/newsfirstlive-kannada/media/post_attachments/wp-content/uploads/2024/12/Happy-New-Year-2025.jpg)
2024 ಮುಗಿದು 2025 ವೆಲ್‌ಕಮ್ ಮಾಡೋಕೆ ಭಾರತದಲ್ಲಿ ಇನ್ನು ಕೆಲವು ಗಂಟೆಗಳಷ್ಟೇ ಬಾಕಿ ಇದೆ. ದೇಶಾದ್ಯಂತ ನ್ಯೂ ಇಯರ್ ಸ್ವಾಗತಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಮಧ್ಯರಾತ್ರಿ 12 ಗಂಟೆಗೆ ಹೊಸ ವರ್ಷದ ಸ್ವಾಗತಕ್ಕೆ ಬೆಂಗಳೂರಲ್ಲಿ ಭರ್ಜರಿ ಸಿದ್ಧತೆಗಳಾಗಿದೆ.
ಬೆಂಗಳೂರಿನ ಎಂ.ಜಿ.ರೋಡ್, ಬ್ರಿಗೇಡ್ ರೋಡ್, ಚರ್ಚ್ಸ್ಟ್ರೀಟ್, ಕೋರಮಂಗಲ, ಇಂದಿರಾನಗರದಲ್ಲಿ ನ್ಯೂ ಇಯರ್ ಸೆಲಬ್ರೇಷನ್ ಈಗಾಗಲೇ ರಂಗೇರಿದೆ. ಕೇಕ್ಸ್, ಡಿಜೆ ನೈಟ್ಸ್, ಪಾರ್ಟಿಗೆ ಹೋಟೆಲ್ಗಳು ಸಿದ್ಧವಾಗಿವೆ. ಇಂದು ರಾತ್ರಿ ಗಡಿಯಾರದ ಮುಳ್ಳು 12 ಗಂಟೆಗೆ ಬರುತ್ತಿದ್ದಂತೆ ಎಲ್ಲೆಡೆ ಪಟಾಕಿಗಳ ಸದ್ದು ಕೇಳಿಸುತ್ತದೆ.
Who celebrates new year first. 🌎🎉
📹: geoglobe_tales pic.twitter.com/gTd0V0Ywna
— Fun_Facts (@Fun_Facts4Life)
Who celebrates new year first. 🌎🎉
📹: geoglobe_tales pic.twitter.com/gTd0V0Ywna— Fun_Facts (@Fun_Facts4Life) December 31, 2024
">December 31, 2024
ಮೊದಲು ಸ್ವಾಗತಿಸುವವರು ಯಾರು?
ಇಡೀ ವಿಶ್ವದಲ್ಲಿ ಮೊದಲು ಹೊಸ ವರ್ಷವನ್ನು ಸ್ವಾಗತಿಸುವ ಪ್ರದೇಶ ಕಿರಿಬಾಟಿ ದ್ವೀಪ ರಾಷ್ಟ್ರ. ತನ್ನ ಕಕ್ಷೆಯ ಸುತ್ತ ಭೂಮಿ ತಿರುಗುವುದರಿಂದ ಜಗತ್ತಿನ ವಿವಿಧ ದೇಶಗಳಲ್ಲಿ ಹೊಸ ವರ್ಷಾಚರಣೆ ಸಮಯ ಕೂಡ ವಿಭಿನ್ನವಾಗಿಯೇ ಇದೆ. ವಿಶ್ವದಲ್ಲೇ ಹೊಸ ವರ್ಷ ಮೊದಲು ಸ್ವಾಗತಿಸುವ ಪ್ರದೇಶವೆಂದರೆ ಕಿರಿಬಾಟಿ.
ಹೊಸ ವರ್ಷ ಮೊದಲು ಸ್ವಾಗತಿಸುವ ಗೌರವ ಕಿರಿಬಾಟಿ ಗಣರಾಜ್ಯದಲ್ಲಿರುವ ಕ್ರಿಸ್ಮಸ್ ದ್ವೀಪ ಎಂದು ಕರೆಯಲ್ಪಡುವ ಕಿರಿಟಿಮತಿ ದ್ವೀಪದ್ದು. ಕಿರಿಟಿಮತಿ ದ್ವೀಪದ ಬಳಿಕ ಹೊಸ ವರ್ಷ ಸ್ವಾಗತಿಸುವ 2ನೇ ರಾಷ್ಟ್ರ ನ್ಯೂಜಿಲೆಂಡ್. ನ್ಯೂಜಿಲೆಂಡ್, ಟೊಂಗಾ, ಚಾಥಮ್ ದ್ವೀಪಗಳು ಈಗಾಗಲೇ ಹೊಸ ವರ್ಷ ಸ್ವಾಗತಿಸುತ್ತಿವೆ.
ಇದನ್ನೂ ಓದಿ: 2025ರಲ್ಲಿ ಸಂಭವಿಸಲಿವೆ ಒಟ್ಟು 4 ಗ್ರಹಣ; ಭಾರತದಲ್ಲಿ ಎಷ್ಟು ಗೋಚರ? ಯಾವಾಗ?
ನ್ಯೂಜಿಲೆಂಡ್‌ನಲ್ಲಿ ಭಾರತೀಯ ಕಾಲಮಾನ ಮಧ್ಯಾಹ್ನ 3.45ಕ್ಕೆ 2025 ಹೊಸ ವರ್ಷ ಆಗಮನ ಆಗಿದೆ. ನ್ಯೂಜಿಲೆಂಡ್ ಜನರು ಪಟಾಕಿ ಸಿಡಿಸಿ ಹೊಸ ವರ್ಷವನ್ನು ಬರಮಾಡಿಕೊಂಡಿದ್ದಾರೆ.
ನ್ಯೂಜಿಲೆಂಡ್ ಬಳಿಕ ಹೊಸ ವರ್ಷ ಸ್ವಾಗತಿಸುವ ದೇಶವೆಂದರೆ ಆಸ್ಟ್ರೇಲಿಯಾ. ಆಸ್ಟ್ರೇಲಿಯಾದ ಪೂರ್ವ ಕರಾವಳಿ, ಜಪಾನ್, ದಕ್ಷಿಣ ಕೊರಿಯಾ ಬಳಿಕ ಭಾರತ ಹೊಸ ವರ್ಷ ಸ್ವಾಗತಿಸುತ್ತದೆ. ಶ್ರೀಲಂಕಾ, ಬ್ರಿಟನ್ ಸೇರಿ 25 ದೇಶಗಳು ನಂತರದಲ್ಲಿ ಹೊಸ ವರ್ಷ ಸ್ವಾಗತಿಸುತ್ತವೆ.
ಹೊಸ ವರ್ಷ ಸ್ವಾಗತಿಸುವ ಕೊನೆಯ ಸ್ಥಳ
ಕಿರಿಬಾಟಿ ಗಣರಾಜ್ಯದ ಕಿರಿಟಿಮತಿ ದ್ವೀಪ ಹೊಸ ವರ್ಷಸ್ವಾಗತಿಸುವ ಮೊದಲ ಪ್ರದೇಶವಾದರೆ ಹೊಸ ವರ್ಷ ಸ್ವಾಗತಿಸುವ ಕೊನೆಯ ಸ್ಥಳ ಬೇಕರ್ ದ್ವೀಪ ಮತ್ತು ಹೌಲ್ಯಾಂಡ್ ದ್ವೀಪಗಳು. ಇವೆರಡೂ ಜನವಸತಿ ಇಲ್ಲದ ಪ್ರದೇಶಗಳು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ