Advertisment

ನ್ಯೂಸ್​ಫಸ್ಟ್​ ಇಂಪ್ಯಾಕ್ಟ್; ವಿದ್ಯಾರ್ಥಿಗಳ ಕಾಲ್ನಡಿಗೆಯ ಪ್ರಯಾಣಕ್ಕೆ ಮುಕ್ತಿ; ದಶಕದ ಬಳಿಕ ಕೊನೆಗೂ ಬಂತು ಬಸ್​..!

author-image
Gopal Kulkarni
Updated On
ನ್ಯೂಸ್​ಫಸ್ಟ್​ ಇಂಪ್ಯಾಕ್ಟ್; ವಿದ್ಯಾರ್ಥಿಗಳ ಕಾಲ್ನಡಿಗೆಯ ಪ್ರಯಾಣಕ್ಕೆ ಮುಕ್ತಿ; ದಶಕದ ಬಳಿಕ ಕೊನೆಗೂ ಬಂತು ಬಸ್​..!
Advertisment
  • ಕಳೆದ ಒಂದು ದಶಕಗಳಿಂದ ಈ ಗ್ರಾಮಕ್ಕೆ ಬಸ್ ವ್ಯವಸ್ಥೆಯೇ ಇರಲಿಲ್ಲ
  • ಎಷ್ಟೇ ಬೇಡಿಕೊಂಡರು ರಸ್ತೆ ಸರಿಯಿಲ್ಲ ಎಂದು ನೆಪ ಹೇಳುತ್ತಿದ್ದ ಅಧಿಕಾರಿಗಳು
  • ನ್ಯೂಸ್​ಫಸ್ಟ್ ವರದಿ ಬೆನ್ನಲ್ಲೆ ದಶಕಗಳ ಬಳಿಕ ಗ್ರಾಮದ ಕಡೆಗೆ ಬಂದ ಬಸ್​

ಸಾರಿಗೆ ವ್ಯವಸ್ಥೆ ಒಂದು ಗ್ರಾಮಕ್ಕೆ ಎಷ್ಟು ಮುಖ್ಯ ಎಂಬುದು ಎಲ್ಲರಿಗೂ ಗೊತ್ತೆ ಇದೆ. ವಿಶೇಷವಾಗಿ ಗ್ರಾಮದಿಂದ ಪಟ್ಟಣಕ್ಕೆ ಹೋಗಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಸಾರಿಗೆ ವ್ಯವಸ್ಥೆಯ ಅವಶ್ಯಕತೆ ತುಂಬಾನೇ ಇರುತ್ತೆ. ಆದ್ರೆ, ವಿಜಯಪುರ ಜಿಲ್ಲೆಯ ಆ ಒಂದು ಗ್ರಾಮಕ್ಕೆ ಬಸ್​ ಬಂದೇ ದಶಕಗಳು ಕಳೆದು ಹೋಗಿದ್ದವು. ವಿದ್ಯಾರ್ಥಿಗಳು ಕಾಲ್ನಡಿಗೆಯಲ್ಲಿಯೇ ಮತ್ತೊಂದು ಊರಿಗೆ ಹೋಗಿ ವಿದ್ಯಾಭ್ಯಾಸ ಮಾಡಬೇಕಾಗಿತ್ತು. ಯಾವಾಗ ನ್ಯೂಸ್​ಫಸ್ಟ್ ಈ ಬಗ್ಗೆ ವಿಸ್ತೃತ ವರದಿ ಮಾಡಿತೋ ಕೂಡಲೇ ಎಚ್ಚೆತ್ತುಕೊಂಡ ಸಾರಿಗೆ ಇಲಾಖೆ ಆ ಹಳ್ಳಿಗೆ ಬಸ್ ಸೌಕರ್ಯವನ್ನು ಒದಗಿಸಿದೆ.

Advertisment

publive-image

ವಿಜಯಪುರ ಜಿಲ್ಲೆಯ, ತಾಳಿಕೋಟಿ ತಾಲೂಕಿನ ಹರನಾಳ ಎಂಬ ಗ್ರಾಮದ ರಸ್ತೆಯಲ್ಲಿ ಬಸ್ ಓಡಾಡಿ ದಶಕಗಳೇ ಕಳೆದಿದ್ದವು. ವಿದ್ಯಾರ್ಥಿಗಳು ಗ್ರಾಮಸ್ಥರು ಬೇರೆ ಊರಿಗೆ ಹೋಗಬೇಕಾದರೆ ತಾಳಿಕೋಟೆವರೆಗೂ ನಡೆದುಕೊಂಡೇ ಹೋಗಬೇಕಿತ್ತು. ಬಸ್ ಸೌಕರ್ಯವಿಲ್ಲದೇ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಕಾಲ್ನಡಿಗೆಯಲ್ಲಿಯೇ ಈ ಪ್ರಯಾಣವನ್ನ ಕೈಗೊಳ್ಳುತ್ತಿದ್ದರು. ತಾಳಿಕೋಟಿ ಹಾಗೂ ಹರನಾಳ ಗ್ರಾಮದ ನಡುವೆ ಸುಮಾರು ಐದು ಕಿಲೋಮೀಟರ್ ಅಂತರವಿದೆ. ಈ ಐದು ಕಿಲೋಮೀಟರ್​ಗಳನ್ನು ನಡೆದುಕೊಂಡೇ ಕ್ರಮಿಸಬೇಕಾದ ಸ್ಥಿತಿಯಲ್ಲಿದ್ದರು ಇಡೀ ಗ್ರಾಮಸ್ಥರು ಇದ್ದರು.

ಇದನ್ನೂ ಓದಿ:ಹತ್ತೇ 10 ದಿನದಲ್ಲಿ ಯುವಕನ ಮದುವೆ.. KMF ಅಧ್ಯಕ್ಷರ ಪುತ್ರನ ಬರ್ತ್​ಡೇಗೆ ಹೋಗಿ ಬರುವಾಗ ಏನಾಯಿತು?

ನಮ್ಮೂರಿಗೂ ಬಸ್​ ಬೇಕು ಸ್ವಾಮಿ ದಯವಿಟ್ಟು ಕಲ್ಪಿಸಿಕೊಡಿ ಎಂದು ಗ್ರಾಮಸ್ಥರು, ವಿದ್ಯಾರ್ಥಿಗಳು ಮಹಿಳೆಯರು ಎಲ್ಲರೂ ಮನವಿ ಮಾಡಿಕೊಂಡಿದ್ದರು. ಹರನಾಳ ಗ್ರಾಮದಲ್ಲಿರುವ ಇಕ್ಕಟ್ಟಾದ, ಸಮರ್ಪಕವಾಗಿ ಇರದ ರಸ್ತೆಯಿಂದಾಗಿ ಅಧಿಕಾರಿಗಳು ಬಸ್​ ಸೌಕರ್ಯವನ್ನು ಬಂದ್ ಮಾಡಿದ್ದರು ಯಾವಾಗ ನ್ಯೂಸ್​ಫಸ್ಟ್​ ಈ ಬಗ್ಗೆ ವರದಿ ಪ್ರಸಾರ ಮಾಡಿತೋ ಕೂಡಲೇ ಅಧಿಕಾರಿಗಳು ಬಸ್ ವ್ಯವಸ್ಥೆ ಮಾಡಿದ್ದಾರೆ. ಈಗ ಹರನಾಳ ಗ್ರಾಮದಿಂದ ಮೂಕಿಹಾಳ ಗ್ರಾಮದ ಮಾರ್ಗವಾಗಿ ತಾಳಿಕೋಟಿ ಪಟ್ಟಣಕ್ಕೆ ಬಸ್​ ಸೌಕರ್ಯ ಲಭ್ಯವಾಗಿದೆ. ಇದರಿಂದ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment