/newsfirstlive-kannada/media/post_attachments/wp-content/uploads/2025/05/NF_CRICKET.jpg)
ಭಾರತದಲ್ಲಿ ಅತಿ ಹೆಚ್ಚು ಜನಪ್ರಿಯ ಹೊಂದಿರುವ ಕ್ರೀಡೆ ಎಂದರೆ ಅದು ಕ್ರಿಕೆಟ್. ಗಲ್ಲಿ ಗಲ್ಲಿಗಳಲ್ಲೂ ಕ್ರಿಕೆಟ್ ಕ್ರೇಜ್ ಹೆಚ್ಚಾಗಿಯೇ ಇದೆ. ಅದೇ ರೀತಿ ಹುಬ್ಬಳ್ಳಿಯಲ್ಲೂ ಕ್ರಿಕೆಟ್ ಹುಚ್ಚು ಕಡಿಮೆ ಏನಿಲ್ಲ. ಇದೇ ಕಾರಣದಿಂದ ನಿಮ್ಮ ನ್ಯೂಸ್ ಫಸ್ಟ್ ಈಗ ಹುಬ್ಬಳ್ಳಿಯಲ್ಲಿ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಿದೆ. ಇವತ್ತು ಹಲವು ತಂಡಗಳು ಭರ್ಜರಿ ಸೆಣಸಾಟ ನಡೆಸಿ ಮುಂದಿನ ಸುತ್ತಿಗೆ ಅರ್ಹತೆ ಪಡೆದುಕೊಂಡಿವೆ.
ಗಂಡುಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ಕ್ರಿಕೆಟ್ ಹಬ್ಬ ಶುರುವಾಗಿದೆ. ಹುಬ್ಬಳ್ಳಿಯಲ್ಲಿ ಬ್ಯಾಟು, ಬಾಲ್‌ನದ್ದೇ ಸದ್ದು ಮೊಳಗುತ್ತಿದ್ದು ನಿಮ್ಮ ನ್ಯೂಸ್‌ಫಸ್ಟ್ ವಾಹಿನಿ ಆಯೋಜನೆ ಮಾಡಿರುವ ಕ್ರಿಕೆಟ್ ಕಪ್ ಮೊದಲ ದಿನ ಕ್ರಿಕೆಟ್ ಸೆಣಸಾಟ ನೋಡುಗರ ಗಮನ ಸೆಳೆದಿದೆ.
ಇವತ್ತು ಬೆಳಗ್ಗೆ 9 ಗಂಟೆಗೆ ಹುಬ್ಬಳ್ಳಿಯ ಶಿವಾನಂದ ಗುಂಜಾಳ ಸ್ಪೋರ್ಟ್ಸ್ ಕ್ಲಬ್ನ ಬಿಡಿಕೆ ಗ್ರೌಂಡ್ಸ್‌ನಲ್ಲಿ ಕ್ರಿಕೆಟ್ ಕಲರವ ಶುರುವಾಯಿತು. ಶ್ರೀರಾಜೇಶ್ವರಿ ಪ್ರಾಪರ್ಟೀಸ್ ಪ್ರೆಸೆಂಟ್ಸ್ ನ್ಯೂಸ್‌ಫಸ್ಟ್ ಕ್ರಿಕೆಟ್ ಕಪ್. ಸಪೋರ್ಟೆಡ್ ಬೈ ಸಂತೋಷ್ ಲಾಡ್ ಫೌಂಡೇಶನ್, ಕೆಜಿಪಿ ಗ್ರೂಪ್ ಮತ್ತು ಧಾರವಾಡ್ ರೆಸಿಡೆನ್ಸಿ. ಈ ಪಂದ್ಯಾವಳಿಗೆ ಧಾರವಾಡ ಜಿಲ್ಲಾ ಉಸ್ತುವಾರಿ, ಕಾರ್ಮಿಕ ಸಚಿವ ಸಂತೋಷ್ ಲಾಡ್ ಚಾಲನೆ ನೀಡಿದರು. ನವಲಗುಂದ ಸಿಸಿ ಹಾಗೂ ಐಎಸ್‌ಕೆ ಮುಬಾರಕ್ ತಂಡಗಳ ಪಂದ್ಯದ ಟಾಸ್ ಮಾಡಿದ ಲಾಡ್, ಆಟಗಾರರಿಗೆ ಶುಭ ಹಾರೈಸಿದರು. ನಂತರ ಸಂತೋಷ್ ಲಾಡ್ ಸಹ ಕೈಯಲ್ಲಿ ಬ್ಯಾಟ್ ಹಿಡಿದು ಕ್ರೀಡಾಂಗಣದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದರು. ನಂತರ ನ್ಯೂಸ್‌ಫಸ್ಟ್ ಆಯೋಜಿಸಿದ್ದ ಕ್ರಿಕೆಟ್ ಕಪ್ ಪಂದ್ಯಾವಳಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ನ್ಯೂಸ್‌ಫಸ್ಟ್ ಚಾನೆಲ್ ಅವರು ಹುಬ್ಬಳ್ಳಿ ಭಾಗದಲ್ಲಿ ಕ್ರಿಕೆಟ್ ಟೂರ್ನ್ಮೆಂಟ್ ಅನ್ನು ಆಯೋಜನೆ ಮಾಡಿದ್ದಾರೆ. 16 ತಂಡಗಳು ಇದರಲ್ಲಿ ಭಾಗಿಯಾಗಿವೆ. ಇದೇ ರೀತಿ ಬೇರೆ ಸ್ಪೋರ್ಟ್ಸ್ ಆ್ಯಕ್ಟಿವಿಟಿಸ್ ನ್ಯೂಸ್ಫಸ್ಟ್ನಿಂದ ಆಗಬೇಕು. ಎಲ್ಲ ಆಟಗಳಿಗೆ ಪ್ರೋತ್ಸಾಹ ಕೊಡಿ. ದೇಶದಲ್ಲಿ 140 ಕೋಟಿ ಜನರಿದ್ದಾರೆ. ಹಾಗೇ ಸ್ಪರ್ಧಾತ್ಮಕತೆ ಎಲ್ಲರಲ್ಲೂ ಬೆಳೆಯಬೇಕು.
ಸಂತೋಷ್ ಲಾಡ್, ಸಚಿವ
ಇದನ್ನೂ ಓದಿ:ಗಿಲ್ ಭರ್ಜರಿ ಹ್ಯಾಟ್ರಿಕ್ ಅರ್ಧಶತಕ.. 2 ರನ್ ಇಂದ ಸುದರ್ಶನ್ ಹಾಫ್ಸೆಂಚುರಿ ಮಿಸ್
ಇನ್ನು ಅಂಕಲ್ ಸಿಸಿ ಹಾಗೂ ಧಾರವಾಡ ಕೇಸರಿ ನಡುವೆ ನಡೆದ ಟೂರ್ನಿಯ ಮೊದಲ ಪಂದ್ಯಕ್ಕೆ ನ್ಯೂಸ್‌ಫಸ್ಟ್‌ನ ಪ್ರಧಾನ ಸಂಪಾದಕರಾದ ಮಾರುತಿ ಅವರು ಟಾಸ್ ಮಾಡಿ, ಆಟಗಾರರಿಗೆ ಶುಭ ಹಾರೈಸಿದರು. ಅಂಕಲ್ ಸಿಸಿ ವಿರುದ್ಧ ಧಾರವಾಡ ಕೇಸರಿ ಭರ್ಜರಿ ಗೆಲುವು ಸಾಧಿಸಿತು. ನಂತರ ನಡೆದ ಪಂದ್ಯದಲ್ಲಿ ಎಕ್ತಾ ಸಿಸಿ ವಿರುದ್ಧ ಕುಂದಗೋಳ ಕಿಂಗ್ಸ್ ಜಯಗಳಿಸಿದ್ರೆ, ರಾಯಲ್ ಸಿಸಿ ವಿರುದ್ಧ ಹೆಸ್ಕಾಂ, ಐಎಸ್‌ಕೆ ಮುಬಾರಕ್ ವಿರುದ್ಧ ನವಲಗುಂದ ಸಿಸಿ ಜಯಗಳಿಸಿದವು.
3 ದಿನಗಳ ಕ್ರಿಕೆಟ್ ಕಪ್‌ನ ಮೊದಲನೇ ದಿನವಾದು ಇಂದು ಯಶಸ್ವಿಯಾಗಿ ನಡೆದಿದೆ. ಇನ್ನೂ 2 ದಿನಗಳ ಕಾಲ ನಡೆಯಲಿರೋ ಕ್ರಿಕೆಟ್ ಟೂರ್ನಿಯಲ್ಲಿ ಸಾಕಷ್ಟು ಪಂದ್ಯಗಳು ಬಾಕಿ ಇವೆ. ಆಟಗಾರರು ಸಹ ಫುಲ್ ಜೋಶ್‌ನಲ್ಲೆ ಕಣಕ್ಕಿಳಿದು ಕ್ರೀಡಾ ಸ್ಫೂರ್ತಿ ಮೆರೆಯುತ್ತಿದ್ದಾರೆ. ಅವಳಿನಗರದ ಜನತೆ ಕೂಡಾ ಕ್ರಿಕೆಟ್ ರಸದೌತಣವನ್ನ ಸವಿಯುತ್ತಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ