/newsfirstlive-kannada/media/post_attachments/wp-content/uploads/2025/01/Kannada-Flag.jpg)
ಪ್ರಯಾಗ್ರಾಜ್: ಐತಿಹಾಸಿಕ ಮಹಾಕುಂಭಮೇಳ 9 ದಿನಗಳನ್ನು ಪೂರೈಸಿದೆ. ಪ್ರತಿದಿನ ಕೋಟ್ಯಂತರ ಯಾತ್ರಿಕರು ಆಗಮಿಸಿ ಪುಣ್ಯಸ್ನಾನ ಮಾಡಿ ಶಿವಧ್ಯಾನ ಮಾಡ್ತಿದ್ದಾರೆ. ಹೀಗಿರುವಾಗ ದೂರದ ಪ್ರಯಾಗ್ರಾಜ್ ಕುಂಭಮೇಳಕ್ಕೆ ಹೇಗೆ ಹೋಗೋದು? ಏನಾದ್ರೂ ಸಮಸ್ಯೆ ಆಗುತ್ತಾ? ವ್ಯವಸ್ಥೆ ಹೇಗಿರುತ್ತೆ ಎಂಬೆಲ್ಲಾ ಪ್ರಶ್ನೆಗಳನ್ನು ನ್ಯೂಸ್ಫಸ್ಟ್ ಗ್ರೌಂಡ್ ರಿಪೋರ್ಟ್ ಮಾಡಿದೆ.
ಮಹಾಕುಂಭಮೇಳದಲ್ಲಿ ಕನ್ನಡ ಕಲರವ!
ತ್ರಿವೇಣಿಸಂಗಮದಲ್ಲಿ ಕನ್ನಡಧ್ವಜ ಹಾರಾಡುತ್ತಿದೆ. ಆನಂದ ಆಖಾಡದ ಬಣಕಂಡಿ ಆಶ್ರಮದ ಎದುರು ಕನ್ನಡದ ಧ್ವಜ ಕಟ್ಟಲಾಗಿದೆ. ಇದೇ ಆಶ್ರಮಕ್ಕೆ ಬಣಕಂಡಿ ಮಹಾರಾಜರ ಭಕ್ತರಾಗಿರುವ ಕನ್ನಡಿಗರು ಹೆಚ್ಚು ಹೆಚ್ಚು ನೆರವು ನೀಡಿದ್ದಾರೆ.
ಇನ್ನು ಬೆಂಗಳೂರು, ಚಿತ್ರದುರ್ಗ, ದಾವಣಗೆರೆ ಸೇರಿ ವಿವಿಧೆಡೆಯಿಂದ ಕುಂಭಮೇಳದಲ್ಲಿ ಭಾಗಿಯಾಗ್ತಿರುವ ಕನ್ನಡಿಗ ಭಕ್ತರು ಪುಣ್ಯಸ್ನಾನ ಮಾಡಿ ಬಣಕಂಡಿ ಮಹಾರಾಜರ ಆಶೀರ್ವಾದ ಪಡೆಯುತ್ತಿದ್ದಾರೆ.
ತ್ರಿವೇಣಿಸಂಗಮದಲ್ಲಿ ಪುಣ್ಯಸ್ನಾನ
ಇವತ್ತು ಕುಂಭಮೇಳದಲ್ಲಿ ಭಾಗಿಯಾಗಿದ್ದ ಉದ್ಯಮಿ ಗೌತಮ್ ಅದಾನಿ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿ ಲೇತೇ ಹನುಮಾನ್ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇಸ್ಕಾನ್ ಜೊತೆಗೂಡಿ ಬರುವ ಯಾತ್ರಿಕರಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಿದ್ದಾರೆ. ನಿತ್ಯ ಒಂದು ಲಕ್ಷ ಜನರಿಗೆ ಉಚಿತವಾಗಿ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಿದ್ದು ತಮ್ಮ ಕೈಯಾರೆ ಅನ್ನ ಸಂತರ್ಪಣೆ ಮಾಡಿ ಗಮನ ಸೆಳೆದಿದ್ದಾರೆ.
ಇನ್ನು ಪ್ರಯಾಗ್ರಾಜ್ ಮಹಾಕುಂಭಮೇಳದಲ್ಲಿ ಮೊದಲ ಡಬಲ್ ಡೆಕ್ಕರ್ ಪಂಪ್ಕಿನ್ ರೆಸ್ಟೋರೆಂಟ್ ಬಸ್ ಉದ್ಘಾಟಿಸಲಾಗಿದ್ದು ಮೋಡಿ ಮಾಡ್ತಿದೆ. ಕಿಚನ್ ಹಾಗೂ ಮೊದಲ ಮಹಡಿಯಲ್ಲಿ ರೆಸ್ಟೋರೆಂಟ್ ವ್ಯವಸ್ಥೆ ಇದೆ.. 25 ಮಂದಿ ಕುಳಿತು ಊಟೋಪಚಾರ ಸವಿಯಬಹುದಾಗಿದೆ.
ಮಹಾಕುಂಭಮೇಳ ಭೂಮಿಯ ಮೇಲಿನ ಅತಿ ದೊಡ್ಡ ಧಾರ್ಮಿಕ ಕಾರ್ಯಕ್ರಮ, ಜೊತೆಗೆ ಭೂಮಿ ಮೇಲೆ ಒಂದೇ ಕಡೆ ಹೆಚ್ಚು ಜನರು ಸೇರುವ ಸ್ಥಳವೂ ಆಗಿದೆ. ಕಳೆದ 8 ದಿನಗಳಲ್ಲಿ 8.8 ಕೋಟಿ ಭಕ್ತರು ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿರೋದು ಇದಕ್ಕೆ ಸಾಕ್ಷ್ಯ. ಜನವರಿ 29ರ ಮೌನಿ ಅಮಾವಾಸ್ಯೆಯಂದು ಒಂದೇ ದಿನ 8ರಿಂದ 9 ಕೋಟಿ ಭಕ್ತರು ಸ್ನಾನ ಮಾಡುವ ನಿರೀಕ್ಷೆ ಇದ್ದು ಸಕಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಇದನ್ನೂ ಓದಿ:ಆರ್ಸಿಬಿಗೆ ಬಿಗ್ ಶಾಕ್; ವಿರಾಟ್ ಕೊಹ್ಲಿ ಐಪಿಎಲ್ ಆಡೋದು ಡೌಟ್; ಏನಿದು ಸ್ಟೋರಿ?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ