/newsfirstlive-kannada/media/post_attachments/wp-content/uploads/2024/09/NHAI_JOBS.jpg)
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಹೆಚ್ಎಐ)ವು ಹೊಸ ನೇಮಕಾತಿಗಳನ್ನು ಮಾಡುತ್ತಿದೆ. ಈ ಸಂಬಂಧ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಮಾಡಿದೆ. ಈ ಹುದ್ದೆಗೆ ಡೆಪ್ಯುಟೇಶನ್ ಆಧಾರದ (Deputation Basis) ಮೇಲೆ ನೇಮಿಸಿಕೊಳ್ಳಲಾಗುತ್ತದೆ. ಅಲ್ಲದೇ ಕೆಲಸದಲ್ಲಿ ಸಾಕಷ್ಟು ಅನುಭವ ಇರುವಂತವರು ಇವುಗಳಿಗೆ ಅರ್ಜಿ ಸಲ್ಲಿಸಬಹುದು.
ಈ ಉದ್ಯೋಗಗಳಿಗೆ 3 ವರ್ಷಗಳ ಅವಧಿಗೆ ಆಕಾಂಕ್ಷಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಇದನ್ನು ಇನ್ನೂ ಎರಡು ವರ್ಷಗಳವರೆಗೆ ಇಲಾಖೆ ವಿಸ್ತರಿಸಬಹುದು. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕೃತ ವೆಬ್ಸೈಟ್ ಮೂಲಕ ಆನ್ಲೈನ್ನಲ್ಲಿ ಉದ್ಯೋಗಾಕಾಂಕ್ಷಿಗಳು ಅರ್ಜಿ ಸಲ್ಲಿಕೆ ಮಾಡಬಹುದು. ಜನವರಿ 6 ರಂದು ಸಂಜೆ 6 ಗಂಟೆ ಒಳಗೆ ಅರ್ಜಿ ಸಲ್ಲಿಕೆ ಮಾಡಬೇಕು. ಇನ್ನು ಈ ಹುದ್ದೆಗೆ ಸಂಬಂಧಿಸಿದ ಇತರೆ ಮಾಹಿತಿ ಪರಿಶೀಲನೆ ಮಾಡಬೇಕು ಎಂದರೆ ಇಲಾಖೆಯ ಪಿಡಿಎಫ್ ಅನ್ನು ಗಮನಿಸಿ.
ಮಾಸಿಕ ವೇತನ ಹೇಗಿದೆ?
67,700 ರಿಂದ 2,08,700 ರೂಪಾಯಿಗಳು
ಉದ್ಯೋಗದ ಹೆಸರು
ಮ್ಯಾನೇಜರ್ (ಫೈನಾನ್ಸ್ ಮತ್ತು ಅಕೌಂಟ್ಸ್)
ಒಟ್ಟು ಹುದ್ದೆಗಳು- 17
ಇದನ್ನೂ ಓದಿ:250ಕ್ಕೂ ಹೆಚ್ಚು ಉದ್ಯೋಗಗಳು.. GAIL ಸಂಸ್ಥೆಯ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆ ದಿನ ಯಾವುದು?
ವಯೋಮಿತಿ- ಅಭ್ಯರ್ಥಿಗಳಿಗೆ 56 ವರ್ಷ ಮೀರಿರಬಾರದು
ವಿದ್ಯಾರ್ಹತೆ
ವಾಣಿಜ್ಯ ಪದವಿ (ಬಿಕಾಮ್) ಅಥವಾ ಚಾರ್ಟರ್ಡ್ ಅಕೌಂಟೆಂಟ್ ಅಥವಾ ಸರ್ಟಿಫೈಡ್ ಮ್ಯಾನೇಜ್‌ಮೆಂಟ್ ಅಕೌಂಟೆಂಟ್ ಅಥವಾ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ (ಹಣಕಾಸು) (ಸಾಮಾನ್ಯ ಕೋರ್ಸ್‌ಗಳ ಮೂಲಕ) ಸ್ನಾತಕೋತ್ತರ ಪದವಿ ಪಡೆದಿರಬೇಕು.
ಇದರ ಜೊತೆಗೆ 4 ವರ್ಷಗಳ ಅನುಭವ ಇರಬೇಕು
ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಕೆಯೆ ಕೊನೆಯ ದಿನಾಂಕ- 06 ಜನವರಿ 2025
- ಅರ್ಜಿ ಪ್ರಿಂಟ್ ತೆಗೆದುಕೊಳ್ಳುವ ದಿನಾಂಕ- 06 ಜನವರಿ 2025
- ಸಂಜೆ 6 ಗಂಟೆ ಒಳಗೆ ಅರ್ಜಿಯ ಎಲ್ಲ ಕೆಲಸ ಮುಗಿಸಬೇಕು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ