ಭರ್ಜರಿ ಉದ್ಯೋಗಗಳಿಗೆ ಅರ್ಜಿ ಆಹ್ವಾನಿಸಿದ NIACL.. ಒಟ್ಟು ಎಷ್ಟು ಹುದ್ದೆಗಳು ಇವೆ?

author-image
Bheemappa
Updated On
​IT ಕಂಪನಿಗಳೂ ಒಂದೇ ಅಲ್ಲ.. ಬ್ಯಾಂಕ್​​ನಲ್ಲೂ ಕೆಲಸ ಸಿಗ್ತಿಲ್ಲ.. ಉದ್ಯೋಗಕ್ಕಾಗಿ ಕಾಯ್ತಿರೋರಿಗೆ ಶಾಕ್..!
Advertisment
  • ಯಾವುದೇ ಪದವಿ ಪಡೆದ್ರು ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು
  • ಪ್ರಮುಖ ದಿನಾಂಕಗಳು ಸೇರಿದಂತೆ ಇತರೆ ಮಾಹಿತಿ ನೀಡಲಾಗಿದೆ
  • ಈ ಉದ್ಯೋಗಗಳಿಗೆ ಯಾರು ಯಾರು ಅಪ್ಲೇ ಮಾಡಬಹುದು?

ದಿ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿ. (NIACL) ಉದ್ಯೋಗಗಳನ್ನು ಭರ್ತಿ ಮಾಡಲು ಹೊಸ ಅರ್ಜಿಗಳನ್ನು ಆಹ್ವಾನ ಮಾಡಿದೆ. ಯಾರಿಗೆ ಇದರ ಅವಶ್ಯಕತೆ ಇದೆಯೋ ಅಂತಹ ಅಭ್ಯರ್ಥಿಗಳು ಇವುಗಳಿಗೆ ಪ್ರಯತ್ನಿಸಬಹುದು. ಈಗಾಗಲೇ ಅರ್ಜಿಗಳು ಆರಂಭವಾಗಿದ್ದು ಆನ್​ಲೈನ್​ ಮೂಲಕ ಉದ್ಯೋಗಾಕಾಂಕ್ಷಿಗಳು ಅರ್ಜಿ ಸಲ್ಲಿಕೆ ಮಾಡಬಹುದು.

ಹಾಫ್​​ಲೈನ್​ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ. ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಶುಲ್ಕ, ಅರ್ಜಿ ಪ್ರಕ್ರಿಯೆ, ಅರ್ಹತಾ ಮಾನದಂಡಗಳು, ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಲಿಂಕ್, ಅಗತ್ಯವಿರುವ ದಾಖಲೆಗಳು, ಪ್ರಮುಖ ದಿನಾಂಕಗಳು ಸೇರಿ ಇತರೆ ಮಾಹಿತಿ ಇಲ್ಲಿ ಇರುತ್ತದೆ. ಸಂಪೂರ್ಣ ಮಾಹಿತಿಗಾಗಿ ಇಲಾಖೆಯ ವೆಬ್​ಸೈಟ್​ಗೆ (newindia.co.in) ಭೇಟಿ ನೀಡಿ.

ಉದ್ಯೋಗದ ಹೆಸರು- ಅಪ್ರೆಂಟಿಸ್​

ಒಟ್ಟು ಉದ್ಯೋಗಗಳು- 500

ಶೈಕ್ಷಣಿಕ ಅರ್ಹತೆ

ಯಾವುದೇ ಪದವಿ

ಇದನ್ನೂ ಓದಿ:ಬಾಗಲಕೋಟೆ; ಮೆಡಿಕಲ್ ಆಫೀಸರ್​, ನರ್ಸ್​ ಉದ್ಯೋಗಗಳಿಗೆ ಅರ್ಜಿ ಆಹ್ವಾನ

publive-image

ಅರ್ಜಿ ಶುಲ್ಕ ಎಷ್ಟು ಇದೆ?

ಜನರಲ್, ಒಬಿಸಿ ಅಭ್ಯರ್ಥಿಗಳು- 944 ರೂಪಾಯಿ ಜಿಎಸ್​ಟಿ ಸೇರಿ
ಎಲ್ಲ ಮಹಿಳಾ ಅಭ್ಯರ್ಥಿಗಳು- 708 ರೂಪಾಯಿ ಜಿಎಸ್​ಟಿ ಸೇರಿ
ಎಸ್​​ಸಿ. ಎಸ್​​ಟಿ ಅಭ್ಯರ್ಥಿಗಳು- 708 ರೂಪಾಯಿ ಜಿಎಸ್​ಟಿ ಸೇರಿ
ಪಿಡಬ್ಲುಬಿಡಿ ಅಭ್ಯರ್ಥಿಗಳು- 472 ರೂಪಾಯಿ ಜಿಎಸ್​ಟಿ ಸೇರಿ

ಆಯ್ಕೆ ಪ್ರಕ್ರಿಯೆ-

ಲಿಖಿತ ಪರೀಕ್ಷೆ
ಪ್ರಾದೇಶಿಕ ಭಾಷಾ ಪರೀಕ್ಷೆ

ಈ ಹುದ್ದೆಗಳ ಪ್ರಮುಖ ದಿನಾಂಕ
ಅರ್ಜಿ ಸಲ್ಲಿಕೆ ಮಾಡಲು ಆರಂಭದ ದಿನಾಂಕ- 06 ಜೂನ್ 2025
ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನಾಂಕ- 20 ಜೂನ್ 2025
ತಾತ್ಕಾಲಿಕವಾಗಿ ಪರೀಕ್ಷೆ ನಡೆಸುವ ದಿನಾಂಕ- 26 ಜೂನ್ 2025

ರಿಜಿಸ್ಟ್ರೇಷನ್​​ಗಾಗಿ- https://nats.education.gov.in/student_register.php

ಅರ್ಜಿ ಸಲ್ಲಿಕೆಗೆ- https://bfsissc.com/nia.php

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment