ರಾಮೇಶ್ವರಂ ಕೆಫೆ ಬಾಂಬರ್‌ ಫೋಟೋ ಬಿಡುಗಡೆ; ₹10 ಲಕ್ಷ ನಗದು ಬಹುಮಾನ

author-image
Veena Gangani
Updated On
ರಾಮೇಶ್ವರಂ ಕೆಫೆ ಬಾಂಬರ್‌ ಫೋಟೋ ಬಿಡುಗಡೆ; ₹10 ಲಕ್ಷ ನಗದು ಬಹುಮಾನ
Advertisment
  • ಪ್ರಮುಖ ಆರೋಪಿಗಳ ಸುಳಿವು ಕೊಟ್ಟರೆ 10 ಲಕ್ಷ ನಗದು ಘೋಷಣೆ
  • ಆರೋಪಿ ಸುಳಿವು ಕೊಟ್ಟವರ ಮಾಹಿತಿ ಗೌಪ್ಯವಾಗಿ ಇಡಲಾಗುತ್ತೆ- NIA
  • ಬಾಂಬ್ ಇಟ್ಟು ಎಸ್ಕೇಪ್ ಆಗಿರುವ ಮುಸಾವೀರ್ ಹುಸೇನ್ ಶಾಜೀಬ್

ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದ ತನಿಖೆ ಮುಂದುವರೆದಿದೆ. ಬಾಂಬರ್‌ಗಾಗಿ ತೀವ್ರ ಶೋಧ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಪ್ರಮುಖ ಆರೋಪಿಗಳ ಫೋಟೋ ಬಿಡುಗಡೆ ಮಾಡಿದೆ. ಇದರ ಜೊತೆಗೆ ಆರೋಪಿಗಳ ಬಗ್ಗೆ ಸುಳಿವು ಕೊಟ್ಟವರಿಗೆ 10 ಲಕ್ಷ ರೂಪಾಯಿ ನಗದು ಬಹುಮಾನ ಘೋಷಿಸಲಾಗಿದೆ.

ಇದನ್ನೂ ಓದಿ:ರಾಮೇಶ್ವರಂ ಕೆಫೆ ಸ್ಫೋಟ; ಶಂಕಿತ ಆರೋಪಿಯ ಮತ್ತೆ 4 ಫೋಟೋ ರಿಲೀಸ್ ಮಾಡಿದ NIA

publive-image

ಶಂಕಿತ ಆರೋಪಿಗಳ ಫೋಟೋ ಸಮೇತ ಪೋಸ್ಟ್​ ಮಾಡಿರುವ NIA ಆರೋಪಿ ಸುಳಿವು ಕೊಟ್ಟವರ ಮಾಹಿತಿ ಗೌಪ್ಯವಾಗಿ ಇಡಲಾಗುತ್ತೆ. ಸುಳಿವು ಸಿಕ್ಕಿದ್ದಲ್ಲಿ 08029510900 & 8904241100 ಕರೆ ಮಾಡಿ ಮಾಹಿತಿ ನೀಡಲು ಮನವಿ ಮಾಡಲಾಗಿದೆ. ಆರೋಪಿ ಸುಳಿವು ಕೊಟ್ಟವರಿಗೆ 10 ಲಕ್ಷ ರೂ. ನಗದು ಬಹುಮಾನ ನೀಡುವುದಕ್ಕೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಮುಸಾವೀರ್ ಹುಸೇನ್ ಶಾಜೀಬ್ ಹಾಗೂ ಅಬ್ದುಲ್ ಮತೀನ್ ತಾಹಾ ಇಬ್ಬರ ಫೋಟೋವನ್ನು ರಿಲೀಸ್​ ಮಾಡಿ ತಲಾ 10 ಲಕ್ಷ ರೂಪಾಯಿ ನಗದು ಬಹುಮಾನ ಘೋಷಿಸಿದೆ.

publive-image

ಕಳೆದ ಮಾರ್ಚ್‌ 1ರಂದು ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಸಂಭವಿಸಿತ್ತು. ಮಧ್ಯಾಹ್ನ 1 ಗಂಟೆಗೆ ಕೆಫೆಗೆ ಬಂದ ಆರೋಪಿ ಸ್ಫೋಟಕ ಬಾಂಬ್ ಇಟ್ಟು ಹೋಗಿದ್ದ. ಸಿಸಿಟಿವಿಯಲ್ಲಿ ಬಾಂಬ್ ಇಟ್ಟು ಹೋದವನ ದೃಶ್ಯ ಸೆರೆಯಾಗಿದ್ದು, ಆರೋಪಿಯ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ತೀವ್ರ ಹುಡುಕಾಟದ ಜೊತೆಗೆ ಇಬ್ಬರು ಪ್ರಮುಖ ಆರೋಪಿಯ ಸುಳಿವು ಕೊಟ್ಟವರಿಗೆ ಎನ್‌ಐಎ 10 ಲಕ್ಷ ರೂಪಾಯಿ ನಗದು ಬಹುಮಾನವನ್ನು ಘೋಷಣೆ ಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment