ಇಂದಿನಿಂದ ಕರ್ನಾಟಕದ ಅತೀ ದೊಡ್ಡ ಎಡ್ಯುವರ್ಸ್ ಎಜುಕೇಷನ್​ ಎಕ್ಸ್​ಪೋ!

author-image
Bheemappa
Updated On
ಇಂದಿನಿಂದ ಕರ್ನಾಟಕದ ಅತೀ ದೊಡ್ಡ ಎಡ್ಯುವರ್ಸ್ ಎಜುಕೇಷನ್​ ಎಕ್ಸ್​ಪೋ!
Advertisment
  • ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಎಕ್ಸ್​ಪೋ
  • ನ್ಯೂಸ್​ಫಸ್ಟ್ ಸಹಭಾಗಿತ್ವದಲ್ಲಿ ಕಾರ್ಯಕ್ರಮಕ್ಕೆ ಅದ್ಧೂರಿ ಚಾಲನೆ
  • ಒಂದೇ ಸೂರಿನಡಿ 50ಕ್ಕೂ ಹೆಚ್ಚು ಪ್ರತಿಷ್ಠಿತ ಕಾಲೇಜುಗಳು ಭಾಗಿ

ಬೆಂಗಳೂರು: ನ್ಯೂಸ್​ಫಸ್ಟ್ ಚಾನೆಲ್ ಹಾಗೂ ಪ್ರಜಾವಾಣಿ- ಡೆಕ್ಕನ್ ಹೆರಾಲ್ಡ್ ಸಹಭಾಗಿತ್ವದಲ್ಲಿ ನಡೆಯುತ್ತಿರುವ ನಾಡಿನ ಅತ್ಯಂತ ದೊಡ್ಡ ಶೈಕ್ಷಣಿಕ ಮೇಳ ಎಡ್ಯುವರ್ಸ್ ಪ್ರೀಮಿಯರ್ education expoಗೆ ಸ್ಯಾಂಡಲ್​ವುಡ್ ನಟ ವಿಜಯ್ ರಾಘವೇಂದ್ರ ಅವರು ಚಾಲನೆ ನೀಡಿದ್ದಾರೆ.

publive-image

ಸಿಲಿಕಾನ್​ ಸಿಟಿಯ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ನಡೆದ ಕಾರ್ಯಕ್ರಮವನ್ನು ನಟ ವಿಜಯ್ ರಾಘವೇಂದ್ರ ಅವರು ಉದ್ಘಾಟನೆ ಮಾಡಿದರು. ಕಾರ್ಯಕ್ರಮದಲ್ಲಿ ಪ್ರಜಾವಾಣಿ ಚೀಫ್ ಎಡಿಟರ್ ರಶ್ಮಿ.ಎಸ್, ಡೆಕ್ಕನ್ ಹೆರಾಲ್ಡ್ ಮತ್ತು ಪ್ರಜಾವಾಣಿಯ HR ಮುಖ್ಯಸ್ಥ ರಾಜೀವ್ ವೇಲೂರ್, ಶಿಕ್ಷಣ ತಜ್ಞೆ ಐಶ್ವರ್ಯ DKS ಹೆಗ್ಡೆ,‌ ನ್ಯೂಸ್​ಫಸ್ಟ್ ಅಸಿಸ್ಟೆಂಟ್ ಎಡಿಟರ್ ಮತ್ತು ಆ್ಯಂಕರ್ ರಕ್ಷತ್ ಶೆಟ್ಟಿ ಭಾಗಿಯಾಗಿದ್ದಾರೆ.

publive-image

ಇದನ್ನೂ ಓದಿ: PUC ನಂತರ ಮುಂದೇನು? ನಿಮ್ಮ ಎಲ್ಲಾ ಗೊಂದಲಗಳಿಗೆ ಸಿಗಲಿದೆ ಉತ್ತರ, ಡೋಂಟ್ ಮಿಸ್​..!

ಕಾರ್ಯಕ್ರಮದ ಒಂದೇ ಸೂರಿನಡಿ 50ಕ್ಕೂ ಹೆಚ್ಚು ಪ್ರತಿಷ್ಠಿತ ಕಾಲೇಜುಗಳು, ವಿಶ್ವವಿದ್ಯಾಲಯಗಳು ಎಕ್ಸ್ ಪೋದಲ್ಲಿ ಭಾಗಿಯಾಗಿವೆ. ಅಲ್ಲದೇ ಶಿಕ್ಷಣ ಕ್ಷೇತ್ರದ ಪರಿಣಿತರು, ತಜ್ಞರು ಭಾಗಿಯಾಗಿದ್ದು ಸಂವಾದ, ಉಪನ್ಯಾಸ ಹಾಗೂ ವಿದ್ಯಾರ್ಥಿಗಳೊಂದಿಗೆ ಚರ್ಚೆಗೆ ಅವಕಾಶ ಇರುತ್ತದೆ. ಸಿಇಟಿ ಮತ್ತು ಕಾಮೆಡ್-ಕೆ ಸಂಬಂಧಿಸಿದ ವಿಶೇಷ ಗೋಷ್ಠಿಗಳನ್ನು ಆಯೋಜನೆ ಮಾಡಲಾಗಿದೆ. ಈ ಎಡ್ಯುವರ್ಸ್ ಪ್ರೀಮಿಯರ್ education expo ಕಾರ್ಯಕ್ರಮ ಇಂದು ಮತ್ತು ನಾಳೆ ಅದ್ಧೂರಿಯಾಗಿ ನಡೆಯಲಿದೆ. ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ಎಕ್ಸ್ ಪೋ ಇರುತ್ತದೆ. ಆಸಕ್ತರು ಕಾರ್ಯಕ್ರಮದಲ್ಲಿ ಭಾಗಿಯಾಗಬಹುದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment