ಡೊನಾಲ್ಡ್‌ ಟ್ರಂಪ್‌ ಹತ್ಯೆ ಯತ್ನದ ಪ್ರಕರಣಕ್ಕೆ ಭಯಾನಕ ಟ್ವಿಸ್ಟ್‌.. ಇರಾನ್​ ಕಡೆಗೆ ದೃಷ್ಟಿ ಸರಿದಿದ್ದು ಏಕೆ?

author-image
Ganesh
Updated On
ಡೊನಾಲ್ಡ್‌ ಟ್ರಂಪ್‌ ಹತ್ಯೆ ಯತ್ನದ ಪ್ರಕರಣಕ್ಕೆ ಭಯಾನಕ ಟ್ವಿಸ್ಟ್‌.. ಇರಾನ್​ ಕಡೆಗೆ ದೃಷ್ಟಿ ಸರಿದಿದ್ದು ಏಕೆ?
Advertisment
  • ಅಮೆರಿಕಾ ಮಾಜಿ ಅಧ್ಯಕ್ಷನ ಮೇಲೆ ಗುಂಡಿನ ದಾಳಿ ಪ್ರಕರಣ
  • ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿವೆ ಹೊಸತೊಂದು ಆಯಾಮ
  • ಇರಾನ್​ ಕಡೆ ಬೆರಳು ಮಾಡುತ್ತಿವೆ ಅಮೆರಿಕಾದ ಗುಪ್ತಚರ ದಳ

ವಾಷಿಂಗ್ಟನ್​: ಅಮೆರಿಕಾದಲ್ಲಿಗ ಚುನಾವಣೆಯ ಕಾವು... ಕಳೆದ ಬಾರಿ ಅಖಾಡದಲ್ಲಿ ಸೋತು ಮಕಾಡೆ ಮಲಗಿದ್ದ ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್, ಈ ಬಾರಿ ಮತ್ತೆ ಅಮೆರಿಕಾದ ಅಧ್ಯಕ್ಷ ಗಾದಿ ಏರುವ ಕನಸು ಕಾಣುತ್ತಿದ್ದಾರೆ.. ನವೆಂಬರ್​ನಲ್ಲಿ ನಡೆಯಲಿರುವ ಚುನಾವಣೆಗೆ ಈಗಿನಿಂದಲೇ ಭರದಿಂದ ಸಿದ್ಧತೆಗಳು ಸಾಗುತ್ತಿವೆ.. ಪ್ರಚಾರದ ಅಬ್ಬರ, ಭಾಷಣದ ಆರ್ಭಟಗಳು ನಡೆಯುತ್ತಿರುವ ಈ ಸಂದರ್ಭದಲ್ಲಿಯೇ ಕೆಲವೇ ಕೆಲವು ದಿನಗಳ ಹಿಂದೆ ಅಮೆರಿಕಾ ಮಾತ್ರವಲ್ಲ ಇಡೀ ಜಗತ್ತೇ ಒಂದು ಬಾರಿ ಬೆಚ್ಚಿ ಬೀಳುವಂತ ಘಟನೆ ನಡೆದು ಹೋಯ್ತು.. ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ಮೇಲೆ ನಡೆದ ಶೂಟೌಟ್​ ಒಂದು ಕ್ಷಣ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿತ್ತು.. ವಿಶ್ವಕ್ಕೆ ತಾನೆ ದೊಡ್ಡಣ್ಣ ಎಂದು ಹೇಳಿಕೊಳ್ಳುವ.. ಜಗತ್ತಿನ ಸರ್ವಶ್ರೇಷ್ಠ ಗುಪ್ತಚರ ಇಲಾಖೆಗಳಲ್ಲಿ ಒಂದನ್ನು ತಾನು ಹೊಂದಿರುವ ಅಮೆರಿಕಾದಲ್ಲಿ, ಅದು ತಂತ್ರಜ್ಞಾನವನ್ನು ತನ್ನ ಪ್ರತಿ ಹೆಜ್ಜೆಯಲ್ಲಿಯೂ ಅಳವಡಿಸಿಕೊಂಡಿರುವ ಬಲಾಢ್ಯ ದೇಶವೊಂದರ ಮಾಜಿ ಅಧ್ಯಕ್ಷರನ್ನ ಹೀಗೆ ಹಾಡಹಗಲೇ ಇನ್ನೂ ಮೀಸೆ ಚಿಗುರದ ಹುಡುಗನೊಬ್ಬ ಹತ್ಯೆ ಮಾಡಲು ಮುಂದಾಗುತ್ತಾನೆ ಅದೂ ತನ್ನ ಒಂದೇ ಒಂದು ಹೆಜ್ಜೆ ಗುರುತು ಕೂಡ ಗುಪ್ತಚರ ಇಲಾಖೆಗೆ ಸಿಗದಂತೆ ಅಂದ್ರೆ ಇದು ಇಡೀ ವಿಶ್ವವನ್ನೇ ಅಚ್ಚರಿಗೆ ನೂಕಿತ್ತು.. ಸದ್ಯ ಅನೇಕ ತನಿಖೆಗಳು.. ಮಾಹಿತಿಗಳು ಒಂದೊಂದೇ ಹುಬ್ಬೇರಿಸುವಂತಹ ಸಂಗತಿಗಳನ್ನು ಆಚೆ ತರುತ್ತಿವೆ.. ಹಂತಕನ ಜಾಡು ಜಾಲಾಡಿರುವ ತನಿಖಾ ಸಂಸ್ಥೆಗಳು ಈಗ ಇರಾನ್​ನತ್ತ ಬೆರಳು ಮಾಡುತ್ತಿವೆ.

ಇದನ್ನೂ ಓದಿ: ಅಮೆರಿಕ ಉಪಾಧ್ಯಕ್ಷನಿಗೂ ಭಾರತದ ನಂಟು.. ವ್ಯಾನ್ಸ್ ಪತ್ನಿ ಉಷಾ ಚಿಲುಕುರಿ ಯಾರು? ಹಿನ್ನೆಲೆ ಏನು?

publive-image

ಶೂಟೌಟ್​ಗೂ ಒಂದು ವಾರದ ಮುನ್ನವೇ ಹೆಚ್ಚಿಸಲಾಗಿತ್ತು ಟ್ರಂಪ್ ಭದ್ರತೆ..!

ಟ್ರಂಪ್​ ಹತ್ಯೆಯ ಯತ್ನ ಹಲವು ಪ್ರಶ್ನೆಗಳನ್ನು ಎತ್ತಿರುವ ನಡುವೆಯೇ ಈಗ ಹೊಸದೊಂದು ವರದಿ ಆಚೆ ಬಂದಿದೆ.. ಅದು ಇರಾನ್​ ಟ್ರಂಪ್ ಹತ್ಯೆಗೆ ತಯಾರಿ ನಡೆಸಿದೆ ಅನ್ನೋದು ಅಮೆರಿಕಾ ಗುಪ್ತಚರ ಇಲಾಖೆಯ ಅರಿವಿಗೆ ಬಂದಿತ್ತು, ಹಲವು ಮೂಲಗಳ ಮಾಹಿತಿಯಿಂದ ಇಂಥಹದೊಂದು ಆತಂಕಕಾರಿ ವರದಿಯು ತನ್ನ ಕೈಸೇರಿದ ಬಳಿಕ ಡೋನಾಲ್ಡ್ ಟ್ರಂಪ್​ನ ಭದ್ರತೆಯನ್ನು ಹೆಚ್ಚಿಸಲಾಗಿತ್ತು .. ಕೌಂಟರ್ ಅಸಾಲ್ಟ್ ಎಜೆಂಟ್ಸ್​, ಕೌಂಟರ್ ಸ್ನೈಪರ್ಸ್, ಡ್ರೋನ್​ಗಳ ಜೊತೆ ಜೊತೆಗೆ ರೋಬೋಟಿಕ್ ಶ್ವಾನಗಳನ್ನು ಕೂಡ ಟ್ರಂಪ್ ಭದ್ರತೆಗೆ ನಿಯೋಜಿಸಲಾಗಿತ್ತು.. ಟ್ರಂಪ್ ಹೋದಲ್ಲಿ ಎಲ್ಲಾ ಅವರನ್ನು ಕಾಯಲೆಂದೇ ಇಂಥಹ ಭದ್ರತಾ ಬೇಲಿಯೊಂದು ಎದ್ದು ನಿಲ್ಲುತ್ತಿತ್ತು.. ಇದೆಲ್ಲದಾರಾಚೆಯೂ ಥಾಮಸ್ ಕ್ರೂಕ್ಸ್ ಎನ್ನುವ 27 ವರ್ಷದ ಮೀಸೆ ಚಿಗುರದ ಹುಡುಗನೊಬ್ಬ ಕೇವಲ 450 ಅಡಿ ದೂರದಿಂದ ಟ್ರಂಪ್​ನತ್ತ ಎಆರ್​ 15 ರೈಫಲ್​ನಿಂದ ಬುಲೆಟ್​ವೊಂದನ್ನು ಸಿಡಿಸಿಬಿಟ್ಟಿದ್ದ.. ಅದೃಷ್ಟವಶಾತ್​ ಅವನು ಟ್ರಂಪ್​ನತ್ತ ನುಗ್ಗಿಸಿದ ಬುಲೆಟ್​ ಟ್ರಂಪ್​ನ ಕಿವಿ ಸವರಿಕೊಂಡು ಹೋಗಿತ್ತು.. ಕೂದಲೆಳೆ ಅಂತರದಲ್ಲಿ ಟ್ರಂಪ್ ಪಾರಾಗಿ ಹೋಗಿದ್ರು.. ಆದ್ರೆ ಸದ್ಯ ಬೇರೆಯದ್ದೇ ಸುದ್ದಿಗಳು ಬರುತ್ತಿವೆ.. ಟ್ರಂಪ್ ಹತ್ಯೆಯ ಯತ್ನದ ಹಿಂದೆ ಇರಾನ್​ನ ಕೈವಾಡವಿದೆಯನ್ನೋ ಗುಸುಗುಸು ಅಮೆರಿಕಾದ ವೈಟ್​ಹೌಸ್​ ಅಂಗಳದಲ್ಲಿ ಹರಿದಾಡುತ್ತಿದೆ.. ಆದ್ರೆ ಹಂತಕನ ಜಾಡು ಹಿಡಿದು ನೋಡಿದಾಗ ಆತನಿಗೂ ತೆಹ್ರಾನ್​​ಗೂ ಯಾವುದೇ ಸಂಬಂಧವಿಲ್ಲ, ಸಂಪರ್ಕವಿಲ್ಲ ಅಂತ ತಿಳಿದು ಬಂದಿದ್ದರೂ ಕೂಡ ಕೆಲವು ಸಂಶಯ ದೃಷ್ಟಿಗಳು ಈಗಲೂ ತೆಹ್ರಾನ್​ ಕಡೆಗೆ ವಾಲುತ್ತಿವೆ..

ಕ್ರೂಕ್​ಗೆ ಪ್ರತ್ಯುತ್ತರ ಕೊಡಲು ತಡವಾಗಿದ್ದು ಏಕೆ..?publive-image

ಟ್ರಂಪ್​ಗೆ ಅಳವಡಿಸಿದ್ದ ಭದ್ರತಾ ಪಡೆಯ ನಿಷ್ಕಾಳಜಿ ಹಾಗೂ ಬೇಜವಾಬ್ದಾರಿತನ ಹಲವು ಸಂಶಯಗಳನ್ನು ಮೂಡಿಸುತ್ತಿವೆ.. ಟ್ರಂಪ್ ಹತ್ಯೆ ಯತ್ನಕ್ಕೆ ಮುಂದಾಗಿದ್ದ ಥಾಮಸ್​ ಕ್ರೂಕ್​ ಬೀಡು ಬಿಟ್ಟ ಕಟ್ಟಡದ ಎದುರೇ ಟ್ರಂಪ್ ಕಾಯಲು ಕೌಂಟರ್ ಸ್ನೈಪರ್ ಒಬ್ಬ ಬಂದೂಕಿಗೆ ಕಣ್ಣು ಕೊಟ್ಟು ಮಿಸುಕಾಡದೇ ನಿಂತಿದ್ದ.. ಅವನ ಎದುರಿನ ಕಟ್ಟದಲ್ಲಿಯೇ ಥಾಮಸ್​ ಕ್ರೂಕ್ ಎಆರ್​ 15 ರೈಫಲ್​ನ್ನು ಟ್ರಂಪ್​ನತ್ತ ಗುರಿಯಿಟ್ಟುಕೊಂಡಿದ್ದ.. ಅದು ಸ್ಪಷ್ಟವಾಗಿ ಕಂಡರೂ ಕೂಡ ಕೌಂಟರ್ ಸ್ನೈಪರ್ ಅವನನ್ನು ತಡೆಯುವ ಯತ್ನಕ್ಕೆ ಮುಂದಾಗಲಿಲ್ಲ.. ಟ್ರಂಪ್​ನತ್ತ ನುಗ್ಗಿ ಬಂದ ಬುಲೆಟ್​ ಅವರ ಕಿವಿ ಸವರಿಕೊಂಡು ಹೋದ ಮೇಲೆ ಸುಮಾರು 86 ಸೆಕೆಂಡ್​ಗಳ ತರುವಾಯ ಆ ಭದ್ರತಾ ಸಿಬ್ಬಂದಿ ಕೌಂಟರ್ ಅಟ್ಯಾಕ್ ಮಾಡಿದೆ. ಇವೆಲ್ಲವೂ ವಿಚಿತ್ರ ರೀತಿಯಲ್ಲಿ ಕಂಡು ಬರುತ್ತಿವೆ.. ಹೀಗಾಗಿ ಟ್ರಂಪ್ ಮರಣ ಶಾಸನಕ್ಕೆ ಮುನ್ನುಡಿ ಬರೆಯಲು ಬೇರೆಯದ್ದೇ ಏನೋ ತಂತ್ರ ನಡೆದಿದೆ ಅನ್ನೋ ಅನುಮಾನಗಳ ಹುತ್ತ ಈ ಪ್ರಕರಣವನ್ನು ಸುತ್ತುಗಟ್ಟಿದೆ.. ಹಾಗಿದ್ರೆ ಇರಾನ್​ ಮೇಲೇಕೆ ಈ ರೀತಿಯ ಒಂದು ಸಂಶಯ ಸೃಷ್ಟಿಯಾಗಲು ಕಾರಣ.. ಇರಾನ್ ಏಕೆ ಟ್ರಂಪ್​​ರನ್ನು ಹತ್ಯೆ ಮಾಡಲು ಸಜ್ಜಾಗುತ್ತಿದೆ ಅನ್ನೋದನ್ನ ನಾವು ನೋಡ್ತಾ ಹೋದ್ರೆ ವಿಷಯ 2020ರ ವರ್ಷಕ್ಕೆ ಹೋಗುತ್ತದೆ. ಇರಾನ್​ ಮತ್ತು ಟ್ರಂಪ್​ ನಡುವೆ ಒಂದು ವೈರತ್ವ ವಿಷದ ಬೀಜಾಂಕುರವಾಗಿದ್ದೇ ಆ ಸಮಯದಲ್ಲಿ.

ಇದನ್ನೂ ಓದಿ: ಡೊನಾಲ್ಡ್ ಟ್ರಂಪ್ ಹತ್ಯೆಗೆ ಯತ್ನ.. ಬೆಚ್ಚಿ ಬೀಳಿಸಿದ 20 ವರ್ಷದ ಯುವಕನ ಅಟ್ಯಾಕ್‌; ಅಸಲಿ ಕಾರಣವೇನು? 

ಟ್ರಂಪ್​ ಮೇಲೇಕೆ ಇರಾನ್​ಗೆ ಆ ಪರಿಯ ಸಿಟ್ಟು..? 2020ರಲ್ಲಿ ನಡೆದಿದ್ದು ಏನು..?

publive-image

ಅಮೆರಿಕಾದ ಮಾಜಿ ಅಧ್ಯಕ್ಷ ಟ್ರಂಪ್ ಹಾಗೂ ಇರಾನ್​ ನಡುವೆ ಒಂದು ವಿಷದ ಬೀಜ ಬಿತ್ತನೆಯಾಗಿದ್ದು 2020 ಜನವರಿ 3ರಂದು ಅದು ಈಗ ಬೆಳೆದು ಹೆಮ್ಮರವಾಗಿದೆ.. ಇರಾನ್ ದೃಷ್ಟಿಯಲ್ಲಿ ಟ್ರಂಪ್ ಎಂದೂ ಕ್ಷಮಿಸಲಾಗದ ಒಬ್ಬ ಅಪ್ಪಟ ಶತ್ರುವಾಗಿ ಬೆಳೆದುಬಿಟ್ರು ಅದಕ್ಕೆ ಕಾರಣ.. ಇರಾನ್​ ಸೇನಾಧಿಕಾರಿಯನ್ನು ಯುಎಸ್​ನ ಸೇನೆ ಏರ್​ಸ್ಟ್ರೈಕ್​ನಲ್ಲಿ ಹೊಡೆದುರುಳಿಸಿದ್ದು.. ಹೌದು, ಟ್ರಂಪ್ ಆಡಳಿತದ ಅವಧಿಯಲ್ಲಿ ಅಮೆರಿಕಾ ಸೇನೆ ಬಾಗ್ದಾದ್​ ಮೇಲೆ ನಡೆಸಿದ ಏರ್​ಸ್ಟ್ರೈಕ್​ನಲ್ಲಿ ಇರಾನ್​​ನ ಸೇನಾಧಿಕಾರಿ ಅತ್ಯಂತ ಪವರ್​ಫುಲ್ ಲೀಡರ್​ ಖಾಸೀಮ್ ಸೋಲೈಮನಿ ಭೀಕರವಾಗಿ ಸಾವನ್ನಪ್ಪಿದ್ದ.. ಟ್ರಂಪ್​ ಆದೇಶದನ್ವಯವೇ ಖಾಸೀಮ್ ಸೋಲೈಮನಿಯನ್ನು ಅಮೆರಿಕಾದ ಸೇನೆ ಏರ್​​ಸ್ಟ್ರೈಕ್ ನಡೆಸಿ ಹತ್ಯೆ ಮಾಡಿತ್ತು.. ಅಂದಿನಿಂದ ಇರಾನ್​ಗೆ ಡೋನಾಲ್ಡ್​ ಟ್ರಂಪ್​ ವೈರಿಗಳ ಪಟ್ಟಿಯಲ್ಲಿ ಮೊದಲಿಗರಾಗಿ ಹೋದ್ರು.. ಒಂದು ಪ್ರತಿಶೋಧಕ್ಕಾಗಿ.. ಸೇಡು ತೀರಿಸಿಕೊಳ್ಳುವುದಕ್ಕಾಗಿ ಇರಾನ್​ ಕಾಯುತ್ತಲೇ ಇದೆ.. ಹೀಗಾಗಿ ಈ ಹತ್ಯೆಯ ಹಿಂದೆ ಇರಾನ್ ಕೈವಾಡ ಇರಬಹುದು ಅನ್ನೋ ಸಂಶಯವನ್ನ ಅಮೆರಿಕಾದ ಗುಪ್ತಚರ ಇಲಾಖೆಗಳು ವ್ಯಕ್ತಪಡಿಸುತ್ತಿವೆ.. ಆದ್ರೆ ಇದನ್ನು ಇರಾನ್ ಮಾತ್ರ ಸಾರಾಸಗಟವಾಗಿ ತಳ್ಳಿ ಹಾಕುತ್ತಿದೆ.. ಅಮೆರಿಕಾ ಮಾಡುತ್ತಿರುವ ಎಲ್ಲಾ ಆರೋಪಗಳು ನಿರಾಧಾರ.. ಟ್ರಂಪ್ ಹತ್ಯೆಯ ಯತ್ನದ ಹಿಂದೆ ನಮ್ಮ ಪಾತ್ರ ಏನೂ ಇಲ್ಲ ಅಂತಿದೆ.. ಅದೆಲ್ಲದರ ಆಚೆಗೂ ಸಿಐಎ ಟ್ರಂಪ್ ಹತ್ಯೆಗೆ ವೇದಿಕೆ ಸಜ್ಜಾಗಿದ್ದರ ಹಿಂದೆ ಇರಾನ್​ ನೆರಳು ಸರಿದಾಡಿರುವ ಬಗ್ಗೆ ಒಂದು ಸಂಶಯವನ್ನು ಇಟ್ಟುಕೊಂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment