/newsfirstlive-kannada/media/post_attachments/wp-content/uploads/2025/06/NIA_KERALA.jpg)
ಕೇರಳದ ಪಿಎಫ್‌ಐ ಹಿಟ್ ಲಿಸ್ಟ್ನಲ್ಲಿ ಬರೋಬ್ಬರಿ 977 ಹೆಸರುಗಳು ಇವೆ. ಜಡ್ಜ್ಗಳು, ರಾಜಕೀಯ ಪಕ್ಷಗಳ ಕಾರ್ಯಕರ್ತರ ಜೀವ ತೆಗೆಯಲು ಪಟ್ಟಿಯನ್ನು ಪಿಎಫ್ಐ ಸಿದ್ಧಪಡಿಸಿತ್ತು ಎಂಬ ಅಘಾತಕಾರಿ ಅಂಶ ಇದೀಗ ಬೆಳಕಿಗೆ ಬಂದಿದೆ. ಎನ್‌ಐಎನಿಂದ ಈ ಸ್ಫೋಟಕ ಮಾಹಿತಿ ಕೇರಳದ ಎನ್‌ಐಎ ಸ್ಪೆಷಲ್ ಕೋರ್ಟ್ಗೆ ಸಲ್ಲಿಕೆ ಮಾಡಲಾಗಿದೆ.
ಪಾಲಕ್ಕಾಡ್ ಶ್ರೀನಿವಾಸನ್ ಜೀವ ತೆಗೆದ ಕೇಸ್ನಲ್ಲಿ ಆರೋಪಿಗಳ ಜಾಮೀನು ಅರ್ಜಿಗೆ ಎನ್‌ಐಎ ವಿರೋಧ ವ್ಯಕ್ತಪಡಿಸಿ ಆಕ್ಷೇಪಣೆ ಸಲ್ಲಿಸಿದೆ. ಬಹಳಷ್ಚು ಹಿಟ್ ಲಿಸ್ಟ್ ಪಟ್ಟಿ ಸಿಕ್ಕಿದೆ ಎಂದು ಎನ್‌ಐಎ ಕೋರ್ಟ್ಗೆ ತಿಳಿಸಿದೆ. ಅಘಾತಕಾರಿ ಮಟ್ಟದಲ್ಲಿ ಜನರ ಜೀವ ತೆಗೆಯಲು ಪಟ್ಟಿ ಸಿದ್ಧ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಎನ್‌ಐಎ ಹೇಳಿದೆ. ಪಾಲಕ್ಕಾಡ್ ಶ್ರೀನಿವಾಸನ್ ಪ್ರಕರಣದ ಆರೋಪಿಗಳಾದ ಮೊಹಮ್ಮದ್ ಬಿಲಾಲ್, ರಿಯಾಸುದ್ದೀನ್ ಜಾಮೀನು ಅರ್ಜಿಗೆ ಎನ್‌ಐಎ ವಿರೋಧ ವ್ಯಕ್ತಪಡಿಸಿ, ಸ್ಫೋಟಕ ಮಾಹಿತಿಯನ್ನು ಕೋರ್ಟ್ಗೆ ಸಲ್ಲಿಸಿದೆ.
ಹಿಟ್ ಲಿಸ್ಟ್ನಲ್ಲಿ ನ್ಯಾಯಾಧೀಶರ ಹೆಸರು
ಪಿಎಫ್‌ಐನಲ್ಲಿ ಯಾಱರನ್ನು ಟಾರ್ಗೆಟ್ ಮಾಡಬೇಕೆಂದು ಪಟ್ಟಿ ತಯಾರಿಸುವ ರಿಪೋರ್ಟರ್ ವಿಂಗ್ ಇದೆ. ರಿಪೋರ್ಟರ್ ವಿಂಗ್ನಲ್ಲಿ ಸಿರಾಜುದ್ದೀನ್ ಸದಸ್ಯನಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದ. ರಿಪೋರ್ಟರ್ ವಿಂಗ್ನಿಂದ 240 ಜನರ ಲಿಸ್ಟ್ ರೆಡಿ ಆಗಿತ್ತು. ಕೇರಳದ ಮಾಜಿ ಜಿಲ್ಲಾ ನ್ಯಾಯಾಧೀಶರು ಪಿಎಫ್‌ಐ ಹಿಟ್ ಲಿಸ್ಟ್ನಲ್ಲಿದ್ದಾರೆ ಎಂದು ಎನ್‌ಐಎ ಕೋರ್ಟ್ಗೆ ಹೇಳಿದೆ. ಅಬ್ದುಲ್ ವಹಾಬ್ ಎಂಬ ಮತ್ತೊಬ್ಬ ಆರೋಪಿಯ ವ್ಯಾಲೆಟ್ನಿಂದ ಹಿಟ್ ಲಿಸ್ಟ್ ಸೀಜ್ ಮಾಡಿದ್ದಾಗಿ ಎನ್‌ಐಎ ಹೇಳಿದೆ.
ಇದನ್ನೂ ಓದಿ:ಕಾವೇರಿ ನದಿ ಪಾತ್ರದಲ್ಲಿ ಪ್ರವಾಹ ಭೀತಿ.. ಈ ಪ್ರವಾಸಿ ತಾಣಗಳಿಗೆ ನಿರ್ಬಂಧ
ವ್ಯಾಲಿ ಕ್ಯಾಂಪಸ್ನಲ್ಲಿ ಶಸ್ತ್ರಾಸ್ತ್ರ ತರಬೇತಿ
ಮತ್ತೊಬ್ಬ ಪರಾರಿಯಾದ ಆರೋಪಿ ಅಬ್ದುಲ್ ತಹಾ ಮನೆಯಲ್ಲಿ 500 ಮಂದಿಯ ಹಿಟ್ ಲಿಸ್ಟ್ ವಶಕ್ಕೆ ಪಡೆಯಲಾಗಿದೆ. ಕಾನೂನು, ರಾಜಕೀಯ, ಕಾರ್ಯಕರ್ತರು ಸೇರಿ ವಿವಿಧ ವಲಯಗಳ ಜನರು ಪಿಎಫ್ಐ ಹಿಟ್ ಲಿಸ್ಟ್ನಲ್ಲಿದ್ದಾರೆ. ರಿಪೋರ್ಟರ್ ವಿಂಗ್, ಇಂಟಲಿಜೆನ್ಸ್ ಮಾಹಿತಿಯನ್ನು ಪಿಎಫ್‌ಐಗಾಗಿ ಸಂಗ್ರಹಿಸಿದೆ. ಟಾರ್ಗೆಟ್ ಆಗಿದ್ದ ವ್ಯಕ್ತಿಗಳ ವೈಯಕ್ತಿಕ ಮಾಹಿತಿಗಳನ್ನು ಸಂಗ್ರಹಿಸಿದೆ. ಕೇರಳದ ಅಲುವ ಪೆರಿಯಾರ್ ವ್ಯಾಲಿ ಕ್ಯಾಂಪಸ್ನಲ್ಲಿ ಶಸ್ತ್ರಾಸ್ತ್ರ ತರಬೇತಿ ನೀಡಿದೆ ಎಂದು ಎನ್‌ಐಎ ನಿಂದ ದಾಖಲೆ ಸಲ್ಲಿಸಿ ವಾದ ಮಾಡಲಾಗಿದೆ. ಆರೋಪಿಗಳ ವಿರುದ್ಧದ ಆರೋಪಗಳು ಗಂಭೀರ ಸ್ವರೂಪದ್ದಾಗಿವೆ. ಹೈಪ್ರೊಫೈಲ್ ಟಾರ್ಗೆಟ್ಗಳನ್ನು ಮಾಡಿ ಹತ್ಯೆಗೆ ಸಂಚು ರೂಪಿಸಿದ್ದರು ಎಂದು ಎನ್‌ಐಎ ವಾದ ಮಾಡಿದೆ.
ತಾವು ಮುಗ್ದರು, ಅಮಾಯಕರು, ತಮ್ಮ ವಿರುದ್ಧದ ಆರೋಪಗಳು ಸುಳ್ಳು ಎಂದು ಆರೋಪಿಗಳ ಪರ ವಕೀಲರ ವಾದ ಮಂಡಿಸಿದ್ದರು. ಆದರೇ, ಆರೋಪಗಳು ಗಂಭೀರ ಸ್ವರೂಪದ್ದಾಗಿದ್ದು, ಮೇಲ್ನೋಟಕ್ಕೆ ಸತ್ಯಾಂಶ ಕಂಡು ಬಂದಿದೆ ಎಂದು ಕೋರ್ಟ್ ಹೇಳಿದೆ. ಹೀಗಾಗಿ ಆರೋಪಿಗಳಿಗೆ ಜಾಮೀನು ನಿರಾಕರಿಸಿ ಎನ್‌ಐಎ ಸ್ಪೆಷಲ್ ಕೋರ್ಟ್ ಜಡ್ಜ್ ಮೋಹನ್ ದಾಸ್ ಆದೇಶ ನೀಡಿದ್ದಾರೆ. ಆರೋಪಿಗಳಿಗೆ ಜಾಮೀನು ನೀಡಿದರೇ, ರಿಸ್ಕ್ ಎದುರಾಗುತ್ತೆ ಎಂದು ಕೋರ್ಟ್ ಹೇಳಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ