/newsfirstlive-kannada/media/post_attachments/wp-content/uploads/2025/03/maruthi-sir.jpg)
ಬೆಂಗಳೂರು: ಉನ್ನತ ಮಟ್ಟದ ಪತ್ರಿಕೋದ್ಯಮ ಮತ್ತು ಮಾಧ್ಯಮ ಸಾಧನೆಗಳನ್ನು ಗೌರವಿಸುವ ಸೇಂಟ್ ಪೌಲ್ಸ್ ನ್ಯಾಷನಲ್ ಮೀಡಿಯಾ ಅವಾರ್ಡ್ಸ್ (SPNMA) 2025 ವಾರ್ಷಿಕ ಸಮಾರಂಭ ಶುಕ್ರವಾರ ನಡೆಯಿತು. ನಗರದ ನಾಗಸಂದ್ರದಲ್ಲಿರುವ ST PAULS ಆಡಿಟೋರಿಯಂನಲ್ಲಿ ಅರ್ಥಪೂರ್ಣ ಕಾರ್ಯಕ್ರಮ ನಡೆಯಿತು.
ಇದನ್ನೂ ಓದಿ:ಫೋನ್ ನೀರಿಗೆ ಬಿದ್ದಾಗ ಈ ತಪ್ಪು ಮಾಡಿದ್ರೆ ಗೋವಿಂದ.. ಫಸ್ಟ್ ಏನು ಮಾಡಬೇಕು ಗೊತ್ತಾ?
ST PAULS ಕಾಲೇಜಿನ ಪತ್ರಿಕೋದ್ಯಮ ಮತ್ತು ಮಾಧ್ಯಮ ಸಂವಹನ ವಿಭಾಗ, ಕರ್ನಾಟಕ ಮೀಡಿಯಾ ಅಕಾಡೆಮಿ ಮತ್ತು ಕರ್ನಾಟಕ ಸರ್ಕಾರದ ಸಹಯೋಗದೊಂದಿಗೆ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಮುದ್ರಿತ, ಡಿಜಿಟಲ್, ಪ್ರಸಾರ ಮತ್ತು ಕಾರ್ಪೊರೇಟ್ ಸಂವಹನ ಕ್ಷೇತ್ರಗಳಲ್ಲಿನ ವಿವಿಧ ಸಾಧಕರರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. 111 ವರ್ಷಗಳ ಇತಿಹಾಸ ಹೊಂದಿರುವ ಸೊಸೈಟಿ ಆಫ್ ಸೇಂಟ್ ಪೌಲ್ಸ್ ಎಂಬ ಜಾಗತಿಕ ಮಾಧ್ಯಮ ಸಂಸ್ಥೆ, ಪತ್ರಿಕೋದ್ಯಮದ ಶ್ರೇಷ್ಟತೆ, ನಿಷ್ಠೆ, ನೈತಿಕತೆ ಮತ್ತು ಸಮಾಜಮುಖಿ ಸೇವೆಗೆ 14 ಅರ್ಹ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿದೆ. ಸಾರ್ವಜನಿಕ ಸಂಪರ್ಕದಲ್ಲಿ ನಾಯಕತ್ವಕ್ಕಾಗಿ PRCI ನ ನಿವೃತ್ತ ಅಧ್ಯಕ್ಷ ಶ್ರೀ ಎಂ.ಬಿ. ಜಯರಾಮ್ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ಮತ್ತು ಸಾರ್ವಜನಿಕ ಸಂಪರ್ಕದಲ್ಲಿ ಶ್ರೇಷ್ಠತೆ ನೀಡಿ ಗೌರವಿಸಲಾಯಿತು. ಪ್ರಜಾವಾಣಿಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್, ಡಿಜಿಟಲ್ ಮಾಧ್ಯಮಕ್ಕೆ ನೀಡಿದ ಕೊಡುಗೆಗಳಿಗಾಗಿ, ವಾರ್ತಾ ಭಾರತಿ'ಯ ಪ್ರಧಾನ ಸಂಪಾದಕ ಅಬ್ದುಸ್ಸಲಾಂ ಪುತ್ತಿಗೆಯವರಿಗೆ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಶ್ರೇಷ್ಠತೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ನ್ಯೂಸ್ ಫಸ್ಟ್ ಕನ್ನಡದ ಪ್ರಧಾನ ಸಂಪಾದಕ ಮಾರುತಿ ಎಸ್.ಎಚ್., ಕೃತಕ ಬುದ್ಧಿಮತ್ತೆ ಆಧಾರಿತ ಸುದ್ದಿ ನಿರೂಪಣೆಯಲ್ಲಿನ ನಾವೀನ್ಯತೆಗೆ ಪ್ರಸಾರ ಪತ್ರಿಕೋದ್ಯಮದಲ್ಲಿ ಶ್ರೇಷ್ಠತೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ, ರಕ್ಷಣೆ ಮತ್ತು ಭೌಗೋಳಿಕ ರಾಜಕೀಯ ವಿಶ್ಲೇಷಣೆಯಲ್ಲಿನ ಕೊಡುಗೆಗಳಿಗಾಗಿ ವಿಜ್ಞಾನ ಸಂವಹನದಲ್ಲಿ ಶ್ರೇಷ್ಠತೆ ಪ್ರಶಸ್ತಿ,
ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ನ ಶ್ರೀಮತಿ. ಬಾಲಾ ಚೌಹಾಣ್ ಅವರ ಪ್ರಭಾವಶಾಲಿ ತನಿಖಾ ವರದಿಗಳಿಗೆ
ತನಿಖಾ ಪತ್ರಿಕೋದ್ಯಮದಲ್ಲಿ ಶ್ರೇಷ್ಠತೆ ಪ್ರಶಸ್ತಿ,ಟೆಕಿಯಾನ್ ಕಾರ್ಪ್ ಬೆಂಗಳೂರಿನ ಹಿರಿಯ ಸಂವಹನ ನಿರ್ದೇಶಕ, ಅರವಿಂದ್ ಗೌಡರಿಗೆ, ಸಮಗ್ರ ಸಂವಹನ ತಂತ್ರಗಳನ್ನು ಅಭಿವೃದ್ಧಿಪಡಿಸುವ ಮತ್ತು ಕಾರ್ಯಗತಗೊಳಿಸುವಲ್ಲಿ ಅವರ ಕೊಡುಗೆಗಳಿಗಾಗಿ ಸಿಎಸ್‌ಆರ್ ಸಂವಹನದಲ್ಲಿ ಶ್ರೇಷ್ಠತೆ ಪ್ರಶಸ್ತಿ ನೀಡಲಾಯಿತು.
ಇಷ್ಟೇ ಅಲ್ಲದೇ ಕರ್ನಾಟಕದ ಮುಖ್ಯ ವರದಿಗಾರ ಮತ್ತು tv-9 ಕ್ರೈಂ ಬ್ಯೂರೋ ಮ್ಯುಖ್ಯಸ್ಥ ಕಿರಣ್ ಎಚ್.ವಿ. ಅವರ ಪ್ರಭಾವಶಾಲಿ ಅಪರಾಧ ವರದಿಗಳಿಗಾಗಿ, ಅಪರಾಧ ಪತ್ರಿಕೋದ್ಯಮದಲ್ಲಿ ಶ್ರೇಷ್ಠತೆ ಪ್ರಶಸ್ತಿ,ರೇಡಿಯೋ ಮಿರ್ಚಿ 98.3 ಎಫ್‌ಎಂ ಬೆಂಗಳೂರಿನ ಪ್ರೋಗ್ರಾಮಿಂಗ್ ಮುಖ್ಯಸ್ಥ ಪಿ.ಡಿ. ಸತೀಶ್ ಚಂದ್ರ ಅವರು ರೇಡಿಯೋ ಸಂವಹನ ಕ್ಷೇತ್ರದಲ್ಲಿ ಅವರ ಕೊಡುಗೆಗಳಿಗಾಗಿ ರೇಡಿಯೋ ಸಂವಹನದಲ್ಲಿ ಶ್ರೇಷ್ಠತೆ ಪ್ರಶಸ್ತಿ, ಶೈಲಶ್ರೀ ಬಿಯವರು ಸಂವಹನ ಮತ್ತು ಮಾಧ್ಯಮ ಅಧ್ಯಯನ ಕ್ಷೇತ್ರಕ್ಕೆ ನೀಡಿದ ಅತ್ಯುತ್ತಮ ಕೊಡುಗೆಗಳಿಗಾಗಿಮಾಧ್ಯಮ ಶಿಕ್ಷಣದಲ್ಲಿ ಶ್ರೇಷ್ಠತೆಯನ್ನ ಕೂಡ ಇದೇ ಸಂದರ್ಭದಲ್ಲಿ ಪ್ರದಾನ ಮಾಡಲಾಯಿತು.
ಇದನ್ನೂ ಓದಿ: ಸುನಿತಾ ವಿಲಿಯಮ್ಸ್ಗೆ ಕಾಡಿದ ಅನಾರೋಗ್ಯ ಸಮಸ್ಯೆ; ಸವಾಲುಗಳು ಏನೇನು..?
ಆರ್‌ಜೆ ಬಿಗ್ 92.7 ಎಫ್‌ಎಂ, ಬೆಂಗಳೂರು, ಆರ್‌ಆರ್ ಪ್ರೊಡಕ್ಷನ್ಸ್‌ನ ಸಂಸ್ಥಾಪಕಿ ರಶ್ಮಿ ರಾವ್ ಅವರಿಗೆ
ತಂತ್ರಜ್ಞಾನ ಮತ್ತು ಮನರಂಜನೆಯಿಂದ ಸಾಮಾಜಿಕ ಸಮಸ್ಯೆಗಳವರೆಗೆ ಒಳನೋಟವುಳ್ಳ ಸಂದರ್ಶನಗಳು ಮತ್ತು ಚರ್ಚೆಗಳ ಮೂಲಕ ಕೇಳುಗರನ್ನು ತೊಡಗಿಸಿಕೊಳ್ಳುವುದಕ್ಕಾಗಿ ಪಾಡ್‌ಕ್ಯಾಸ್ಟಿಂಗ್‌ನಲ್ಲಿ ಶ್ರೇಷ್ಠತೆ ಪ್ರಶಸ್ತಿ,ದಿ ಟೈಮ್ಸ್ ಆಫ್ ಇಂಡಿಯಾದ ಹಿರಿಯ ಸಹಾಯಕ ಸಂಪಾದಕ ಚೇತನ್ ಕುಮಾರ್ ಅವರು ಭಾರತದ ಬಾಹ್ಯಾಕಾಶ, ರಕ್ಷಣಾ ಮತ್ತು ವಿಜ್ಞಾನ ಕ್ಷೇತ್ರಗಳ ಕುರಿತು ತಮ್ಮ ವ್ಯಾಪಕ ವರದಿಗಾಗಿ ಬಾಹ್ಯಾಕಾಶ ಮತ್ತು ರಕ್ಷಣಾ ಪತ್ರಿಕೋದ್ಯಮದಲ್ಲಿ ಶ್ರೇಷ್ಠತೆ ಪ್ರಶಸ್ತಿ,ಬೆಂಗಳೂರು ಟೈಮ್ಸ್‌ನ ವರದಿಗಾರ್ತಿ ಕುಮಾರಿ. ಶ್ರೀದೇವಿ ಅಯ್ಯಂಗಾರ್ ಅವರಿಗೆ ಮುದ್ರಣ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮ ಎರಡಕ್ಕೂ ಜೀವನಶೈಲಿ ಮತ್ತು ಮನರಂಜನಾ ಬೀಟ್‌ಗಳಲ್ಲಿ ಕಥೆಗಳನ್ನು ರಚಿಸುವುದು, ಬರೆಯುವುದು, ಸಂಪಾದಿಸುವುದು ಮತ್ತು ನಿರ್ಮಿಸುವುದಕ್ಕಾಗಿ ಜೀವನಶೈಲಿ ಮತ್ತು ಮನರಂಜನಾ ಪತ್ರಿಕೋದ್ಯಮದಲ್ಲಿ ಶ್ರೇಷ್ಠತೆ, ಹ್ಯಾಪಿಯೆಸ್ಟ್ ಹೆಲ್ತ್‌ನ ಹಿರಿಯ ಸಂಪಾದಕ ಸುನಿತಾ ರಾವ್ಗೆ ಪ್ರಮುಖ ಆರೋಗ್ಯ ಮತ್ತು ಸಾಮಾಜಿಕ ಸಮಸ್ಯೆಗಳ ಕುರಿತು ವರದಿಗಾಗಿ ಆರೋಗ್ಯ ಸಂವಹನದಲ್ಲಿ ಶ್ರೇಷ್ಠತೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪತ್ರಿಕೆ, ರೇಡಿಯೋ, ಟಿವಿ ಮತ್ತು ಡಿಜಿಟಲ್ ಮಾಧ್ಯಮದ ಮೂಲಕ ಜಾಗತಿಕ ಮಟ್ಟದಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಪ್ರಮುಖ ಪಾತ್ರವಹಿಸಿರುವ ಸೋಸೈಟಿ ಆಫ್ ಸೇಂಟ್ ಪೌಲ್ಸ್ ಸಂಸ್ಥೆಯ, ಈ ವರ್ಷದ ST PAULS ರಾಷ್ಟ್ರೀಯ ಮೀಡಿಯಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಹಲವು ಗಣ್ಯರು ಭಾಗಿಯಾಗಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ