ನಿಲ್ಲದ ಮಳೆರಾಯನ ಅಟ್ಟಹಾಸ: ಉ.ಕನ್ನಡ ಜಿಲ್ಲೆಯಲ್ಲಿ ಕುಸಿಯಲಿವೆಯಾ ಮತ್ತಷ್ಟು ಗುಡ್ಡಗಳು..?

author-image
Ganesh
Updated On
ನಿಲ್ಲದ ಮಳೆರಾಯನ ಅಟ್ಟಹಾಸ: ಉ.ಕನ್ನಡ ಜಿಲ್ಲೆಯಲ್ಲಿ ಕುಸಿಯಲಿವೆಯಾ ಮತ್ತಷ್ಟು ಗುಡ್ಡಗಳು..?
Advertisment
  • ಶಿರೂರು ಗುಡ್ಡ ಕುಸಿತ ನಡುವೆ ಜಿಲ್ಲೆಯ ಹಲವೆಡೆ ಗುಡ್ಡ ಕುಸಿತದ ಆತಂಕ
  • ಗೋಕರ್ಣದ ದೇವರಬಾವಿಯಲ್ಲಿ ಗುಡ್ಡ ಕುಸಿತದ ಭೀತಿ
  • ಸುಮಾರು 200ಮೀಟರ್ ವರೆಗೆ ಬಿರುಕು ಬಿಟ್ಟಿರುವ ಗುಡ್ಡ!

ಉತ್ತರಕನ್ನಡ:  ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರೆದಿದೆ.. ರಚ್ಚೆ ಹಿಡಿದವರಂತೆ ಸುರಿಯುತ್ತಿರುವ ಮಳೆಯಿಂದಾಗಿ ಈಗಾಗಲೇ ಹಲವು ಕಡೆ ಭೂಕುಸಿದಂತ ಭಾರೀ ಅವಘಡಗಳು ಸಂಭವಿಸಿವೆ.. ಶಿರೂರು ಗುಡ್ಡ ಕುಸಿತದ ನಡವೆಯೇ ಜಿಲ್ಲೆಯಲ್ಲಿ ಬೇರೆ ಭಾಗಗಳಲ್ಲಿಯೂ ಗುಡ್ಡ ಕುಸಿಯುವ ಆತಂಕ ಎದುರಾಗಿದೆ. ಅದಕ್ಕೆ ಸ್ಪಷ್ಟ ಸಾಕ್ಷಿಯಾಗಿ ನಿಂತಿದೆ ಕುಮಟಾ ತಾಲೂಕಿನ ಗೋಕರ್ಣದ ದೇವರಬಾವಿ.

publive-image

ಇದನ್ನೂ ಓದಿ: ಮಳೆಯ ರಣಾರ್ಭಟ.. ಇಂದು ಈ 5 ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ 

ಕುಮಟಾ ತಾಲೂಕಿನ ಗೋಕರ್ಣದ ದೇವರಬಾವಿಯಲ್ಲಿ ಗುಡ್ಡ ಕುಸಿತದ ಭೀತಿ ಎದುರಾಗಿದೆ. ದೇವರ ಬಾವಿಯ ಬಳಿ ಸುಮಾರು 200 ಮೀಟರ್​ ವರೆಗೆ ಗುಡ್ಡ ಬಾಯಿತೆಗೆದುಕೊಂಡು ನಿಂತಿದೆ.. ಬಿರುಕು ಬಿಟ್ಟಿರುವ ಗುಡ್ಡದ ಭೀಕರತೆ ಎದೆ ಝಲ್ ಎನಿಸುವಂತಿದೆ. ಗುಡ್ಡದ ಕೆಳಭಾಗದಲ್ಲಿ ಸುಮಾರು 10ಕ್ಕೂ ಹೆಚ್ಚು ಮನೆಗಳಿವೆ. ವ್ಯಾಪಕ ಮಳೆಯಿಂದಾಗಿ ಹಾಗೂ ಶಿರೂರು ಗುಡ್ಡ ಕುಸಿತದ ಸುದ್ದಿ ಕೇಳಿರುವ ಅಲ್ಲಿನ ನಿವಾಸಿಗಳು ಭಯಗೊಂಡು ಮನೆಯನ್ನು ಖಾಲಿ ಮಾಡಿದ್ದಾರೆ. ಸುಮಾರು 50 ಅಡಿ ಅಗಲ ಹಾಗೂ 200 ಅಡಿ ಉದ್ದವಾದಲ್ಲಿ ಬಾಯಿ ತೆರೆದುಕೊಂಡಿರುವ ಗುಡ್ಡ ಯಾವುದೇ ಕ್ಷಣದಲ್ಲಾದರೂ ಕುಸಿದು ಬೀಳುವ ಭಯವನ್ನು ಸೃಷ್ಟಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment