/newsfirstlive-kannada/media/post_attachments/wp-content/uploads/2025/01/JOBS_NHAI.jpg)
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಗುತ್ತಿಗೆ ಆಧಾರದ ಮೇಲೆ ಸಲಹೆಗಾರ ಹುದ್ದೆಗಳನ್ನು ಆಹ್ವಾನ ಮಾಡಿದೆ. ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದ ನಿವೃತ್ತ ಅಧಿಕಾರಿಗಳು ಮಾತ್ರ ಈ ಕೆಲಸಗಳಿಗೆ ಆನ್ಲೈನ್ ಮೂಲಕ ಅಪ್ಲೇ ಮಾಡಬಹುದಾಗಿದೆ. ಗರಿಷ್ಠ 65 ವರ್ಷಗಳ ಒಳಗಿನ ಆಕಾಂಕ್ಷಿಗಳು ಹುದ್ದೆಗಳಿಗೆ ಪ್ರಯತ್ನ ಮಾಡಬಹುದಾಗಿದೆ.
ಸಲಹೆಗಾರ (Advisor), ಜಂಟಿ ಸಲಹೆಗಾರ (Joint Advisor) ಸೇರಿ ಒಟ್ಟು ಮೂರು ಹುದ್ದೆಗಳನ್ನು ಇಲಾಖೆಯು ಆಹ್ವಾನ ಮಾಡಿದೆ. ವಿಶ್ವವಿದ್ಯಾಲಯದಿಂದ ಪದವಿಯಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪೂರ್ಣಗೊಳಿಸಿರಬೇಕು. ಅಲ್ಲದೇ ಕೇಂದ್ರ ಅಥವಾ ರಾಜ್ಯ ಸರ್ಕಾರದಲ್ಲಿ ಮುಖ್ಯ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿರಬೇಕು. ಆಗ ಮಾತ್ರ ಈ ಕೆಲಸಗಳಿಗೆ ಅಪ್ಲೇ ಮಾಡಲು ಅವಕಾಶ ಇದೆ.
ಇದನ್ನೂ ಓದಿ: ಸದ್ಯದಲ್ಲೇ BDAನಲ್ಲಿ ಉದ್ಯೋಗಗಳ ನೇಮಕಾತಿ.. ಸರ್ಕಾರದ ಅನುಮತಿಗೆ ಕಾಯುತ್ತಿರುವ ಇಲಾಖೆ
ಕೆಲಸಕ್ಕೆ ಎಲ್ಲಿ ನೇಮಕ ಮಾಡಲಾಗುತ್ತೆ?
ಇನ್ನು ಈ ಕೆಲಸಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತದೆ. ಗರಿಷ್ಠ 3 ವರ್ಷಗಳ ವರೆಗೆ ಮಾತ್ರ ಉದ್ಯೋಗಕ್ಕೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತೆ. ಈಗಾಗಲೇ ರಿಲೀಸ್ ಮಾಡಿರುವ ಅಧಿಸೂಚನೆಯಂತೆ ಎಲ್ಲ ಮಾನದಂಡಗಳನ್ನು ನೀವು ಹೊಂದಿದ್ದೇ ಆದರೆ ಅಪ್ಲೇ ಮಾಡಬಹುದಾಗಿದೆ. ಉದ್ಯೋಗಕ್ಕೆ ಆಯ್ಕೆಯಾದ ಅಭ್ಯರ್ಥಿಗಳನ್ನು ಎನ್‌ಎಚ್‌ಎಐ ಹೆಡ್ ಕ್ವಾರ್ಟರ್ ಪಾಟ್ನಾ ಮತ್ತು ಚೆನ್ನೈನ ಕಚೇರಿಗಳಲ್ಲಿ ಕೆಲಸಕ್ಕೆ ನಿಯೋಜಿಸಲಾಗುತ್ತದೆ. ಯಾವುದೇ ಸಮಯದಲ್ಲಿ ಒಪ್ಪಂದವನ್ನು ರದ್ದು ಮಾಡಿ ಹುದ್ದೆ ಕೊನೆಗೊಳಿಸುವ ಹಕ್ಕನ್ನು ಸಂಸ್ಥೆ ಹೊಂದಿರುತ್ತದೆ.
ಸಂಬಳ ಎಷ್ಟು ನೀಡಲಾಗುತ್ತದೆ?
ಆಯ್ಕೆ ಆದ ಅಭ್ಯರ್ಥಿಗಳು ಸಂಬಳದ ವಿಚಾರಕ್ಕೆ ಬಂದರೆ ಎನ್‌ಎಚ್‌ಎಐ ಉತ್ತಮ ಮಟ್ಟದ ಸ್ಯಾಲರಿ ನೀಡುತ್ತಿದೆ. 75 ಸಾವಿರ ರೂಪಾಯಿಯಿಂದ 2 ಲಕ್ಷ ರೂಪಾಯಿವರೆಗೆ ಹುದ್ದೆಗೆ ತಕ್ಕಂತೆ ವೇತನ ಇರುತ್ತದೆ. ಇದರ ಜೊತೆ ಭತ್ಯೆಗಳನ್ನು ನೀಡಲಾಗುತ್ತದೆ. ಉದ್ಯೋಗ ಆಕಾಂಕ್ಷಿಗಳು 06 ಫೆಬ್ರುವರಿ 2025ರ ಸಂಜೆ 6 ಗಂಟೆ ಒಳಗಾಗಿ ಅಪ್ಲೇ ಮಾಡಬಹುದಾಗಿದೆ.
ಈ ಕೆಲಸಗಳ ಮಾಹಿತಿಗಾಗಿ- https://nhai.gov.in/nhai/sites/default/files/vacancy_files/Notification_for_the_post_of_Advisior_Utility.pdf
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ