/newsfirstlive-kannada/media/post_attachments/wp-content/uploads/2025/07/darshan8.jpg)
ಬೆಂಗಳೂರು: ಜಾಮೀನು ರದ್ದು ಭೀತಿ ಮಧ್ಯೆ ದರ್ಶನ್ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಮೊನ್ನೆಯಷ್ಟೇ ಜಾಮೀನು ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಪೂರ್ಣಗೊಳಿಸಿದ್ದು, ಅಂತಿಮ ತೀರ್ಪನ್ನು ಮುಂದಿನ ವಾರಕ್ಕೆ ಕಾಯ್ದಿರಿಸಿದೆ.
ಇದನ್ನೂ ಓದಿ: ಆಸೆ ಸೀರಿಯಲ್ನಲ್ಲಿ ಏನಾಗ್ತಿದೆ..? ಮೀನ-ಸೂರ್ಯ, ಮನೋಜ-ರೋಹಿನಿ ರೋಮ್ಯಾನ್ಸ್ ವಿಡಿಯೋ ವೈರಲ್!
ಈ ಮಧ್ಯೆ ನಟ ದರ್ಶನ್ ಡೆವಿಲ್ ಸಿನಿಮಾ ಶೂಟಿಂಗ್ಗಾಗಿ ಥಾಯ್ಲೆಂಡ್ಗೆ ಹೋಗಿದ್ದರು. ವಿದೇಶದಲ್ಲಿ ಶೂಟಿಂಗ್ ಮುಗಿಸಿಕೊಂಡು ತಡರಾತ್ರಿ 11:45ರ ಸುಮಾರಿಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದರ್ಶನ್ ವಾಪಸ್ ಆಗಿದ್ದಾರೆ. ಇನ್ನೂ, ದರ್ಶನ್ ಜೊತೆಗೆ ಪತ್ನಿ ವಿಜಯಲಕ್ಷ್ಮಿ ದರ್ಶನ್, ಹಾಗೂ ನಟ ಧನ್ವೀರ್ ಜೊತೆಗೆ ಮನೆಗೆ ತೆರಳಿದ್ದಾರೆ.
ರೇಣುಕಾಸ್ವಾಮಿ ಕೇಸ್‌ನಲ್ಲಿ ನಟ ದರ್ಶನ್‌ಗೆ ಹೈಕೋರ್ಟ್ ನೀಡಿದ್ದ ಜಾಮೀನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಅವರಲ್ಲಿ ಪವಿತ್ರಾ ಗೌಡ A1, ದರ್ಶನ್ A2, ಪ್ರದೂಷ್ A14, ಲಕ್ಷ್ಮಣ್ A12, ನಾಗರಾಜ್ A11, ಅನುಕುಮಾರ್ A7, ಜಗದೀಶ್ A6 ಈ 7 ಆರೋಪಿಗಳಿಗೆ ಹೈಕೋರ್ಟ್ ಜಾಮೀನು ನೀಡಿತ್ತು. ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೊರ್ಟ್ ಮೆಟ್ಟಿಲೇರಿತ್ತು. ಸದ್ಯ ಮೊನ್ನೆ ಜಾಮೀನು ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಪೂರ್ಣಗೊಳಿಸಿದ್ದು, ಅಂತಿಮ ತೀರ್ಪನ್ನು ಮುಂದಿನ ವಾರಕ್ಕೆ ಕಾಯ್ದಿರಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ