/newsfirstlive-kannada/media/post_attachments/wp-content/uploads/2025/04/newsfirst-janasangama.jpg)
10th ಪಾಸ್ ಆದ್ರೂ.. PU ಪಾಸಾದ್ರೂ.. Bcom ಪಾಸಾದ್ರೂ Mcom ಪಾಸಾದ್ರೂ.. ಮನೆಯಲ್ಲಿ ಅಪ್ಪ ಅಮ್ಮ, ರೋಡಲ್ಲಿ ನೆಂಟ್ರು.. ಫೇಸ್ಬುಕ್ನಲ್ಲಿ ಫ್ರೆಂಡು ಕೇಳೋ ಒಂದೇ ಒಂದು ಕ್ವಶ್ಚನ್ ವಾಟ್ ನೆಕ್ಸ್ಟ್..? ಮುಂದೇನು ಅಂತ.
ಅಲ್ಲಾ.. ಅತ್ತಿಗುಪ್ಪೆ ಆದ್ಮೇಲೆ ವಿಜಯನಗರ ಅಂತ ಹೇಳ್ಬೋದು.. ಮಂಡ್ಯ ಆದ್ಮೇಲೆ ಮೈಸೂರು ಅಂತ ಹೇಳ್ಬೋದು. ಆದ್ರೆ ಈ ಕೋರ್ಸ್ಗಳಾದ್ಮೇಲೆ ಮುಂದೇನು ಅಂದ್ರೆ ಏನ್ ಹೇಳ್ತಾರೆ ಅಂತ ಕೆಲ ಸ್ಟೂಡೆಂಟ್ಸ್ ಇರುಸು ಮುರುಸಾಗ್ತಾರೆ. ಆದ್ರೆ ಸ್ಟೂಡೆಂಟ್ಸ್ ಲೈಫ್ ಮುಖ್ಯ ಅಲ್ವಾ.. ಹಾಗಾಗಿ ಯಾರು ಎಷ್ಟೇ ಪ್ರಶ್ನೆ ಕೇಳಿದ್ರು ಸ್ಟೂಡೆಂಟ್ಸ್ ಮತ್ತು ಪೇರೆಂಟ್ಸ್ ಟೆನ್ಷನ್ ಅನ್ನೋದು ಇದ್ದೇ ಇರುತ್ತೆ. ಸ್ಟೂಡೆಂಟ್ಸ್ ಮತ್ತು ಪೇರೆಂಟ್ಸ್ನಲ್ಲಿ ಪ್ರತಿ ಹಂತಕ್ಕೂ ಕಾಡುವ, ಇಂಥಾ ಎಷ್ಟೋ ಕನ್ಫ್ಯೂಸ್ ಪ್ರಶ್ನೆಗಳ ‘ಸಂಗಮ’ಕ್ಕೆ ಉತ್ತರ.. ಜ್ಞಾನ ಸಂಗಮದಲ್ಲಿದೆ.
ಜ್ಞಾನ ಸಂಗಮ ಮೆಗಾ ಎಜ್ಯುಕೇಶನ್ ಎಕ್ಸ್‌ಫೋ... ಇದು ಉತ್ತರ ಕರ್ನಾಟಕದಲ್ಲಿ ನಡೆಯಲಿರುವ ಅತಿ ದೊಡ್ಡ ಎಜ್ಯುಕೇಶನ್ ಎಕ್ಸ್‌ಫೋ. ಈ ಎಕ್ಸ್‌ಫೋ ಶಿಕ್ಷಣಕ್ಕೆ ಸಂಬಂಧಪಟ್ಟ ಎಷ್ಟೋ ದ್ವಂದ್ವ ತೊಳಲಾಟಗಳಿಗೆ ದಾರಿ ತೋರಿಸ್ತಿದೆ. ಕನ್ಫ್ಯೂಸ್ಗಳಿಗೆ ಕ್ಲಾರಿಟಿ ಕೊಡ್ತಿದೆ. ಟಾರ್ಚರ್ ಕ್ವಶ್ಚನ್ಗಳಿಗೇ ಟಾರ್ಚ್ಬೇರರ್ ಆಗಿ ಫ್ಯೂಚರ್ ಸೆಟ್ ಮಾಡ್ತಿದೆ. ಅಷ್ಟಕ್ಕೂ ಈ ಸಂಗಮದಲ್ಲಿ ಭಾಗಿಯಾಗೋದು ಹೇಗೆ ಅಂತೀರಾ..? ಅದಕ್ಕಾಗಿ ವೇದಿಕೆ ಕಲ್ಪಿಸ್ತಿದೆ ನ್ಯೂಸ್ ಫಸ್ಟ್ ಕನ್ನಡ ಚಾನಲ್.
ಹೌದು.. ರಾಜ್ಯದ ಅತ್ಯಂತ ಜನಪ್ರಿಯ ಚಾನಲ್ ಆಗಿರೋ ನ್ಯೂಸ್ ಫಸ್ಟ್ ಕನ್ನಡ ಚಾನೆಲ್ ಕಡೆಯಿಂದ, ರಾಜ್ಯದ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಅನುಕೂಲವಾಗುವಂಥ ವಿಟಿಯು ಎಜುಕೇಷನ್ ಕಾನ್‌ಕ್ಲೇವ್, ಕೋಚಿಂಗ್ ಗುರು ಸೇರಿದಂತೆ ಎಷ್ಟೋ ಕಾರ್ಯಕ್ರಮಗಳನ್ನ ಆಯೋಜಿಸಿ ಈಗಾಗಲೇ ಯಶಸ್ವಿಯಾಗಿದೆ. ಈಗ ಮುಂದಿನ ಭವಿಷ್ಯ ಹೇಗೆ ರೂಪಿಸ್ಕೊಳ್ಬೇಕು. ಮುಂದೇನು ಅನ್ನೋ ಪ್ರಶ್ನೆಗಳಲ್ಲಿರೋ ಪೇರೆಂಟ್ಸ್ ಮತ್ತು ಸ್ಟೂಡೆಂಟ್ಸ್ಗಾಗಿ ನ್ಯೂಸ್ ಫಸ್ಟ್ ಮತ್ತೆ ಒಂದು ಸ್ಪೆಷಲ್ ಕಾರ್ಯಕ್ರಮ ಆಯೋಜಿಸ್ತಿದೆ. ಅದೇ ಜ್ಞಾನ ಸಂಗಮ ಮೆಗಾ ಎಜುಕೇಷನ್ ಎಕ್ಸ್‌ಫೋ.
ಇದನ್ನೂ ಓದಿ: ವಿಶ್ವದ ಷೇರು ಮಾರುಕಟ್ಟೆಯಲ್ಲಿ ಅತಿ ದೊಡ್ಡ ತಲ್ಲಣ.. ಏನಿದು ಬ್ಲ್ಯಾಕ್ ಮಂಡೇ? ಇದರ ಇತಿಹಾಸ ಏನು?
ಬೆಂಗಳೂರು ಸೇರಿ, ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಈ ಎಕ್ಸ್‌ಫೋದಲ್ಲಿ ಭಾಗಿಯಾಗ್ತಿವೆ. ಇಂಜಿನಿಯರಿಂಗ್, ಕಾಮರ್ಸ್, ಸೈನ್ಸ್ ಮತ್ತು ಮ್ಯಾನೇಜ್‌ಮೆಂಟ್ ಕೋರ್ಸ್ ಮತ್ತು ಉದ್ಯೋಗ ಆಧಾರಿತ ಕೋರ್ಸ್‌ಗಳ ಬಗ್ಗೆ ಸ್ಟೂಡೆಂಟ್ಸ್ಗೆ, ಕಂಪ್ಲೀಟ್ ಇನ್ಫಾರ್ಮೇಷನ್ಸ್ ಕೊಡೋ ಉದ್ದೇಶದಲ್ಲಿ, ಪದವಿ, ಸ್ನಾತಕೋತ್ತರ ಪದವಿ ಮತ್ತು ತಾಂತ್ರಿಕ ಕಾಲೇಜುಗಳ ತಜ್ಞರು ಈ ಎಕ್ಸ್‌ಫೋಗೆ ಬರ್ತಾ ಇದ್ದಾರೆ.
ಪಿಯು ಆದ್ಮೇಲೆ ಮುಂದೇನು? ಅನ್ನೋ ಪ್ರಶ್ನೆಗೆ ಒಂದೇ ವೇದಿಕೆಯಲ್ಲಿ ಆನ್ಸರ್ ಸಿಗ್ತಿದೆ. ಸ್ಟೂಡೆಂಟ್ಸ್ ಮತ್ತು ಪೇರೆಂಟ್ಸ್ನಲ್ಲಿರೋ ಪ್ರತಿ ಪ್ರಶ್ನೆಗೂ ಇಲ್ಲಿ, ಯಾವುದೇ ಸಂಶಯ ಉಳಿಯದ ಹಾಗೆ ಉತ್ತರ ಸಿಗಲಿದೆ.
ಇದೇ ಏಪ್ರಿಲ್ ತಿಂಗಳು 19 ಮತ್ತು 20ಕ್ಕೆ, ಬೆಳಗ್ಗೆ 9 ಗಂಟೆಗೆ, ಶ್ರೀಖೂಬಾ ಕಲ್ಯಾಣ ಮಂಟಪ, ಶರಣಬಸವೇಶ್ವರ ದೇವಸ್ಥಾನ ರಸ್ತೆ ಕಲ್ಬುರ್ಗಿಯಲ್ಲಿ, ಜ್ಞಾನ ಸಂಗಮ ಮೆಗಾ ಎಜುಕೇಷನ್ ಎಕ್ಸ್‌ಫೋ ನಡೆಯಲಿದೆ. ತಪ್ಪದೇ ಈ ಚಾನ್ಸ್ ಅನ್ನ ಪೇರೆಂಟ್ಸ್ ಮತ್ತು ಸ್ಟೂಡೆಂಟ್ಸ್ ಮಿಸ್ ಮಾಡಿಕೊಳ್ಬೇಡಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ