ರಾಮೇಶ್ವರಂ ಕೆಫೆ ಸ್ಫೋಟ; ಶಂಕಿತ ಆರೋಪಿಯ ಮತ್ತೆ 4 ಫೋಟೋ ರಿಲೀಸ್ ಮಾಡಿದ NIA

author-image
Ganesh
Updated On
ಕೆಫೆ ಬ್ಲಾಸ್ಟ್​ಗೂ ಮುನ್ನ ಟ್ರಯಲ್​ ಬ್ಲಾಸ್ಟ್​.. NIA ತನಿಖಾ ತಂಡಕ್ಕೆ ಸಿಕ್ತು ಬಾಂಬರ್​ನ ಹಂತ ಹಂತದ ಮಾಹಿತಿ 
Advertisment
  • ಮಾರ್ಚ್​ ಒಂದರಂದು ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ನಡೆದಿತ್ತು
  • ನಿನ್ನೆ ಎರಡು ವಿಡಿಯೋಗಳನ್ನು ರಿಲೀಸ್ ಮಾಡಿದ್ದ ಎನ್​ಐಎ ತಂಡ
  • ಇಂದಿನಿಂದ ರಾಮೇಶ್ವರಂ ಕೆಫೆ ಸಾರ್ವಜನಿಕರಿಗೆ ಮುಕ್ತವಾಗಿದೆ

ಬೆಂಗಳೂರು: ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಪ್ರಕರಣದ ತನಿಖೆ ಮುಂದುವರಿಸಿರುವ ಎನ್​ಐಎ ಅಧಿಕಾರಿಗಳು ಶಂಕಿತ ಆರೋಪಿಯ 4 ಫೋಟೋಗಳನ್ನು ರಿಲೀಸ್ ಮಾಡಿದೆ.

ಈಗಾಗಲೇ ಶಂಕಿತ ಆರೋಪಿ ಪತ್ತೆಯಾಗಿದ್ದರೆ 10 ಲಕ್ಷ ರೂಪಾಯಿ ಬಹುಮಾನ ನೀಡೋದಾಗಿ ಘೋಷಣೆ ಮಾಡಿದೆ. ಇದೀಗ ಸಾರ್ವಜನಿಕರು ಗುರುತಿಸಲು ಸುಲಭವಾಗಲಿ ಎಂದು ಮತ್ತೆ 4 ಫೋಟೋಗಳನ್ನು ಹಂಚಿಕೊಂಡಿದೆ.

ಈ ಫೋಟೋದಲ್ಲಿರುವ ವ್ಯಕ್ತಿ ಎಲ್ಲಿಯಾದರೂ ಪತ್ತೆಯಾದರೆ ನಮಗೆ ಮಾಹಿತಿ ನೀಡಿ ಎಂದು ಮನವಿ ಮಾಡಿಕೊಂಡಿದೆ. ನಿನ್ನೆಯಷ್ಟೇ ಎರಡು ವಿಡಿಯೋಗಳನ್ನು ಎನ್​ಐಎ ಅಧಿಕಾರಿಗಳು ರಿಲೀಸ್ ಮಾಡಿದೆ. ವಿಡಿಯೋ ಫೋಟೋಗಳನ್ನು ರಿಲೀಸ್ ಮಾಡುವುದರ ಜೊತೆಗೆ ಫೋನ್ ನಂಬರ್ ಹಾಗೂ ಇ-ಮೇಲ್ ಐಡಿಯನ್ನೂ ನೀಡಿದೆ.

ಮಾರ್ಚ್​ ಒಂದರಂದು ಬೆಂಗಳೂರಿನ ರಾಮೇಶ್ವರಂ ಕೆಫೆಯ ಡಸ್ಟ್​​ಬಿನ್​ನಲ್ಲಿ ಬಾಂಬ್ ಇಟ್ಟು ಸ್ಫೋಟಿಸಲಾಗಿದೆ. ಈ ಕೃತ್ಯದಿಂದ 9 ಮಂದಿ ಗಾಯಗೊಂಡಿದ್ದರು. ಇಂದಿನಿಂದ ಮತ್ತೆ ರಾಮೇಶ್ವರಂ ಕೆಫೆಯು ಗ್ರಾಹಕರಿಗೆ ಮುಕ್ತವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment