/newsfirstlive-kannada/media/post_attachments/wp-content/uploads/2025/02/NF_COACHING_GURU_3.jpg)
ಸ್ಪರ್ಧಾತ್ಮಕ ಯುಗದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನ ಪಾಸ್ ಮಾಡೋದು ಅಷ್ಟೊಂದು ಸುಲಭದ ಮಾತಲ್ಲ. ವಿವಿಧ ಎಕ್ಸಾಂಗಳಿಗೆ ತಯಾರಿ ನಡೆಸುತ್ತಿರೋ ಅದೆಷ್ಟೋ ಪರೀಕ್ಷಾರ್ಥಿಗಳಿಗೆ ಒಂದಲ್ಲ ಒಂದು ಗೊಂದಲ ಇದ್ದೇ ಇರುತ್ತೆ. ಇನ್ಮುಂದೆ ನಿಮ್ಗೆ ಆ ಟೆನ್ಶನ್ ಬೇಡ. ಯಾಕಂದ್ರೆ ನಿಮಗೆ ಅಂತಾನೇ ನಿಮ್ಮ ನ್ಯೂಸ್‌ಫಸ್ಟ್ ಇಂದಿನಿಂದ ಮೆಗಾ ಕೋಚಿಂಗ್ ಎಕ್ಸ್‌ಪೋ ಆಯೋಜನೆ ಮಾಡಿದೆ.
ನಿಮ್ಮ ನ್ಯೂಸ್‌ಫಸ್ಟ್ ನಾಡಿನ ಜನರಿಗೆ ಶಿಕ್ಷಣ ಕ್ಷೇತ್ರ. ಆರೋಗ್ಯ ಕ್ಷೇತ್ರ ಹಾಗೂ ಸೈಬರ್ ಕ್ರೈಂ ಸೇರಿದಂತೆ ಜನರಿಗೆ ಅಗತ್ಯವಿರುವ ವಿಷಯಗಳ ಬಗ್ಗೆ ಅರಿವು ಮೂಡಿಸೋ ಕೆಲಸ ಮಾಡ್ತಾನೇ ಬರ್ತಿದೆ. ಇದೀಗ ನ್ಯೂಸ್‌ಫಸ್ಟ್ ಮತ್ತೊಂದು ಹೆಜ್ಜೆ ಮುಂದಿಟ್ಟು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧವಾಗುತ್ತಿರುವ ವಿದ್ಯಾರ್ಥಿಗಳಿಗೆಂದೇ ವಿನೂತನ ಎಕ್ಸ್‌ಪೋ ಆಯೋಜನೆ ಮಾಡಿದೆ.
ಎಷ್ಟೋ ಜನರು ಸ್ಪರ್ಧಾತ್ಮಕ ಪರೀಕ್ಷೆ ಪಾಸ್ ಆಗಬೇಕು ಅಂತಾ ಹಗಲು-ರಾತ್ರಿ ಕಷ್ಟ ಪಡ್ತಾರೆ. ತುಂಬಾ ವರ್ಷಗಳಿಂದ ಎಕ್ಸಾಂಗೆ ಓದುತ್ತಿದ್ರೂ ಸ್ಪಲ್ಪದರಲ್ಲೇ ಪಾಸ್ ಆಗೋದ್ರಲ್ಲಿ ವಂಚಿತರಾಗಿರ್ತಾರೆ. ಹೀಗಾಗಿ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧವಾಗುವ ವಿದ್ಯಾರ್ಥಿಗಳು ಏನೆಲ್ಲಾ ಕ್ರಮಗಳನ್ನು ಅನುಸರಿಸಬೇಕು, ಯಾವ ಕೋಚಿಂಗ್ ಸೆಂಟರ್ ಆಯ್ಕೆ ಮಾಡಿಕೊಳ್ಳಬೇಕು, ಯಾವ ರೀತಿಯ ಮಾರ್ಗದರ್ಶನ ಪಡೆಯಬೇಕು ಎನ್ನುವ ಬಗ್ಗೆ ಇಂದು ಹಾಗೂ ನಾಳೆ ಅರಮನೆ ರಸ್ತೆ ಜ್ಞಾನ ಭಾರತಿ ಸಭಾಂಗಣದಲ್ಲಿ ನ್ಯೂಸ್‌ಫಸ್ಟ್ ಕೋಚಿಂಗ್ ಗುರು ಮೆಗಾ ಎಕ್ಸ್‌ಪೋ ಆಯೋಜಿಸಿದೆ.
‘ಕೋಚಿಂಗ್ ಗುರು’ಗೆ ಬನ್ನಿ
- SSLC, PUC, ಪದವಿ ವ್ಯಾಸಂಗ ವಿದ್ಯಾರ್ಥಿಗಳು ಬರಬಹುದು
- ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧವಾಗ್ತಿರೋದು ಬರಬಹುದು
- NEET, CET, JEE, UPSC, KPSC, CLAT, CAT
- SI, PSI, PDO ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆ ಬಗ್ಗೆ ಮಾಹಿತಿ
- ಒಂದೇ ವೇದಿಕೆಯಲ್ಲಿ ಭಾಗವಹಿಸಲಿವೆ ಎಲ್ಲ ಕೋಚಿಂಗ್ ಸೆಂಟರ್‌ಗಳು
- ತಜ್ಞರಿಂದ ಹೆಚ್ಚಿನ ಮಾರ್ಕ್ಸ್ ಗಳಿಸಲು ಸಲಹೆ, ನೆನಪಿನ ಶಕ್ತಿ ಬಗ್ಗೆ ಟಿಪ್ಸ್
- ಪರೀಕ್ಷಾ ಭಯದಿಂದ ಹೊರಬರುವುದು ಹೇಗೆ ಎನ್ನುವ ಬಗ್ಗೆ ಸಲಹೆ
UPSC, CET, NEET ಇತ್ಯಾದಿ ಅನೇಕ ಪರೀಕ್ಷೆಗಳಿಗೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಕೊಡಲಾಗುತ್ತದೆ. ಎಲ್ಲರೂ ದೊಡ್ಡ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು.
ಯದುವೀರ್, ಮೈಸೂರು ಸಂಸದ
ಉತ್ತಮ ಹುದ್ದೆಗಳಿಗೆ ಹೋಗಬೇಕು ಎಂದು ನಿರ್ಧಾರ ಮಾಡುವ ಸಂದರ್ಭದಲ್ಲಿ ಈ ಎಕ್ಸ್‌ಪೋ ಬಂದು ಎಲ್ಲ ವಿಚಾರಗಳನ್ನು ತಿಳಿದುಕೊಳ್ಳಿ. ನ್ಯೂಸ್‌ಫಸ್ಟ್ ಅವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಇದು ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲ.
ಮಧು ಬಂಗಾರಪ್ಪ, ಶಿಕ್ಷಣ ಸಚಿವ
ಇದನ್ನೂ ಓದಿ:ನಿರ್ಮಲಾ ಸೀತರಾಮನ್ರಿಂದ ಸತತ 8ನೇ ಬಜೆಟ್ ಮಂಡನೆ.. ಜನರ ನಿರೀಕ್ಷೆ ದುಪ್ಪಟ್ಟು ಆಗಲು ಕಾರಣವೇನು?
ಎಕ್ಸ್‌ಪೋ ವಿಶೇಷ ಅಂದ್ರೆ ಕೋಚಿಂಗ್ ಸೆಂಟರ್ಗಳಲ್ಲಿ ನೋಂದಣಿ ಮಾಡಿಕೊಳ್ಳುವ ಆಯ್ದ ಕೆಲವು ವಿದ್ಯಾರ್ಥಿಗಳಿಗೆ ನ್ಯೂಸ್‌ಫಸ್ಟ್ ಸ್ಕಾಲರ್ಶಿಪ್ ಸಹ ನೀಡಲು ಉದ್ದೇಶಿಸಿದೆ. ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಪೋಷಕರು ಆಗಮಿಸಿ ಸ್ಪರ್ಧಾರ್ಥಿಗಳು ಏನೇ ಡೌಟು ಇದ್ರೂ ಬಗೆಹರಿಸಿಕೊಂಡು ಇಲ್ಲಿ ಲಾಭ ಪಡೆದುಕೊಳ್ಳಬಹುದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್‌ಫಸ್ಟ್ ಚಾನೆಲ್ ಲಭ್ಯ