/newsfirstlive-kannada/media/post_attachments/wp-content/uploads/2023/10/Newzeland.jpg)
ಇಂದು ನರೇಂದ್ರ ಮೋದಿ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಏಕದಿನ ವಿಶ್ವಕಪ್ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ನ್ಯೂಜಿಲೆಂಡ್ ಗೆದ್ದು ಬೀಗಿದೆ.
ಟಾಸ್ ಸೋತರೂ ಫಸ್ಟ್ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ನಿಗದಿತ 50 ಓವರ್ನಲ್ಲಿ 9 ವಿಕೆಟ್ ನಷ್ಟಕ್ಕೆ 282 ರನ್ ಗಳಿಸಿತ್ತು. ಬೇರ್ಸ್ಟೋ 33, ರೂಟ್ 77, ಹ್ಯಾರೀ ಬ್ರೂಕ್ 25, ಜೋಸ್ ಬಟ್ಲರ್ 43 ರನ್ ಗಳಿಸಿದ್ದರು. ಈ ಮೂಲಕ ನ್ಯೂಜಿಲೆಂಡ್ಗೆ ಸಾಧಾರಣ ಮೊತ್ತದ ಗುರಿ ನೀಡಿದ್ದರು.
ಇನ್ನು, ಇಂಗ್ಲೆಂಡ್ ನೀಡಿದ ಗುರಿಯನ್ನು ಬೆನ್ನತ್ತಿದ ನ್ಯೂಜಿಲೆಂಡ್ ಪರ ಡಿವೋನ್ ಕಾನ್ವೇ ಓಪನರ್ ಆಗಿ ಬಂದರು. ಇಂಗ್ಲೆಂಡ್ ಬೌಲರ್ಗಳ ಬೆಂಡೆತ್ತಿದ ಕಾನ್ವೇ ಕೇವಲ 121 ಬಾಲ್ನಲ್ಲಿ 3 ಸಿಕ್ಸರ್, 19 ಫೋರ್ ಸಮೇತ 152 ರನ್ ಚಚ್ಚಿದ್ರು. ಇವರಿಗೆ ಸಾಥ್ ನೀಡಿದ ಭಾರತ ಮೂಲದ ಯಂಗ್ ಬ್ಯಾಟ್ಸ್ಮನ್ ರಾಚಿನ್ ರವೀಂದ್ರ ತಾನು ಡೆಬ್ಯೂಟ್ ಮಾಡಿದ ಮೊದಲ ಪಂದ್ಯದಲ್ಲೇ ಸೆಂಚೂರಿ ಸಿಡಿಸಿದ್ರು. ಕೇವಲ 96 ಎಸೆತಗಳಲ್ಲಿ 5 ಸಿಕ್ಸರ್, 11 ಫೋರ್ ಸಮೇತ 123 ರನ್ ಬಾರಿಸಿದ್ರು.
Two quickfire hundreds from Rachin Ravindra and Devon Conway helped New Zealand to a comfortable win in the #CWC23 opener ?#ENGvNZ ?: https://t.co/9XyPD7lF90pic.twitter.com/qR6tnjQLGB
— ICC Cricket World Cup (@cricketworldcup)
Two quickfire hundreds from Rachin Ravindra and Devon Conway helped New Zealand to a comfortable win in the #CWC23 opener 👊#ENGvNZ 📝: https://t.co/9XyPD7lF90pic.twitter.com/qR6tnjQLGB
— ICC Cricket World Cup (@cricketworldcup) October 5, 2023
">October 5, 2023
ನ್ಯೂಜಿಲೆಂಡ್ ಕೇವಲ 36.2 ಓವರ್ನಲ್ಲಿ 1 ವಿಕೆಟ್ ನಷ್ಟಕ್ಕೆ 283 ರನ್ ಸಿಡಿಸಿ ಗೆಲುವು ಸಾಧಿಸಿದೆ. ಈ ಮೂಲಕ ಹೊಸ ದಾಖಲೆ ಬರೆದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ