂಪಾಯಿ ಶುಲ್ಕ ವಿಧಿಸಲಾಗುತ್ತೆ. ಟೈಟಾನ್ ಸಬ್ ಮರ್ಸಿಬಲ್‌ನಲ್ಲಿ ಒಟ್ಟು 96 ಗಂಟೆಗಾಗುವಷ್ಟು ಆಕ್ಸಿಜನ್ ಇತ್ತು. ಇದೀಗ ಅದು ಕರಗುತ್ತಾ ಬಂದು ಇನ್ನು 7 ಗಂಟೆಯಷ್ಟೇ ಬಾಕಿ ಉಳಿದಿದೆ. ಸಬ್ ಮರ್ಸಿಬಲ್‌ನಲ್ಲಿರುವ ಬಿಲಿಯನರ್‌ಗಳಿಗಾಗಿ ಹುಡುಕಾಟ ಇನ್ನೂ ಮುಂದುವರಿದಿದ್ದು, ಸಾವನ್ನೇ ಗೆದ್ದು ಬರ್ತಾರಾ ಅನ್ನೋದು ಇಡೀ ವಿಶ್ವದ ಕುತೂಹಲ ಕೆರಳಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟೈಟಾನ್ ಸಬ್ ಮರ್ಸಿಬಲ್‌ನಲ್ಲಿ ಹೋದವರು ಯಾರು? ಮುಂದುವರಿದ ಶೋಧ; ಆ್ಯಕ್ಸಿಜನ್ ಲೆವೆಲ್ ಇನ್ನು 7 ಗಂಟೆಯಷ್ಟೇ ಬಾಕಿ

https://newsfirstlive.com/wp-content/uploads/2023/06/Titan-Submarine-1.jpg

Load More