ನ್ಯೂಸ್​​ಫಸ್ಟ್​​​ನ ಅವಿರಾಜ್, ರವಿ ಪಾಂಡವಪುರ ಅವರಿಗೆ ಕೆಂಪೇಗೌಡ ಪ್ರಶಸ್ತಿ ಪ್ರದಾನ

author-image
Bheemappa
Updated On
ನ್ಯೂಸ್​​ಫಸ್ಟ್​​​ನ ಅವಿರಾಜ್, ರವಿ ಪಾಂಡವಪುರ ಅವರಿಗೆ ಕೆಂಪೇಗೌಡ ಪ್ರಶಸ್ತಿ ಪ್ರದಾನ
Advertisment
  • ನಗರದಲ್ಲಿ ನಡೆದ 516ನೇ ಕೆಂಪೇಗೌಡ ಜಯಂತಿ ಕಾರ್ಯಕ್ರಮ
  • DK ಶಿವಕುಮಾರ್, ಸಚಿವ ರಾಮಲಿಂಗಾರೆಡ್ಡಿಯಿಂದ ಪ್ರದಾನ
  • ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವ

ಬೆಂಗಳೂರು: ನ್ಯೂಸ್​​ಫಸ್ಟ್​ ಕನ್ನಡದ ಸೀನಿಯರ್ ಕ್ಯಾಮೆರಾಮ್ಯಾನ್ ಅವಿರಾಜ್​ ಹಾಗೂ ಮೈಸೂರು ವರದಿಗಾರ ರವಿ ಪಾಂಡವಪುರ ಅವರಿಗೆ 2025ರ ಸಾಲಿನ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ನಾಡಪ್ರಭು ಕೆಂಪೇಗೌಡರ 516ನೇ ಜಯಂತಿ ಹಿನ್ನೆಲೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

publive-image

ಡಿಸಿಎಂ ಡಿ.ಕೆ ಶಿವಕುಮಾರ್ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ನ್ಯೂಸ್​​ಫಸ್ಟ್​ನ ಸೀನಿಯರ್ ಕ್ಯಾಮೆರಾಮ್ಯಾನ್ ಆದ ಅವಿರಾಜ್ ಅವರಿ​ಗೆ ಪ್ರಶಸ್ತಿ ಪ್ರದಾನ ಮಾಡಿದರು. ಬಿಬಿಎಂಪಿಯ ಕೇಂದ್ರ ಕಚೇರಿ ಆವರಣದಲ್ಲಿರುವ ಡಾ.ರಾಜ್ ಕುಮಾರ್ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು. ಈ ಪ್ರಶಸ್ತಿಯನ್ನು ಬಿಬಿಎಂಪಿ ವತಿಯಿಂದ ನೀಡಲಾಗಿದ್ದು ಈ ಬಾರಿ ನ್ಯೂಸ್​​ಫಸ್ಟ್​ಗೆ ಎರಡು ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಲಭಿಸಿವೆ.

ನ್ಯೂಸ್​ ಫಸ್ಟ್​ ಸೀನಿಯರ್ ಕ್ಯಾಮೆರಾಮನ್ ಅವಿರಾಜ್​ ಅವರು ವರದಿಗಾರಿಕೆ ಸಂದರ್ಭದಲ್ಲಿ ಕೆ.ಆರ್ ಸರ್ಕಲ್​ನ ಅಂಡರ್ ಪಾಸ್​ನಲ್ಲಿ ನೀರಿನಲ್ಲಿ ಮುಳುಗಿದ್ದ ಕುಟುಂಬವನ್ನು ತಮ್ಮ ಜೀವದ ಹಂಗು ತೊರೆದು ರಕ್ಷಣೆ ಮಾಡಿ, ಸಾಹಸ ಪ್ರದರ್ಶಿಸಿದ್ದರು. ಮುಳುಗಡೆ ಆಗುತ್ತಿದ್ದ ಒಂದು ಕುಟುಂಬವನ್ನ ರಕ್ಷಿಸುವಲ್ಲಿ ಅವಿರಾಜ್ ಪ್ರಮುಖ ಪಾತ್ರ ವಹಿಸಿದ್ದರು. ಈ ಹಿನ್ನೆಲೆಯಲ್ಲಿ ಅವರಿಗೆ ಪ್ರಶಸ್ತಿ ಒಲಿದಿದೆ.

ಇದನ್ನೂ ಓದಿ: ಜೀವನದಲ್ಲಿ ಕೆಟ್ಟ ನಿರ್ಧಾರ ತೆಗೆದುಕೊಂಡೆ.. ಯುವ ಕ್ರಿಕೆಟರ್ ಪೃಥ್ವಿ ಶಾಗೆ ಈಗ ಜ್ಞಾನೋದಯ..!

publive-image

ಮೈಸೂರಿನ ಕಲಾಮಂದಿರದಲ್ಲಿ ನಡೆದ 516ನೇ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ನ್ಯೂಸ್​​ಫಸ್ಟ್​​ನ ವರದಿಗಾರ ರವಿ ಪಾಂಡವಪುರ ಅವರಿಗೆ ಶಾಸಕ ಜಿ.ಟಿ ದೇವೇಗೌಡ, ಎಂಎಲ್​ಸಿ ಮಂಜೇಗೌಡ ಅವರು ಪ್ರಶಸ್ತಿ ಪ್ರದಾನ ಮಾಡಿದರು. ರವಿ ಪಾಂಡವಪುರ ಅವರು ಮೈಸೂರು ಜಿಲ್ಲೆಯಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಇನ್ನು ಅನೇಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಮಾರಂಭದಲ್ಲಿ ಸೋಮೇಶ್ವರ ಸ್ವಾಮೀಜಿ, ಶಾಸಕ ಹರೀಶ್ ಗೌಡ ಸೇರಿದಂತೆ ಸಮಾಜದ ಹಲವು ಮುಖಂಡರು ಭಾಗಿಯಾಗಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment