ಮಾಜಿ ಪತ್ರಕರ್ತ ಮುಂದಿನ ಉಪರಾಷ್ಟ್ರಪತಿ..? ರೇಸ್​ನಲ್ಲಿರೋ ಇವರು ಯಾರು..?

author-image
Ganesh
Updated On
ಮಾಜಿ ಪತ್ರಕರ್ತ ಮುಂದಿನ ಉಪರಾಷ್ಟ್ರಪತಿ..? ರೇಸ್​ನಲ್ಲಿರೋ ಇವರು ಯಾರು..?
Advertisment
  • ಉಪರಾಷ್ಟ್ರಪತಿ ಸ್ಥಾನಕ್ಕೆ ಜಗದೀಪ್ ಧನಕರ್ ರಾಜೀನಾಮೆ
  • ಧನಕರ್​​ರಿಂದ ತೆರವಾದ ಸ್ಥಾನಕ್ಕೆ ಶೀಘ್ರದಲ್ಲೇ ಚುನಾವಣೆ
  • ರೇಸ್​ನಲ್ಲಿ ಬಿಜೆಪಿ, ಎನ್​ಡಿಎ ನಾಯಕರ ಹೆಸರು ಮುಂಚೂಣಿ

ಉಪರಾಷ್ಟ್ರಪತಿ ಜಗದೀಪ್ ಧನಕರ್ (Jagdeep Dhankhar) ಅವರಿಂದ ಸ್ಥಾನ ತೆರವಾಗ್ತಿದ್ದಂತೆಯೇ ಉತ್ತರಾಧಿಕಾರಿ ಹುಡುಕುವ ಪ್ರಯತ್ನಗಳು ಶುರುವಾಗಿವೆ. ಕೇಂದ್ರದ ಹಿರಿಯ ನಾಯಕರು ಅಭ್ಯರ್ಥಿಗಳ ಪ್ರೊಫೈಲ್‌ಗಳನ್ನು ಗಂಭೀರವಾಗಿ ಪರಿಶೀಲನೆ ಮಾಡ್ತಿದ್ದಾರೆ. ಹೀಗಾಗಿ ಮುಂದಿನ ಉಪರಾಷ್ಟ್ರಪತಿ (Vice President of India) ಯಾರು ಅನ್ನೋದು ತೀವ್ರ ಕುತೂಹಲ ಮೂಡಿಸಿದೆ.

ಉಪರಾಷ್ಟ್ರಪತಿಗಳ ರೇಸ್​ನಲ್ಲಿ ಬಿಜೆಪಿ ಮತ್ತು ಎನ್‌ಡಿಎ (BJP and NDA) ಪಕ್ಷಗಳ ನಾಯಕರ ಹೆಸರು ಕೇಳಿ ಬರುತ್ತಿವೆ. ಅವರಲ್ಲಿ ಪ್ರಮುಖವಾಗಿ ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ್ ನಾರಾಯಣ್ ಸಿಂಗ್ (Harivansh Narayan Singh) ಹೆಸರು ಪ್ರಬಲವಾಗಿ ಕೇಳಿ ಬರುತ್ತಿದೆ. ನಿನ್ನೆ ಇವರು ರಾಷ್ಟ್ರಪತಿ ದ್ರೌಪದಿ ಮುರ್ಮುರನ್ನು ಭೇಟಿ ಮಾಡಿರೋದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಈ ಐದು ಸವಾಲು ಮೆಟ್ಟಿ ನಿಂತ್ರೆ ಟೀಂ ಇಂಡಿಯಾ ಸೇಫ್.. ಇಲ್ಲದಿದ್ರೆ ಕನಸು ಭಗ್ನ..!

publive-image

ಬಿಹಾರ ಮೂಲದ ಹರಿವಂಶ್​ಗೆ ಅಪಾರ ರಾಜಕೀಯ ಅನುಭವವಿದೆ. ಇವರು 2014ರಲ್ಲಿ ರಾಜ್ಯಸಭೆಗೆ ಮೊದಲ ಬಾರಿಗೆ ಪ್ರವೇಶ ಮಾಡಿದರು. ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ. ರಾಜಕೀಯ ಪ್ರವೇಶಿಸುವ ಮೊದಲು ಹಲವು ವರ್ಷಗಳ ಕಾಲ ಪತ್ರಕರ್ತರಾಗಿ ಕೆಲಸ ಮಾಡಿದ್ದಾರೆ. ಮಾಜಿ ಪ್ರಧಾನಿ ಚಂದ್ರಶೇಖರ್​​ಗೆ ಸಲಹೆಗಾರರಾಗಿಯೂ ಕೆಲಸ ಮಾಡಿದ್ದಾರೆ. ಅಂದಿನ ಸರ್ಕಾರ ಪತನದ ಬಳಿಕ ಪತ್ರಿಕೋದ್ಯಮಕ್ಕೆ ಮರಳಿದ್ದರು.

ನಿತೀಶ್ ಕುಮಾರ್ ನೇತೃತ್ವದ ಜೆಡಿಯುನಿಂದ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾದರು. 2020 ರಿಂದ ರಾಜ್ಯಸಭೆಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಿಹಾರ ವಿಧಾನಸಭಾ ಚುನಾವಣೆ ಶೀಘ್ರದಲ್ಲೇ ಬರಲಿದ್ದು, ಎನ್‌ಡಿಎ ಸರ್ಕಾರ ಹರಿವಂಶ್ ಅವರನ್ನು ಉಪಾಧ್ಯಕ್ಷರನ್ನಾಗಿ ನೇಮಿಸಬಹುದು ಎಂದು ಹೇಳಲಾಗುತ್ತಿದೆ.

ಸಂವಿಧಾನದ ಪ್ರಕಾರ.. ಉಪಾಧ್ಯಕ್ಷರ ಹುದ್ದೆ ಖಾಲಿಯಾದ 60 ದಿನದಲ್ಲಿ ಹೊಸ ಉಪರಾಷ್ಟ್ರತಿಗಳ ಚುನಾವಣೆ ಕಡ್ಡಾಯ. ಅಂದರೆ ಇದರ ಪ್ರಕ್ರಿಯೆ ಸೆಪ್ಟೆಂಬರ್ 19 ರೊಳಗೆ ಪೂರ್ಣಗೊಳ್ಳಬೇಕು. ಹೀಗಾಗಿ ಉಪಾಧ್ಯಕ್ಷರ ಚುನಾವಣೆಗೆ ಶೀಘ್ರದಲ್ಲೇ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಲಿದೆ. ಸಂವಿಧಾನದ 68 (2) ನೇ ವಿಧಿಯ ಅಡಿಯಲ್ಲಿ ಚುನಾವಣೆ ನಡೆಯಲಿದೆ. ಉಪಾಧ್ಯಕ್ಷರಾಗಿ ಆಯ್ಕೆಯಾದ ವ್ಯಕ್ತಿ ಅಧಿಕಾರ ವಹಿಸಿಕೊಂಡ ದಿನಾಂಕದಿಂದ ಐದು ವರ್ಷಗಳ ಅವಧಿಗೆ ಉಪಾಧ್ಯಕ್ಷರಾಗಿ ಮುಂದುವರಿಯುತ್ತಾರೆ.

ಇದನ್ನೂ ಓದಿ: ಕುಸುಮ್ ಬಿ ಯೋಜನೆಯಡಿ ನೀರಾವರಿ ಪಂಪ್ ಸೆಟ್.. ಕೇಂದ್ರ, ರಾಜ್ಯ ಸರ್ಕಾರ ಎಷ್ಟು ಸಬ್ಸಿಡಿ ನೀಡುತ್ತವೆ?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment