/newsfirstlive-kannada/media/post_attachments/wp-content/uploads/2025/04/NF_EDUCATION_EXPO.jpg)
ಕೇಳ್ರಪ್ಪೋ ಕೇಳಿ ಪಿಯುಸಿ ಎಕ್ಸಾಂ ಬರೆದಿರೋ ವಿದ್ಯಾರ್ಥಿಗಳೇ ಇಲ್ ಕೇಳಿ. ನಿಮಗಾಗಿ ನಿಮ್ಮ ಊರಿಗೆ ನ್ಯೂಸ್ಫಸ್ಟ್ ಹೊತ್ತು ಬರುತ್ತಿದೆ EDUCATION EXPO. ಮತ್ಯಾಕೆ ತಡ ಯಾವ ಕೋರ್ಸ್ ಆಪ್ಟ್ ಮಾಡೋದು ಅನ್ನೋ ಗೊಂದಲ ಬಿಡಿ. ಎಕ್ಸ್ಪೋಗೆ ಭೇಟಿ ಕೋಡೋಕೆ ರೆಡಿಯಾಗಿ. ಎಲ್ಲಿ ಅನ್ನೋದರ ಸಂಪೂರ್ಣ ವಿವರ ಇಲ್ಲಿದೆ.
ಪಿಯುಸಿ ಎಕ್ಸಾಂ ಬರೆದಾಯ್ತು, ರಿಸಲ್ಟ್ ಕೂಡ ಬಂದಾಯಿತು. ಮುಂದೇನ್ ಮಾಡೋದು ಅನ್ನೋ ಗೊಂದಲದಲ್ಲಿದ್ದೀರಾ?. ನಾವ್ ಉತ್ತರ ಕರ್ನಾಟಕದವರು, ಇಲ್ಲಿಂದ ಬೆಂಗಳೂರು, ಅಲ್ಲಿ ಇಲ್ಲಿ ಹೋಗಿ ಏನ್ ಮಾಡ್ಬೇಕು ಅಂತ ತಿಳಿದುಕೊಳ್ಳೋಕೆ ಆಗಲ್ಲ ಅನ್ನೋ ಟೆನ್ಷನ್ನಲ್ಲಿದ್ದೀರಾ?. ನ್ಯೂಸ್ಫಸ್ಟ್ ಇರುವಾಗ ವಿದ್ಯಾರ್ಥಿಗಳಿಗೆ ಟೆನ್ಷನ್ ಯಾಕೆ?.
ಉತ್ತರ ಕರ್ನಾಟಕದಲ್ಲಿ ಅತೀ ದೊಡ್ಡ EDUCATION EXPO
ನಿಮಗಾಗಿ ನಿಮ್ಮ ನ್ಯೂಸ್ಫಸ್ಟ್ ನಿಮ್ಮ ಉತ್ತರ ಕರ್ನಾಟಕಕ್ಕೆ EDUCATION EXPO ಹೊತ್ತು ತರುತ್ತಿದೆ. ಹೌದು ನಾಳೆ ಮತ್ತು ನಾಡಿದ್ದು ಕಲಬುರಗಿಯ ಶರಣಬಸವೇಶ್ವರ ರಸ್ತೆಯಲ್ಲಿರುವ ಶ್ರೀ ಖೂಬಾ ಕಲ್ಯಾಣ ಮಂಟಪದಲ್ಲಿ ನ್ಯೂಸ್ ಫಸ್ಟ್ ಜ್ಞಾನ ಸಂಗಮ. MEGA EDUCATION EXPO ಆಯೋಜನೆ ಮಾಡಿದೆ.
ಭಾಗವಹಿಸುವವರಿಗೆ ಏನು ಲಾಭ?
- ಬೆಂಗಳೂರು ಸೇರಿದಂತೆ ರಾಜ್ಯದ ಪ್ರತಿಷ್ಠಿತ ಕಾಲೇಜುಗಳು ಭಾಗಿ
- ಪಿಯುಸಿ ನಂತರ ಮುಂದೇನು ಎಂಬ ಪ್ರಶ್ನೆಗಳಿಗೆ ಸಿಗಲಿದೆ ಉತ್ತರ
- ಕೋರ್ಸ್ಗಳ ಜೊತೆಗೆ ಕಾಲೇಜಿನ ದಾಖಲಾತಿಯ ಬಗ್ಗೆ ವಿವರ
- ಉದ್ಯೋಗಾಧಾರಿತ ಭಿನ್ನ ವಿಭಿನ್ನ ಕೋರ್ಸ್ಗಳ ಬಗ್ಗೆ ಮಾಹಿತಿ
- ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರ ಜೊತೆ ಮಾತನಾಡಲು ನೇರ ಅವಕಾಶ
- ಸ್ಥಳದಲ್ಲೇ ದಾಖಲಾಗುವ ಆಯ್ದ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್
‘ಎಲ್ಲರೂ ಭಾಗವಹಿಸಿ’
ಕಲಬುರಗಿ ನಗರದಲ್ಲಿ ಇದೇ 19 ಹಾಗೂ 20 ರಂದು ಬೃಹತ್ ಎಜುಕೇಶನ್ ಎಕ್ಸ್ ಪೋ ನಡೆಯುತ್ತದೆ. ಜ್ಞಾನ ಸಂಗಮ ಹೆಸರಿನಡಿ ಬೃಹತ್ ಕಾರ್ಯಕ್ರಮವನ್ನ ನ್ಯೂಸ್ಫಸ್ಟ್ ಚಾನೆಲ್ ಆಯೋಜನೆ ಮಾಡುತ್ತಿದೆ. ಎಲ್ಲರೂ ಈ ಎಜುಕೇಶನ್ ಎಕ್ಸ್ ಪೋದಲ್ಲಿ ಭಾಗವಹಿಸಿ. ಇದರ ಲಾಭವನ್ನು ಪಡೆಯಬೇಕು.
ಶರಣಪ್ರಕಾಶ್ ಪಾಟೀಲ್, ಸಚಿವ
ಇದನ್ನೂ ಓದಿ:9 ಸಾವಿರಕ್ಕೂ ಹೆಚ್ಚು ಸಹಾಯಕ ಲೋಕೋ ಪೈಲಟ್ ಹುದ್ದೆಗಳು.. SSLC ಪಾಸ್ ಆಗಿದ್ರೆ ಸಾಕು…!
ಇನ್ನೂ, ಮೆಗಾ ಎಜುಕೇಶನ್ ಎಕ್ಸ್ಪೋದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಗಂಟೆಗೊಮ್ಮೆ ಆಕರ್ಷಕ ಬಹುಮಾನ ಸಿಗಲಿದೆ. ಜೊತೆಗೆ ಅದೃಷ್ಟಶಾಲಿ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ವಿತರಣೆ ಮಾಡಲಾಗುತ್ತೆ.
ನ್ಯೂಸ್ ಫಸ್ಟ್ ಜ್ಞಾನ ಸಂಗಮ MEGA EDUCATION EXPOದಲ್ಲಿ ಮಾಹಿತಿ ಜೊತೆ ಲಾಭ ಕೂಡ ಇದ್ದೇ ಇದೆ. ಸೋ ಮಿಸ್ ಮಾಡ್ದೇ ನಾಳೆ ಮತ್ತು ನಾಡಿದ್ದು ಕಲಬುರಗಿಯ ಶ್ರೀ ಖೂಬಾ ಕಲ್ಯಾಣ ಮಂಟಪಕ್ಕೆ ಭೇಟಿ ಕೊಡೋದನ್ನ ಮಾತ್ರ ಮರೆಯಬೇಡಿ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ