/newsfirstlive-kannada/media/post_attachments/wp-content/uploads/2023/07/Terrorist-2.jpg)
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದರು ಎನ್ನಲಾದ ಆರೋಪದ ಮೇರೆಗೆ ಬಂಧನವಾದ ಐವರು ಶಂಕಿತ ಉಗ್ರರನ್ನು 7 ದಿನ ಸಿಸಿಬಿ ಪೊಲೀಸರ ಕಸ್ಟಡಿಗೆ ನೀಡಿ ಕೋರ್ಟ್ ಆದೇಶಿಸಿದೆ.
ರಾಜ್ಯ ಸಿಸಿಬಿ ಪೊಲೀಸರು ಕಾನೂನುಬಾಹಿರ ಚಟುವಟಿಕೆ ನಿಗ್ರಹ ಕಾಯ್ದೆ (UAPA) ಅಡಿ ಕೇಸ್ ದಾಖಲಿಸಿ ಬಂಧಿತ ಶಂಕಿತ ಉಗ್ರರನ್ನು ಎನ್ಐಎ ಕೋರ್ಟ್ ಮುಂದೆ ಹಾಜರುಪಡಿಸಿದ್ರು. ಜತೆಗೆ 15 ದಿನ ಪೊಲೀಸ್ ಕಸ್ಟಡಿಗೆ ನೀಡಿ ಎಂದು ಮನವಿ ಮಾಡಿದ್ರು. ಕೊನೆಗೂ ವಿಚಾರಣೆ ನಡೆಸಿದ ಎನ್ಐಎ ಕೋರ್ಟ್ ನ್ಯಾಯದೀಶ ಗಂಗಾಧರ್ ನೇತೃತ್ವದ ಏಕಸದಸ್ಯ ಪೀಠ ಶಂಕಿತ ಉಗ್ರರನ್ನು 7 ದಿನ ಸಿಸಿಬಿ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ