ಇಂದೇ ಅಪ್ಲೇ ಮಾಡಿ..! ನುರಿತ ಅಭ್ಯರ್ಥಿಗಳಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಲ್ಲಿ ಉದ್ಯೋಗಗಳು

author-image
Bheemappa
Updated On
ಇಂದೇ ಅಪ್ಲೇ ಮಾಡಿ..! ನುರಿತ ಅಭ್ಯರ್ಥಿಗಳಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಲ್ಲಿ ಉದ್ಯೋಗಗಳು
Advertisment
  • ಹೆದ್ದಾರಿ ಪ್ರಾಧಿಕಾರ ಯಾವ್ಯಾವ ಪೋಸ್ಟ್​ಗಳಿಗೆ ಅರ್ಜಿ ಆಹ್ವಾನಿಸಿದೆ?
  • ವರ್ಷಕ್ಕೆ ಲಕ್ಷ ಲಕ್ಷ ಸಂಬಳ ನೀಡುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ
  • ಕೆಲಸ ಮಾಡುವ ಸ್ಥಳ ಯಾವುದು, ವಿದ್ಯಾರ್ಹತೆ ಏನು ಕೇಳಲಾಗಿದೆ.?

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್​​ಹೆಚ್​​ಎಐ) ದಲ್ಲಿ ಕೆಲಸ ಮಾಡಲು ಬಯಸುವ ಅಭ್ಯರ್ಥಿಗಳಿಗೆ ಇಲ್ಲೊಂದು ಉತ್ತಮವಾದ ಅವಕಾಶವಿದೆ. ಎನ್​​ಹೆಚ್​​ಎಐ ಇಲಾಖೆಯು ಖಾಲಿ ಇರುವಂತ ಹುದ್ದೆಗಳನ್ನು ನೇಮಕಾತಿ ಮಾಡುತ್ತಿದೆ. ಈ ಸಂಬಂಧ ಆಸಕ್ತಿ ಇರುವ ಅರ್ಹ ಅಭ್ಯರ್ಥಿಗಳು ಈ ಉದ್ಯೋಗಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದು.

ಎನ್​​ಹೆಚ್​​ಎಐನಲ್ಲಿ ಹೆಡ್-ಟೆಕ್ನಿಕಲ್ ಹಾಗೂ ಹೆಡ್-ಟೋಲ್ ಆಪರೇಷನ್ ಹುದ್ದೆಗಳನ್ನ ನೇಮಕಾತಿ ಮಾಡಲಾಗುತ್ತಿದೆ. ಇದಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಮಾಡಿದ್ದು ಯಾವುದೇ ಪರೀಕ್ಷೆ ಇರುವುದಿಲ್ಲ. ಅರ್ಜಿಗಳನ್ನು ಇ-ಮೇಲ್ ([email protected]) ಮೂಲಕ ಮಾತ್ರ ಕಳಿಸಬೇಕು. ಕೇಳಿರುವ ಎಲ್ಲ ದಾಖಲಾತಿಗಳನ್ನು ಜೆರಾಕ್ಸ್ ಕಾಪಿಗೆ ಸೆಲ್ಫ್​ ಅಟೆಸ್ಟೆಡ್ ಮಾಡಿ ಕಚೇರಿ ಇಮೇಲ್ ವಿಳಾಸಕ್ಕೆ ಅರ್ಜಿ ಸೆಂಡ್ ಮಾಡಬೇಕು.

ಪೋಸ್ಟ್ ಹೆಸರು ಹಾಗೂ ಎಷ್ಟು ಹುದ್ದೆಗಳು?

​ಹೆಡ್-ಟೆಕ್ನಿಕಲ್- 01
ಹೆಡ್-ಟೋಲ್ ಆಪರೇಷನ್- 01

ಇದನ್ನೂ ಓದಿ: ಅಂಚೆ ಇಲಾಖೆಯಿಂದ ಶೀಘ್ರವೇ ದೊಡ್ಡ ಮಟ್ಟದಲ್ಲಿ ಉದ್ಯೋಗಗಳ ನೇಮಕಾತಿ..!

publive-image

ವರ್ಷದ ಸಂಭಾವನೆ-
ಆಯ್ಕೆಯಾದ ಅಭ್ಯರ್ಥಿಗಳಿಗೆ ವರ್ಷಕ್ಕೆ ಅಂದಾಜು 29,000,00 ಲಕ್ಷ ರೂಪಾಯಿ ವೇತನ ನೀಡಲಾಗುತ್ತದೆ. ಜೊತೆಗೆ ಸಂಚಾರಕ್ಕಾಗಿ ವಾಹನ ಇರುತ್ತದೆ. ಈ ಕೆಲಸಗಳು ಕಾಂಟ್ರಾಕ್ಟ್ ಬೇಸ್ ಆಗಿದ್ದು ಅಭ್ಯರ್ಥಿಗಳ ಪರ್ಫಾಮೆನ್ಸ್ ಚೆನ್ನಾಗಿದ್ದಾರೆ ಉದ್ಯೋಗ ಮುಂದುವರೆಸಬಹುದು.

ಕೆಲಸ ಮಾಡುವ ಸ್ಥಳ- ದೆಹಲಿ

ವಿದ್ಯಾರ್ಹತೆ-
ಬಿಇ/ ಬಿಟೆಕ್- ಸಿವಿಲ್

ವಯಸ್ಸಿನ ಮಿತಿ
55 ರಿಂದ 63 ವರ್ಷದ ಒಳಗಿನವರಿಗೆ ಅವಕಾಶ

ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ?
ಎನ್​​ಹೆಚ್​​ಎಐ ಆಯ್ಕೆ ಆದ ಅಭ್ಯರ್ಥಿಗಳಿಗೆ ಸಂದರ್ಶನ ನಡೆಸುತ್ತದೆ.
ಸಂದರ್ಶನದಲ್ಲಿ ಕೆಲಸದ ಅನುಭವವನ್ನು ಆಧಾರಿಸಿ ನೇಮಕಾತಿ ಇರುತ್ತೆ

ಪ್ರಮುಖ ಲಿಂಕ್-https://nhai.gov.in/nhai/sites/default/files/vacancy_files/Recruitment_Ad_Head_Tech_and_Head_TO.pdf

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment