/newsfirstlive-kannada/media/post_attachments/wp-content/uploads/2024/11/JOB_BANKS-1.jpg)
ದೀ ನ್ಯಾಷನಲ್ ಹೈ ಸ್ಪೀಡ್ ಟ್ರೈನ್ ಕಾರ್ಪೊರೆಷನ್ ಲಿಮಿಟೆಡ್ (ಎನ್ಹೆಚ್ಎಸ್ಆರ್ಸಿಎಲ್) ಹೊಸ ಹುದ್ದೆಗಳನ್ನು ಆಹ್ವಾನ ಮಾಡಿದೆ. ಸಂಸ್ಥೆಯಲ್ಲಿ ಖಾಲಿ ಇರುವಂತ ವ್ಯವಸ್ಥಾಪಕ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಇದಕ್ಕಾಗಿ ಹೊಸ ಅರ್ಜಿಗಳನ್ನು ಆಹ್ವಾನ ಮಾಡಿದ್ದು ಅರ್ಹ ಹಾಗೂ ಆಸಕ್ತಿ ಇರುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅಪ್ಲೇ ಮಾಡಬಹುದು.
ಅರ್ಜಿ ಸಲ್ಲಿಕೆಯು ಈಗಾಗಲೇ ಆರಂಭವಾಗಿದೆ. ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ, ಅರ್ಜಿ ಸಲ್ಲಿಕೆ ಮಾಡಬಹುದು. ಈ ನೇಮಕಾತಿ ಹೈ-ಸ್ಪೀಡ್ ರೈಲು ವಲಯದಲ್ಲಿ ವೃತ್ತಿಜೀವನ ಆರಂಭಿಸಲು ಬಯಸುವ ಅಭ್ಯರ್ಥಿಗಳಿಗೆ ಅತ್ಯುತ್ತಮ ಅವಕಾಶ ಆಗಿದೆ. ಎಷ್ಟು ಉದ್ಯೋಗಗಳು ಇವೆ, ವಿದ್ಯಾರ್ಹತೆ ಏನು, ವಯೋಮಿತಿ, ಅರ್ಜಿ ಶುಲ್ಕ ಸೇರಿ ಇತರೆ ಮಾಹಿತಿ ಇಲ್ಲಿದೆ. ತಾಂತ್ರಿಕ ಮತ್ತು ವ್ಯವಸ್ಥಾಪಕ ಎರಡೂ ಕ್ಷೇತ್ರಗಳಲ್ಲಿ ಹುದ್ದೆಗಳನ್ನು ಸದ್ಯಕ್ಕೆ ಭರ್ತಿ ಮಾಡಲಾಗುತ್ತಿದೆ.
ಹುದ್ದೆಗೆ ನೇಮಕ ಆದವರಿಗೆ ಸಂಬಳ?
40,000 ದಿಂದ 1,60,000 ರೂಪಾಯಿಗಳು (ಹುದ್ದೆಗಳಿಗೆ ತಕ್ಕಂತೆ ಸಂಬಳ ಇದೆ)
ಇದನ್ನೂ ಓದಿ:ನೌಕಾಪಡೆಯ ವೈದ್ಯಕೀಯ ಸಹಾಯಕ ಹುದ್ದೆಗಳಿಗೆ ಈ ಕೂಡಲೇ ಅಪ್ಲೇ ಮಾಡಿ.. ಸಂಬಳ ಎಷ್ಟು?
ಹುದ್ದೆಯ ಹೆಸರು, ಎಷ್ಟು ಕೆಲಸಗಳು ಇವೆ?
- ಜೂನಿಯರ್ ಟೆಕ್ನಿಕಲ್ ವ್ಯವಸ್ಥಾಪಕ (ಸಿವಿಲ್)- 35 ಉದ್ಯೋಗಗಳು
- ಜೂನಿಯರ್ ಟೆಕ್ನಿಕಲ್ ವ್ಯವಸ್ಥಾಪಕ (ಎಲೆಕ್ಟ್ರಿಕಲ್)- 17 ಹುದ್ದೆಗಳು
- ಜೂನಿಯರ್ ಟೆಕ್ನಿಕಲ್ ವ್ಯವಸ್ಥಾಪಕ (ಎಸ್ಎನ್ಟಿ)- 3 ಉದ್ಯೋಗಗಳು
- ಜೂನಿಯರ್ ಟೆಕ್ನಿಕಲ್ ವ್ಯವಸ್ಥಾಪಕ (ಆರ್ಎಸ್)- 4 ಕೆಲಸಗಳು
- ಜೂನಿಯರ್ ಟೆಕ್ನಿಕಲ್ ವ್ಯವಸ್ಥಾಪಕ (ಎಸ್ಎನ್ಟಿ)- 3 ಉದ್ಯೋಗಗಳು
- ಅಸಿಸ್ಟೆಂಟ್ ಟೆಕ್ನಿಕಲ್ ವ್ಯವಸ್ಥಾಪಕ (ಆರ್ಟಿಕಲ್ಚರ್)- 8 ಹುದ್ದೆ
ಒಟ್ಟು ಹುದ್ದೆಗಳು- 72
ವಿದ್ಯಾರ್ಹತೆ ಏನು ಕೇಳಲಾಗಿದೆ?
ಬಿಇ, ಬಿಟೆಕ್, ಆರ್ಟಿಕಲ್ಚರ್ ಹಾಗೂ ಇವುಗಳಿಗೆ ಸಂಬಂಧಿಸಿದ ಕೋರ್ಸ್
ವಯಸ್ಸಿನ ಅರ್ಹತೆ
ಗರಿಷ್ಠ 35 ವರ್ಷದ ಒಳಗಿನವರಿಗೆ ಅವಕಾಶ
ಅರ್ಜಿ ಶುಲ್ಕ ಎಷ್ಟು ಇದೆ?
ಜನರಲ್, ಇಡಬ್ಲುಎಸ್, ಒಬಿಸಿ ವರ್ಗಗಳಿಗೆ- 400 ರೂಪಾಯಿ
ಎಸ್ಸಿ, ಎಸ್ಟಿ, ಮಹಿಳೆಯರಿಗೆ ಶುಲ್ಕ ವಿನಾಯತಿ ಇದೆ
ಮುಖ್ಯ ದಿನಾಂಕಗಳು
ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನಾಂಕ- 24 ಏಪ್ರಿಲ್ 2025
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ