/newsfirstlive-kannada/media/post_attachments/wp-content/uploads/2024/12/JOBS_CWC.jpg)
ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ದಿ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿ. (NIACL) ಅರ್ಜಿಗಳನ್ನು ಆಹ್ವಾನ ಮಾಡಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಇಂದಿನಿಂದ ಅರ್ಜಿ ಸಲ್ಲಿಕೆ ಮಾಡಬಹುದು. ಈ ಹಿಂದೆ ಉದ್ಯೋಗಕ್ಕೆ ಸಂಬಂಧಿಸಿದ ನೋಟಿಫಿಕೆಶನ್ ಅನ್ನು ಇಲಾಖೆ ಬಿಡುಗಡೆ ಮಾಡಿತ್ತು. ಅದರಲ್ಲಿರುವ ಮಾಹಿತಿಯಂತೆ ಇಂದು ಅರ್ಜಿ ಆರಂಭಗೊಂಡಿವೆ.
ಭಾರತದಲ್ಲಿನ ಅತಿದೊಡ್ಡ ಸಾಮಾನ್ಯ ವಿಮಾ ಕಂಪನಿಯಾಗಿರುವ ಎನ್ಐಎಸಿಎಲ್ ಪ್ರತಿ ಬಾರಿಯಂತೆ ಈ ಬಾರಿಯು ವಿವಿಧ ಹುದ್ದೆಗಳಿಗನ್ನು ನೇಮಕ ಮಾಡುತ್ತಿದೆ. ಅಭ್ಯರ್ಥಿಗಳು ಸಂಸ್ಥೆಯ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ಅಭ್ಯರ್ಥಿಗಳಿಗೆ ಇದು ಸುವರ್ಣಾವಕಾಶವಾಗಿದೆ. ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಎರಡು ಹಂತದಲ್ಲಿ ನಡೆಯುತ್ತದೆ. ಈ ಕುರಿತು ಮಾಹಿತಿ ಇಲ್ಲಿದೆ.
ಜಾತಿ ಆಧಾರದಲ್ಲಿ ಹುದ್ದೆಗಳ ವಿಂಗಡಣೆ
- ಪರಿಶಿಷ್ಟ ಜಾತಿ- 91
- ಪರಿಶಿಷ್ಟ ಪಂಗಡ-51
- ಒಬಿಸಿ- 48
- ಎಡಬ್ಲುಎಸ್- 50
- ಜನರಲ್- 260
ಒಟ್ಟು- 500 ಹುದ್ದೆಗಳು ಖಾಲಿ ಇವೆ.
ಉದ್ಯೋಗದ ಹೆಸರು
ಸಹಾಯಕ ಹುದ್ದೆಗಳು
ಇದನ್ನೂ ಓದಿ: ಮಜಗಾನ್ ಡಾಕ್ ಶಿಪ್ ಬಿಲ್ಡರ್ಸ್ ಲಿಮಿಟೆಡ್ನಲ್ಲಿ 200ಕ್ಕೂ ಅಧಿಕ ಹುದ್ದೆಗಳು.. ಇಂದೇ ಅರ್ಜಿ ಸಲ್ಲಿಸಿ
ಶೈಕ್ಷಣಿಕ ಅರ್ಹತೆ ಏನು ಕೇಳಿದ್ದಾರೆ?
ವಿಶ್ವವಿದ್ಯಾನಿಲಯದಿಂದ ಯಾವುದೇ ವಿಭಾಗದಲ್ಲಿ ಪದವಿ
ವೇತನ ಶ್ರೇಣಿ
22,405 ರಿಂದ 40,000 ರೂಪಾಯಿ
ವಯೋಮಿತಿ
21 ರಿಂದ 30 ವರ್ಷದ ಒಳಗಿನ ಅಭ್ಯರ್ಥಿಗಳಿಗೆ ಅವಕಾಶ
ಅರ್ಜಿ ಶುಲ್ಕ ಎಷ್ಟು ಇದೆ..?
ಜನರಲ್, ಇತರೆ ಅಭ್ಯರ್ಥಿಗಳು- 850 ರೂಪಾಯಿಗಳು
ಎಸ್ಸಿ, ಎಸ್ಟಿ, ಮಾಜಿ ಸೈನಿಕ- 100 ರೂಪಾಯಿಗಳು
ಆಯ್ಕೆ ಪ್ರಕ್ರಿಯೆ ಹೇಗಿದೆ?
ಪೂರ್ವಭಾವಿ ಪರೀಕ್ಷೆ (Preliminary) (100 ಮಾರ್ಕ್ಸ್)
ಮುಖ್ಯ ಪರೀಕ್ಷೆ (250 ಮಾರ್ಕ್ಸ್)
ಪ್ರಾದೇಶಿಕ ಭಾಷಾ ಪರೀಕ್ಷೆ
ಪ್ರಮುಖ ದಿನಾಂಕಗಳು ಇಲ್ಲಿವೆ
ವಿವರವಾದ ಅಧಿಸೂಚನೆ ರಿಲೀಸ್ ದಿನ- 16 ಡಿಸೆಂಬರ್ 2024
ಅರ್ಜಿ ಆರಂಭ ಆಗುವ ದಿನಾಂಕ- 17 ಡಿಸೆಂಬರ್ 2024
ಅರ್ಜಿ ಸಲ್ಲಿಸಲು ಕೊನೆ ದಿನಾಂಕ- 01 ಜನವರಿ 2025
ವೆಬ್ಸೈಟ್-https://www.newindia.co.in/
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ