/newsfirstlive-kannada/media/post_attachments/wp-content/uploads/2024/11/NF_RAVIKUMAR_S.jpg)
ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿ ನ್ಯೂಸ್ಫಸ್ಟ್ ಸಾರಥ್ಯದಲ್ಲಿ ನಡೆಯುತ್ತಿರುವ ಆರೋಗ್ಯ ಹಬ್ಬ ಸಮಾರಂಭಕ್ಕೆ ಸಚಿವ ದಿನೇಶ್ ಗುಂಡೂರಾವ್ ಅವರು ಚಾಲನೆ ನೀಡಿದ್ದಾರೆ. ಇಂದು ಮತ್ತು ನಾಳೆ ನಡೆಯುವ ಈ ಸಮಾರಂಭದಲ್ಲಿ ಸಾಕಷ್ಟು ಭಾಗವಹಿಸಲಿದ್ದಾರೆ.
ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು, ಏನು ಮಾಡಿದರೆ ನಮ್ಮ ಆರೋಗ್ಯ ರಕ್ಷಣೆ ಮಾಡಿಕೊಳ್ಳಲಾಗುತ್ತದೆ ಎಂಬುದನ್ನು ಜನರು ಯೋಚನೆ ಮಾಡಬೇಕು. ನಮ್ಮ ಜೀವನಶೈಲಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಲೈಫ್ಸ್ಟೈಲ್ ಸರಿಪಡಿಸಿಕೊಳ್ಳದಿದ್ರೆ ಅನೇಕ ರೋಗಗಳು ಬರುವ ಸಾಧ್ಯತೆ ಇದೆ. ಕೆಲಸದ ಒತ್ತಡದಿಂದ ಬರುವ ಟೆನ್ಶನ್, ಸಮಸ್ಯೆಗಳು, ದೈಹಿಕ ಚಟುವಟಿಕೆ ಏನೂ ಮಾಡದೇ ಕೇವಲ ಕುಳಿತಲ್ಲಿ ಕೆಲಸ ಮಾಡುವುದರಿಂದ ಆರೋಗ್ಯ ಸಮಸ್ಯೆಗಳು ಬರುತ್ತಿವೆ ಎಂದು ಹೇಳಿದ್ದಾರೆ.
ಅರಮನೆ ಮೈದಾನದ ಗ್ರ್ಯಾಂಡ್ ಕಾಸೆಲ್ನಲ್ಲಿ ನಡೆಯುತ್ತಿರುವ ಆರೋಗ್ಯ ಹಬ್ಬ ಕಾರ್ಯಕ್ರಮದಲ್ಲಿ ನ್ಯೂಸ್ಫಸ್ಟ್ ಎಂಡಿ, ಸಿಇಒ ಎಸ್ ರವಿಕುಮಾರ್, ನ್ಯೂಸ್ಫಸ್ಟ್ ಎಡಿಟರ್ ಇನ್ ಚೀಫ್ ಮಾರುತಿ ಎಸ್.ಹೆಚ್, ಬೆಂಗಳೂರು ಶ್ವಾಸ ಸಂಸ್ಥೆಯ ಶ್ವಾಸ ಗುರು ಶ್ರೀ ವಚನಾನಂದ ಸ್ವಾಮೀಜಿ, ಪ್ರಶಾಂತಿ ಆಯುರ್ವೇದ ಸಂಸ್ಥಾಪಕರಾದ ಡಾ.ಗಿರಿಧರ ಕಜೆ ಸೇರಿದಂತೆ ಇತರ ಗಣ್ಯರು ಭಾಗಿಯಾಗಿದ್ದರು.
ಇದನ್ನೂ ಓದಿ: ನ್ಯೂಸ್ಫಸ್ಟ್ನ ಆರೋಗ್ಯ ಹಬ್ಬಕ್ಕೆ ದಿನೇಶ್ ಗುಂಡೂರಾವ್ ಚಾಲನೆ.. ಆರೋಗ್ಯಕರ ಬದುಕಿಗೆ ಸರಳ ಸೂತ್ರ
ಆರೋಗ್ಯ ಹಬ್ಬಕ್ಕೆ ಬಂದ್ರೆ ನಿಮಗೆ ಸಿಗಲಿವೆ 10 ಉಪಯೋಗಗಳು
- ಆಯುರ್ವೇದ ಕ್ಷೇತ್ರದಲ್ಲಿ ಮೊದಲ ಪಂಕ್ತಿಯಲ್ಲಿ ನಿಲ್ಲುವ ತಜ್ಞ ವೈದ್ಯರು, ಯೋಗದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಪರಿಣಿತರನ್ನ ಭೇಟಿ ಮಾಡುವ ಅವಕಾಶ ನಿಮ್ಮದಾಗಲಿದೆ.
- ನಿಮ್ಮ ಆರೋಗ್ಯ ವೃದ್ಧಿಗೆ ಸರಳ ಸೂತ್ರಗಳನ್ನ ಪರಿಣಿತರು ತಿಳಿಸಿ ಕೊಡುವರು. ಜೊತೆಗೆ ತಜ್ಞ ವೈದ್ಯರು ಮತ್ತು ಯೋಗ ಪರಿಣಿತರ ಜೊತೆ ನೀವು ಮತನಾಡಬಹುದು.
- ಆರೋಗ್ಯಯುತ ಜೀವನಕ್ಕೆ ಅವಶ್ಯಕವಾಗಿರುವ ಆರೋಗ್ಯ ಟಿಪ್ಸ್ ನಿಮಗೆ ಸಿಗಲಿವೆ.
- ಪ್ರಸ್ತುತ ಜನರು ಎದುರಿಸುತ್ತಿರುವ ಗಂಭೀರ ಸಮಸ್ಯೆ ಕುರಿತು ಆಯುರ್ವೇದ ತಜ್ಞ ವೈದ್ಯರು ಸಂಪೂರ್ಣವಾಗಿ ಮಾಹಿತಿ ನೀಡುವರು.
- ವೈಯಕ್ತಿಕ ಜೀವನವನ್ನ ಪಾಸಿಟಿವ್ ಆಗಿ ಹೇಗೆ ಚೇಂಜ್ ಮಾಡಿಕೊಳ್ಳಬೇಕು?, ಇದಕ್ಕೆ ಸರಳ ವಿಧಾನಗಳೇನು? ಎಂಬುದನ್ನ ಪ್ರಸ್ತುತ ಪಡಿಸುವರು.
- ಆರೋಗ್ಯ ಆಗಿರುವವರು ಮತ್ತು ಆರೋಗ್ಯ ಸಮಸ್ಯೆಯಿಂದ ಬಳಲುವವರಿಗೆ ಈ ಎಕ್ಸ್‌ಫೋದಲ್ಲಿ ಪರಿಣಾಮಕಾರಿ ಪರಿಹಾರಗಳು ಸಿಗಲಿವೆ.
- ರಾಜ್ಯದ ಅತಿ ದೊಡ್ಡ ಎಕ್ಸ್‌ಪೋದಲ್ಲಿ ನೀವು ಕಳೆಯುವ ಸಮಯ ವ್ಯರ್ಥ ಆಗಲ್ಲ, ಬದಲಿಗೆ ಜೀವನ ಶೈಲಿಯನ್ನೇ ಉತ್ತಮ ದಾರಿಗೆ ಕರೆದೊಯ್ಯುವ ಸಲಹೆ, ಸೂಚನೆಗಳು ನಿಮಗೆ ಸಿಗಲಿವೆ.
- ಮಕ್ಕಳಿಂದ ದೊಡ್ಡವರವರೆಗೂ, ಯಾಱರು ಯಾವ ರೀತಿಯ ಜೀವನ ಶೈಲಿ ರೂಢಿಸಿಕೊಳ್ಳಬೇಕು ಎಂಬುದನ್ನ 2 ದಿನದ ಎಕ್ಸ್‌ಫೋದಲ್ಲಿ ತಿಳಿಯಬಹುದು.
- ಕರ್ನಾಟಕದ ಎಲ್ಲಾ ಪ್ರಾಂತ್ಯಗಳ ರುಚಿ ರುಚಿಯಾದ ಆಹಾರವನ್ನ ಇಡೀ ಕುಟುಂಬ ಸವಿಯಬಹುದು. ಉತ್ತರ ಕರ್ನಾಟಕ, ಮಲೆನಾಡು, ಕರಾವಳಿ ಮತ್ತು ಹಳೆ ಮೈಸೂರು ಭಾಗದ ಆಹಾರ ವೈವಿಧ್ಯಮಯ ಇದೆ. ಇದು ರಾಜ್ಯದ ಅತಿ ದೊಡ್ಡ ಆಹಾರ ಮೇಳ.
- ಆಯುರ್ವೇದ, ಆರ್ಗ್ಯಾನಿಕ್ ಪ್ರಾಡಕ್ಟ್ಸ್, ಸಿರಿಧಾನ್ಯ, ಫಿಟ್‌ನೆಸ್ ಸೇರಿದಂತೆ ವಿವಿಧ ಸ್ಟಾಲ್‌ಗಳು ಇರಲಿವೆ.
ಒಂದು ದೊಡ್ಡ ವೇದಿಕೆಯಿಂದ ಇಷ್ಟೊಂದು ಪ್ರಯೋಜನ ಸಿಗುವ ಸುವರ್ಣಾವಕಾಶ ಮಿಸ್ ಮಾಡಬೇಡಿ. ರಾಜ್ಯದ ಅತಿ ದೊಡ್ಡ ಎಕ್ಸ್‌ಫೋಗೆ ಸ್ನೇಹಿತರು, ಕುಟುಂಬ ಜೊತೆ ಬನ್ನಿ ಪ್ರವೇಶ ಉಚಿತವಾಗಿದೆ.
ಸ್ಥಳ- ಬೆಂಗಳೂರಿನ ಅರಮನೆ ಮೈದಾನ, ಗೇಟ್ ನಂಬರ್ 6, ಗ್ರ್ಯಾಂಡ್ ಕ್ಯಾಸಲ್.
ದಿನಾಂಕ- ನವೆಂಬರ್ 30 ಹಾಗೂ ಡಿಸೆಂಬರ್ 1 ರಂದು ನಡೆಯಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ