/newsfirstlive-kannada/media/post_attachments/wp-content/uploads/2025/07/BNG-TERROR.jpg)
ರಾಜ್ಯದಲ್ಲಿ ಎನ್ಐಎ ಅಧಿಕಾರಿಗಳು ಭಾರೀ ದೊಡ್ಡ ಪ್ರಮಾಣದಲ್ಲಿ ದಾಳಿ ಮಾಡಿದ್ದಾರೆ. ದುರಂತ ಏನಂದ್ರೆ ದೇಶ ಕಾಯ್ತೀವಿ ಅಂತ ಸಂವಿಧಾನದ ಮೇಲೆ ಪ್ರಮಾಣ ಮಾಡಿದ ಪೊಲೀಸ್ ಅಧಿಕಾರಿಯೇ ತಾಯ್ನೆಲಕ್ಕೆ ದ್ರೋಹವೆಸಗಿರುವ ಆರೋಪ ಕೇಳಿಬಂದಿದೆ. ಈ ಅಧಿಕಾರಿಯ ಜೊತೆಗೆ ಭಯೋತ್ಪಾದನೆಗೆ ಸಹಾಯ ಮಾಡೋ ಕೆಲ ಶಂಕಿತರನ್ನ ಎನ್ಐಎ ಅರೆಸ್ಟ್ ಮಾಡಿದೆ.
ರಾಜ್ಯದಲ್ಲಿ ಉಗ್ರವಾದಿಗಳನ್ನು ಹೆಡೆಮುರಿಕಟ್ಟುವ ಕಾರ್ಯ ಭರ್ಜರಿಯಾಗಿ ನಡೆಯುತ್ತಿದೆ. 2008ರ ಜುಲೈ 25ರಂದು ಬೆಂಗಳೂರಲ್ಲಿ 9 ಸರಣಿ ಬಾಂಬ್ ಸ್ಫೋಟದ ಹಿಂದೆ ಎನ್ಐಎ ಅಧಿಕಾರಿಗಳು ಬಿದ್ದಿದ್ದಾರೆ. ಅವತ್ತಿನಿಂದ ಇವತ್ತಿನವರೆಗೂ ಒಬ್ಬರಾದ್ನೇಲೆ ಒಬ್ಬರನ್ನು ಲಾಕ್ ಮಾಡ್ತಿರುವ ಎನ್ಐಎ ವಿಚಾರಣೆ ಮಾಡ್ತಾ ಬಂದಿದೆ. ಈಗ ಈ ತನಿಖೆ ನೆಕ್ಸ್ಟ್ ಲೆವೆಲ್ಗೆ ಹೋಗಿದೆ.
ಇದನ್ನೂ ಓದಿ: ಅತಿಯಾಗಿ ಮೊಬೈಲ್ ಬಳಸುವ ಮುನ್ನ ಎಚ್ಚರ.. ಆರೋಗ್ಯಕ್ಕೆ ಅಪಾಯ ಗ್ಯಾರಂಟಿ..!
ಎನ್‌ಐಎನಿಂದ ಭರ್ಜರಿ ಕಾರ್ಯಾಚರಣೆ.. ಒಟ್ಟು 5 ಕಡೆ ದಾಳಿ
ಬೆಂಗಳೂರು ನಗರದ ಪರಪ್ಪನ ಅಗ್ರಹಾರ ಜೈಲಿನಿಂದಲೇ ರಾಷ್ಟ್ರದಾದ್ಯಂತ ಉಗ್ರ ಕೃತ್ಯ ನಡೆಸಲು ಸಂಚು ರೂಪಿಸಿದ ಗಂಭೀರ ಪ್ರಕರಣ ಸಂಬಂಧ ಬೆಂಗಳೂರು ಮತ್ತು ಕೋಲಾರದ ಐದು ಕಡೆ ದಾಳಿ ಎನ್ಐಎ ದಾಳಿ ನಡೆಸಿದೆ. ಸಿಎಆರ್ ಪೊಲೀಸ್ ಅಧಿಕಾರಿ ಚಾಂದ್ ಪಾಷಾ, ಉಗ್ರ ಜುನೈದ್ ತಾಯಿ ಅನೀಸ್ ಫಾತಿಮಾ, ಜೈಲಿನ ಮನೋವೈದ್ಯ ನಾಗರಾಜ್ ಸೇರಿದಂತೆ ಮೂವರನ್ನ ರಾಷ್ಟ್ರೀಯ ತನಿಖಾ ದಳ ಬಂಧಿಸಿದೆ. ಇನ್ನು ಮತ್ತೊಬ್ಬ ಉಗ್ರ ಜನೈದ್ ಪರಾರಿಯಾಗಿದ್ದಾನೆ.
ಮೂವರು ಶಂಕಿತ ಉಗ್ರರ ಬಂಧನ!
ಟಿ.ನಾಸೀರ್ 2008ರ ಜುಲೈ 25ರಂದು ಬೆಂಗಳೂರಿನ ಸುಮಾರು 9 ಕಡೆ ಸರಣಿ ಬಾಂಬ್ ಸ್ಫೋಟದ ರೂವಾರಿ. ಇವನಿಗೆ ಸದ್ಯ ಅರೆಸ್ಟ್ ಆಗಿರೋ ಶಂಕಿತರು ಜೈಲಿನ ಒಳಗೆ ಹಣ ಹಾಗೂ ಹೊರಗಿನ ಮಾಹಿತಿ ನೀಡುತ್ತಿದ್ದರಂತೆ. 2008ರ ಸರಣಿ ಬಾಂಬ್ ಸ್ಫೋಟ ಕೇಸ್ನ ಮತ್ತೊಬ್ಬ ಉಗ್ರ ಜುನೈದ್ ಅಹ್ಮದ್ ವಿದೇಶಕ್ಕೆ ಎಸ್ಕೇಪ್ ಆಗಿದ್ದ. ಹಾಗೆ ಎಸ್ಕೇಪ್ ಆದ ಜುನೈದ್ಗೆ ಈ ಟಿ.ನಾಸೀರ್ಗೆ ಸಂಪರ್ಕ ಕೊಂಡಿಯಾಗಿ ಶಂಕಿತರು ಕೆಲಸ ಮಾಡ್ತಿದ್ದರಂತೆ. ASI ಚಾಂದ್ ಪಾಷಾ, ಮನೋವೈದ್ಯ ನಾಗರಾಜ್, ಜುನೈದ್ ಅಹ್ಮದ್ ತಾಯಿ ಫಾತಿಮಾ ಜೊತೆ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ.
ಫಾತಿಮಾ ಜುನೈದ್ನಿಂದ ಮಾಹಿತಿ ಪಡೆದು ಇವರಿಬ್ಬರ ಮೂಲಕ ಉಗ್ರ ಟಿ.ನಾಸೀರ್ಗೆ ಸಂದೇಶ ತಲುಪಿಸ್ತಿದ್ದಳಂತೆ. 2022ರಲ್ಲಿ ಎಎಸ್ಐ ಚಾಂದ್ ಪಾಷಾ, ಉಗ್ರ ನಾಸೀರ್ನನ್ನ ಕೋರ್ಟ್ಗೆ ಕರೆದೊಯ್ಯುವ ವೇಳೆ ಎಸ್ಕಾರ್ಟ್ ನೀಡಿದ್ದಲ್ಲದೇ ಹೊರಗಿನ ಉಗ್ರ ಚಟುವಟಿಕೆ ಬಗ್ಗೆ ನಾಸೀರ್ಗೆ ಮಾಹಿತಿ ನೀಡಿದ್ದ. ಈ ಮಾಹಿತಿಯಿಂದ ಟಿ.ನಾಸೀರ್ ಜೈಲೊಳಗೆ ಉಗ್ರ ಸಂಘಟನೆಗೆ ಸಂಚು ರೂಪಿಸಿದ್ದ. ಮಾತ್ರವಲ್ಲದೇ ಅಲ್ಲಿ ನಾಸೀರ್ ನೀಡಿದ ಮಾಹಿತಿಯನ್ನ ಪರಾರಿಯಾಗಿರುವ ಜುನೈದ್ಗೆ ಶಂಕಿತರು ನೀಡುತ್ತಿದ್ರು ಅಂತ ಹೇಳಲಾಗ್ತಿದೆ.
ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಿನ ASI, ಮನೋವೈದ್ಯ ಸೇರಿ ಮೂವರು ಶಂಕಿತ ಭಯೋತ್ಪಾದಕರ ಬಂಧನ
ದಾಳಿ ವೇಳೆ ಆರೋಪಿಗಳ ಮನೆಯಲ್ಲಿದ್ದ ಡಿಜಿಟಲ್ ದಾಖಲೆಗಳು, ನಗದು, ಚಿನ್ನಾಭರಣ ಹಾಗೂ ಕೃತ್ಯಕ್ಕೆ ಸಂಬಂಧಿಸಿದ ದಾಖಲೆಗಳನ್ನ ಜಪ್ತಿ ಮಾಡಲಾಗಿದೆ ಎಂದು ಎನ್ಐಎ ತಿಳಿಸಿದೆ. ಅದೇನೇ ಹೇಳಿ, ಒಬ್ಬ ಪೊಲೀಸ್ ಆಗಿ ಇದ್ಕೊಂಡು. ಹೀಗೆ ಮಾಡಿರೋದು ಎಷ್ಟರ ಮಟ್ಟಿಗೆ ಸರಿ ಅಂತ ಜನ ಛೀ ಥೂ ಅಂತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ