3 ಬಾರಿ ಫೋನ್ ಶೇಕ್ ಮಾಡಿದ್ರೆ ಸಾಕು; ಮಹಿಳಾ ಸಿಬ್ಬಂದಿ ರಕ್ಷಣೆಗೆ ಬರುತ್ತೆ ಈ ಆ್ಯಪ್..!

author-image
Ganesh
Updated On
3 ಬಾರಿ ಫೋನ್ ಶೇಕ್ ಮಾಡಿದ್ರೆ ಸಾಕು; ಮಹಿಳಾ ಸಿಬ್ಬಂದಿ ರಕ್ಷಣೆಗೆ ಬರುತ್ತೆ ಈ ಆ್ಯಪ್..!
Advertisment
  • ಇದು ನ್ಯೂಸ್​​ಫಸ್ಟ್​ನ ಬಿಗ್ ಅಂಡ್ ಕ್ವಿಕ್ ಇಂಪ್ಯಾಕ್ಟ್​
  • ಜಯದೇವ ಆಸ್ಪತ್ರೆ ಸಿಬ್ಬಂದಿ ಸುರಕ್ಷತೆಗೆ ಬಂತು App
  • ಝೀರೋ ಟಾಲೆರೆನ್ಸ್​ಗೆ ಒತ್ತು ನೀಡಿದ ಜಯದೇವ ಆಸ್ಪತ್ರೆ

ಬೆಂಗಳೂರು: ನ್ಯೂಸ್​ಫಸ್ಟ್​ ವರದಿ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಜಯದೇವ ಆಸ್ಪತ್ರೆಯು ತನ್ನ ಮಹಿಳಾ ಸಿಬ್ಬಂದಿ ಸುರಕ್ಷತೆಗಾಗಿ SUHRD (ಸುಹೃದ್) ಎಂಬ ಮೊಬೈಲ್ ಅಪ್ಲಿಕೇಷನ್ ಪರಿಚಯಿಸಿದೆ. ಅದರ ಸಹಾಯದಿಂದ ಲೈಂಗಿಕ ದೌರ್ಜನ್ಯದಂತಹ ಸಂಕಷ್ಟಕ್ಕೆ ಸಿಲುಕಿದಾಗ ಮಹಿಳಾ ಸಿಬ್ಬಂದಿ ಸುಲಭವಾಗಿ ಪಾರಾಗಬಹುದಾಗಿದೆ.

ಏನಾಗಿತ್ತು..?
ಆಸ್ಪತ್ರೆಯ ಶೌಚಾಲಯದಲ್ಲಿ ಮೊಬೈಲ್ ಇರಿಸಿ ಖಾಸಗಿ ದೃಶ್ಯ ಸೆರೆ ಹಿಡಿದ ವಿಚಾರದ ಬಗ್ಗೆ ನ್ಯೂಸ್​ಫ್ಟ್​ ನಿರ್ಭೀತಿಯಿಂದ ವರದಿ ಮಾಡಿತ್ತು. ಪ್ರಕರಣ ಸಂಬಂಧ ಮುಖ್ಯಮಂತ್ರಿಗಳ ಕಾರ್ಯಾಲಯ ಕೂಡ ವರದಿ ಕೇಳಿತ್ತು. ಈ ಬೆಳವಣಿಗೆ ಬೆನ್ನಲ್ಲೇ ಎಚ್ಚೆತ್ತ ಆಸ್ಪತ್ರೆಯ ಆಡಳಿತ ಮಂಡಳಿ ತನ್ನ ಸಿಬ್ಬಂದಿ ಸುರಕ್ಷತೆಗೆ ಮುಂದಾಗಿದೆ. ಇದು ನ್ಯೂಸ್​ಫಸ್ಟ್​​​ನ ಬಿಗ್​​ ಅಂಡ್ ಕ್ವಿಕ್ ಇಂಪ್ಯಾಕ್ಟ್ ಆಗಿದೆ.

publive-image

SUHRD ಏನ್ ಮಾಡುತ್ತದೆ..?
‘ಸುಹೃದ್’ ಅನ್ನೋ ಹೊಸ ಆ್ಯಪ್ ಅಭಿವೃದ್ಧಿ ಮಾಡಲಾಗಿದೆ. ಸುಹೃದ್ ಅಂದರೆ ಸಂಸ್ಕೃತದಲ್ಲಿ ಒಳ್ಳೆಯ ಹೃದಯ ಎಂದರ್ಥ. ಯಾವುದೇ ಸಿಬ್ಬಂದಿ ಸಂಕಷ್ಟಕ್ಕೆ ಸಿಲುಕಿದಾಗ ಫೋನ್ ಮಾಡಲು ಅಥವಾ ಮೆಸೇಜ್ ಮೂಲಕ ರಕ್ಷಣೆಗೆ ಸಹಾಯ ಕೇಳೋದು ಆ ಸಂದರ್ಭದಲ್ಲಿ ಕಷ್ಟಕರ. ಆದರೆ ಈ ಆ್ಯಪ್​ನ ಸಹಾಯದಿಂದ ಅಂತಹ ವ್ಯಕ್ತಿ (ಸಿಬ್ಬಂದಿ) ತನ್ನ ಮೊಬೈಲ್​ ಅನ್ನು ಮೂರು ಸಲ ಶೇಕ್ ಮಾಡಿದರೆ ಸಾಕು. ಆ್ಯಪ್ ಇನ್​ಸ್ಟಾಲ್ ಮಾಡಿಕೊಂಡವರಿಗೆ ಅಲರಾಂ ಹೋಗುತ್ತದೆ.

ಇದನ್ನೂ ಓದಿ:ESIC ಆಸ್ಪತ್ರೆಯಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಪರೀಕ್ಷೆ ಇಲ್ಲ.. ಸ್ಯಾಲರಿ ಮಾತ್ರ ಲಕ್ಷ ಲಕ್ಷ ರೂಪಾಯಿ

ಆಸ್ಪತ್ರೆಯ ಸೆಕ್ಯೂರಿಟಿಯಿಂದ ಹಿಡಿದು ಡೈರೆಕ್ಟರ್​ವರೆಗೂ ಮೆಸೇಜ್ ಹೋಗುತ್ತದೆ. ಇಲ್ಲಿ ಮೊಬೈಲ್ ಆನ್ ಮಾಡುವ ಅವಶ್ಯಕತೆ ಇಲ್ಲ. ಜಸ್ಟ್ ಆ್ಯಪ್ ಇನ್​ಸ್ಟಾಲ್ ಮಾಡಿಕೊಂಡಿದ್ದರೆ ಸಾಕಾಗುತ್ತದೆ. ಅಷ್ಟೇ ಅಲ್ಲದೇ, ಯಾವ ವ್ಯಕ್ತಿಗೆ ಎಲ್ಲಿ ಸಮಸ್ಯೆ ಆಗಿದೆಯೋ ಅವರ ಲೋಕೇಶನ್ ಸಮೇತ ಜಿಪಿಎಸ್​ನಲ್ಲಿ ಟ್ರ್ಯಾಕ್ ಆಗಲಿದೆ. ಇದರಿಂದ ತಕ್ಷಣ ಸಂಬಂಧಪಟ್ಟವರು ಸಹಾಯ ಮಾಡಲು ಅನುಕೂಲ ಆಗಲಿದೆ.

ಆಸ್ಪತ್ರೆಯಲ್ಲಿ ಝೀರೋ ಟಾಲೆರೆನ್ಸ್​ಗೆ ನಾವು ಒತ್ತು ನೀಡಿದ್ದೇವೆ. ಅದರಲ್ಲೂ ಮಹಿಳೆಯರ ಸುರಕ್ಷತೆ ದೃಷ್ಟಿ. ಲೈಂಗಿಕ ಕಿರುಕುಳದಂಥ ಪ್ರಕರಣಗಳು ಆಗದಂತೆ ನಾವು ಮುನ್ನಚ್ಚೆರಿಕೆ ತೆಗೆದುಕೊಳ್ಳುತ್ತಿದ್ದೇವೆ. ಈ ನಿಟ್ಟಿನಲ್ಲಿ ಆಸ್ಪತ್ರೆಯ ಪಾಶ್ ಕಮಿಟಿ ಕೆಲಸ ಮಾಡುತ್ತಿದೆ. ಅದರಂತೆ ಇದೀಗ ಸುಹೃದ್ ಎಂಬ ಆ್ಯಪ್ ಪರಿಚಯ ಮಾಡಲಾಗಿದೆ. ಇದು ಹೆಣ್ಮಕ್ಕಳು ಸಂಕಷ್ಟಕ್ಕೆ ಸಿಲುಕಿದಾಗ ಸಹಾಯಕ್ಕೆ ಬರಲಿದೆ- ಡಾ.ಜಯಶ್ರೀ, ಪ್ರೊಫೆಸರ್ ಹೃದ್ರೋಗ ವಿಭಾಗ, ಜಯದೇವ ಆಸ್ಪತ್ರೆ

publive-image

ಜಯದೇವ ಆಸ್ಪತ್ರೆಯ ಎಲ್ಲಾ ಸಿಬ್ಬಂದಿ ಫೋನ್​ನಲ್ಲಿ ಅಪ್ಲಿಕೇಶನ್ ಇನ್​ಸ್ಟಾಲ್ ಮಾಡಿಕೊಂಡಿರಬೇಕು. ತುರ್ತು ಸಂದರ್ಭದಲ್ಲಿ ಫೋನ್ ಶೇಕ್ ಮಾಡಿದ್ರೆ ಕಮಾಂಡ್ ಸೆಂಟರ್ಡ್​ಗೆ ಸಂದೇಶ ರವಾನೆ ಆಗಲಿದೆ. ಆಸ್ಪತ್ರೆ ವೈದ್ಯರಿಂದ ಹಿಡಿದು ಪ್ರತಿಯೊಬ್ಬರೂ ಈ ಆ್ಯಪ್ ಬಳಸಲು ಅಡಳಿತ ಮಂಡಳಿ ಸೂಚಿಸಿದೆ.

ಇದನ್ನೂ ಓದಿ:‘ನನ್ನ ಯಾರು ತಡೆಯೋಕೆ ಸಾಧ್ಯವಿಲ್ಲ’- ಬಿಸಿಸಿಐಗೆ KL ರಾಹುಲ್ ಖಡಕ್​​​ ವಾರ್ನಿಂಗ್​​; ಕಾರಣವೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment